ನವದೆಹಲಿ: ಚೀನಾ (China) ಪ್ರವಾಸದಿಂದ ಭಾರತಕ್ಕೆ ಹಿಂತಿರುಗಿದ ವ್ಯಕ್ತಿಯಲ್ಲಿ (Man) ಕೊರೊನಾ (Corona) ಸೋಂಕು ದೃಢಪಟ್ಟಿದ್ದು, ಚೀನಾದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಬಿಎಫ್.7 (BF.7) ಮಾದರಿ ಆಗಿರುವ ಭೀತಿ ಹುಟ್ಟಿಕೊಂಡಿದೆ.
ಶಹಗಂಜ್ ಪ್ರದೇಶದ ವ್ಯಕ್ತಿ ಡಿಸೆಂಬರ್ 23ರಂದು ಚೀನಾದಿಂದ ಆಗ್ರಾಗೆ ಮರಳಿದ್ದರು. ಬಳಿಕ ಅವರು ಖಾಸಗಿ ಪ್ರಯೋಗಾಲಯದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಭಾನುವಾರ ಅವರ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದೆ. ವ್ಯಕ್ತಿಯಲ್ಲಿ ಬಿಎಫ್.7 ರೂಪಾಂತರಿ ಇರುವ ಭೀತಿಯಿದ್ದು, ಇದೀಗ ವ್ಯಕ್ತಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಈಗ ಗಂಟಲ ದ್ರವದ ಮಾದರಿಯನ್ನು ಜಿನೋಮ್ ಸ್ವಿಕ್ವೆನ್ಸ್ ಲ್ಯಾಬ್‌ಗೆ ಕಳುಹಿಸಲಾಗಿದೆ.
Advertisement
Advertisement
ಸೋಂಕಿತ ವ್ಯಕ್ತಿಯ ಮನೆಯನ್ನು ಸೀಲ್ ಮಾಡಲಾಗಿದೆ. ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ವೈರಸ್ ಹರಡುವುದನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಸೋಂಕಿತ ವ್ಯಕ್ತಿಯನ್ನು ವೈದ್ಯಾಧಿಕಾರಿಗಳು ಚಿಕಿತ್ಸೆ ಹಾಗೂ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಇನ್ನುಮುಂದೆ ಬೇಕಾಬಿಟ್ಟಿ ರಸ್ತೆ ಅಗೆದರೆ ಬಿಬಿಎಂಪಿ ಎಂಜಿನಿಯರ್‌ಗಳ ಸಂಬಳ ಕಟ್
Advertisement
Advertisement
ಚೀನಾದಲ್ಲಿ ಈ ತಿಂಗಳು ತೀವ್ರವಾಗಿ ಕೋವಿಡ್ ಪ್ರಕರಣಗಳ ಏರಿಕೆ ಕಾಣುತ್ತಿರುವುದರಿಂದ ಭಾರತ ಮುಂಜಾಗೃತಾ ಕ್ರಮವನ್ನು ಕೈಗೊಳ್ಳಲು ಈಗಾಗಲೇ ಪ್ರಾರಂಭಿಸಿದೆ. ಚೀನಾಗಿಂತಲೂ ಭಾರತದಲ್ಲಿ ಉತ್ತಮವಾಗಿ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಸಲಾಗಿರುವುದರಿಂದ ಹೆಚ್ಚಿನ ಅಪಾಯವಿಲ್ಲ, ಜನರು ಭಯಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ದಂಪತಿ ಪಾರು- ಸ್ಥಳೀಯರ ಆಕ್ರೋಶ