ಹೈ ಸೀಸ್ ಒಪ್ಪಂದ (High Seas Treaty) ಎಂದು ಕರೆಯಲ್ಪಡುವ ರಾಷ್ಟ್ರೀಯ ನ್ಯಾಯವ್ಯಾಪ್ತಿಯ ಆಚೆಗಿನ ಜೀವವೈವಿಧ್ಯ ಒಪ್ಪಂದವನ್ನು (ಬಿಬಿಎನ್‍ಜೆ) ಅಂಗೀಕರಿಸಲು ಜು.2 ರಂದು ಭಾರತ (India) ಒಪ್ಪಿಗೆ ನೀಡಿದೆ. ಇದು ರಾಷ್ಟ್ರೀಯ ನ್ಯಾಯವ್ಯಾಪ್ತಿಗೆ ಒಳಪಡದ ಸಮುದ್ರದ ಸಂರಕ್ಷಣೆಗೆ ಅವಕಾಶ ನೀಡುತ್ತದೆ ಮತ್ತು ಅದರ ಅನುಷ್ಠಾನವನ್ನು ಭೂ ವಿಜ್ಞಾನ ಸಚಿವಾಲಯ ಮೇಲ್ವಿಚಾರಣೆ ಮಾಡುತ್ತದೆ. ಈ ಮೂಲಕ ಭಾರತ ಸುಸ್ಥಿರ ಅಭಿವೃದ್ಧಿಗೆ ಕೊಡುವ ಬದ್ಧತೆಯನ್ನು ಪುನರುಚ್ಚರಿಸಿದೆ.
ಹೈ ಸೀಸ್ ಎಂದರೇನು?
Advertisement
ಯಾವುದೇ ದೇಶದ ವ್ಯಾಪ್ತಿಗೆ ಸೇರದ ಸಮುದ್ರದ ಭಾಗಗಳನ್ನು ಎತ್ತರದ ಸಮುದ್ರಗಳು ಎಂದು ಕರೆಯಲಾಗುತ್ತದೆ. ಇದು ದೇಶದ ವಿಶೇಷ ಆರ್ಥಿಕ ವಲಯವನ್ನು ಮೀರಿದ ಪ್ರದೇಶವಾಗಿದೆ. ಈ ಸಮುದ್ರಗಳಲ್ಲಿನ ಸಂಪನ್ಮೂಲಗಳ ನಿರ್ವಹಣೆ ಮತ್ತು ರಕ್ಷಣೆಗೆ ಯಾವುದೇ ದೇಶವು ಜವಾಬ್ದಾರಿ ಹೊಂದಿರುವುದಿಲ್ಲ.
Advertisement
Advertisement
ಹೈ ಸೀಸ್ ಒಪ್ಪಂದ ಎಂದರೇನು?
Advertisement
ರಾಷ್ಟ್ರೀಯ ನ್ಯಾಯವ್ಯಾಪ್ತಿಯ ಆಚೆಗಿನ ಪ್ರದೇಶಗಳ ಸಮುದ್ರ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ಒಪ್ಪಂದ ಎಂದು ಕರೆಯಲಾಗುತ್ತದೆ. ಇದು ಸಾಗರದ ಪರಿಸರ ರಕ್ಷಣೆಗಾಗಿ ಮಾಡಲಾದ ಅಂತರರಾಷ್ಟ್ರೀಯ ಕಾನೂನಾಗಿದೆ.
ಈ ಒಪ್ಪಂದವನ್ನು 2023 ರಲ್ಲಿ ಮಾತುಕತೆ ನಡೆಸಲಾಯಿತು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಯಾವುದೇ ದೇಶದ ರಾಷ್ಟ್ರೀಯ ನ್ಯಾಯವ್ಯಾಪ್ತಿಯ ಹೊರಗಿನ ಸಾಗರ ನೀರಿನಲ್ಲಿ ಜೀವವೈವಿಧ್ಯ ಮತ್ತು ಇತರ ಸಮುದ್ರ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆ.
ಹೈ ಸೀಸ್ ಒಪ್ಪಂದದ ಗುರಿ
ಹೈ ಸೀಸ್ ಒಪ್ಪಂದವು 2030 ರ ವೇಳೆಗೆ 30%ನಷ್ಟು ಸಮುದ್ರ ಜೀವಿಗಳ ಆವಾಸಸ್ಥಾನಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಗುರಿ ಸಾಧನೆಗೆ ಹಲವಾರು ಹೊಸ ಕಾರ್ಯವಿಧಾನಗಳ ಜಾರಿಗೆ ಯೋಜಿಸಲಾಗಿದೆ.
ಒಪ್ಪಂದದ ಪ್ರಮುಖ ಅಂಶಗಳು
ಸಾಗರ ಸಂರಕ್ಷಿತ ಪ್ರದೇಶಗಳು ಮತ್ತು ಸೂಕ್ಷ್ಮ ಜೀವವೈವಿಧ್ಯ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಕ್ರಮವಹಿಸುವುದು. ಈ ಬಗ್ಗೆ ಯಾವ ದೇಶಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ತಿರ್ಮಾನಿಸುವುದು. ಸಮುದ್ರ ಭಾಗಗಳನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಪ್ರಯತ್ನ ಮಾಡುವುದು.
ಆಳ ಸಮುದ್ರಗಳಲ್ಲಿನ ವಾಣಿಜ್ಯ ಚಟುವಟಿಕೆ ಪರಿಸರ ಪ್ರಭಾವದ ಮೌಲ್ಯಮಾಪನಕ್ಕಾಗಿ ಹೊಸ ನಿಯಮಗಳನ್ನು ರಚಿಸುವುದು. ರಾಷ್ಟ್ರಗಳು ಮತ್ತು ಅಲ್ಲಿನ ಕಂಪನಿಗಳು ಸಾಗರದಲ್ಲಿ ಲಾಭದಾಯಕ ಉದ್ಯಮಗಳನ್ನು ಪ್ರಾರಂಭಿಸುವ ಮೊದಲು ಸಮುದ್ರ ಪರಿಸರ ವ್ಯವಸ್ಥೆಗಳು ಮತ್ತು ಜೀವಿಗಳಿಗೆ ಸಂಭಾವ್ಯ ಹಾನಿಯನ್ನು ನಿರ್ಣಯಿಸಬೇಕು. ಈ ಬಗ್ಗೆ ಸಾರ್ವಜನಿಕವಾಗಿ ವರದಿ ಮಾಡಬೇಕು.
ಶ್ರೀಮಂತ ರಾಷ್ಟ್ರಗಳು ವೈಜ್ಞಾನಿಕ ಮಾಹಿತಿ ಮತ್ತು ತಂತ್ರಜ್ಞಾನಗಳನ್ನು ಬಡ ರಾಷ್ಟ್ರಗಳಿಗೆ ಹಂಚಿಕೊಳ್ಳಬೇಕು. ಈ ಮೂಲಕ ಸಮುದ್ರ ಸಂಪನ್ಮೂಲಗಳನ್ನು ಪ್ರವೇಶಿಸಲು ಮತ್ತು ನೀಲಿ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು.
ಸಾಗರ ತಂತ್ರಜ್ಞಾನದ ವರ್ಗಾವಣೆ, ಮಾಹಿತಿ ವಿನಿಮಯ, ಅರಿವು ಮೂಡಿಸುವುದು ಮತ್ತು ಮೂಲಸೌಕರ್ಯ, ಹಣಕಾಸು ಮತ್ತು ಸಾಗರ ರಕ್ಷಣೆಗೆ ಶ್ರಮಿಸುವ ಸಂಸ್ಥೆಗಳ್ನನು ಬಲಪಡಿಸುವ ಬಗ್ಗೆ ಕ್ರಮವಹಿಸುವ ಅಂಶಗಳು ಈ ಒಪ್ಪಂದದಲ್ಲಿವೆ.
ಹೈ ಸೀಸ್ ಒಪ್ಪಂದಕ್ಕೂ ಮೊದಲಿದ್ದ ಒಪ್ಪಂದದ ಸಮಸ್ಯೆ ಏನು?
1982 ರಲ್ಲಿ ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಆನ್ ದಿ ಲಾ ಆಫ್ ದಿ ಸೀ 16 ನವೆಂಬರ್ 1994 ರಂದು ಜಾರಿಗೆ ಬಂದಿತ್ತು. ಈ ಒಪ್ಪಂದ ರಾಷ್ಟ್ರೀಯ ನ್ಯಾಯವ್ಯಾಪ್ತಿಯ ರೇಖೆಗಳನ್ನು ಸ್ಥಾಪಿಸುತ್ತದೆ. ಈ ಮೂಲಕ ಸಾಗರದಲ್ಲಿ ಮಾನವನ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಸಮುದ್ರ ಪರಿಸರವನ್ನು ಸಂರಕ್ಷಿಸಲು ಎಲ್ಲಾ ದೇಶಗಳನ್ನು ಒತ್ತಾಯಿಸುತ್ತದೆ. ಈ ಒಪ್ಪಂದದ ಷರತ್ತುಗಳು ತೀರದಿಂದ 200 ನಾಟಿಕಲ್ ಮೈಲುಗಳಷ್ಟು ದೂರಕ್ಕೆ ಕೊನೆಗೊಳ್ಳುತ್ತವೆ. ರಾಷ್ಟ್ರೀಯ ನ್ಯಾಯವ್ಯಾಪ್ತಿಯನ್ನು ಮೀರಿದ ಆಳದ ಸಮುದ್ರಗಳಿಗೆ ಇದು ಅನ್ವಯಿಸುವುದಿಲ್ಲ.
ಹೈ ಸೀಸ್ ಒಪ್ಪಂದವು ಈ ಹಿಂದಿನ ಒಪ್ಪಂದದ ಕೊರತೆಗಳನ್ನು ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬುದು ತಜ್ಞರ ಅಭಿಪ್ರಾಯ.
ಹೈ ಸೀಸ್ ಸಂರಕ್ಷಣೆ ಯಾಕೆ ಅಗತ್ಯ?
ಎತ್ತರದ ಸಮುದ್ರ, ಸಾಗರಗಳ 64% ಕ್ಕಿಂತ ಹೆಚ್ಚು ಮತ್ತು ಭೂಮಿಯ ಮೇಲ್ಮೈಯ 50% ಅನ್ನು ಆವರಿಸಿದೆ. ಇದು ಸಮುದ್ರ ಜೀವಿಗಳಿಗೆ ಪ್ರಮುಖವಾಗಿದೆ. ಈ ಭಾಗದಲ್ಲಿ ಸುಮಾರು 270,000 ಸಮುದ್ರ ಜೀವಿಗಳ ಪ್ರಬೇಧಗಳ ನೆಲೆಯಾಗಿದೆ. ಇನ್ನೂ ಅನೇಕವನ್ನು ಕಂಡುಹಿಡಿಯಬೇಕಾಗಿದೆ.
ಹೈ ಸೀಸ್ ಹವಾಮಾನವನ್ನು ನಿಯಂತ್ರಿಸುತ್ತದೆ. ಇಂಗಾಲವನ್ನು ಹೀರಿಕೊಳ್ಳುತ್ತದೆ. ಸಮುದ್ರಾಹಾರ, ಕಚ್ಚಾ ವಸ್ತುಗಳು ಮತ್ತು ಔಷಧೀಯ ಸಂಪನ್ಮೂಲಗಳಂತಹ ಸಂಪನ್ಮೂಲಗಳನ್ನು ಒದಗಿಸುತ್ತದೆ.
ಹೈ ಸೀಸ್ ಎದರಿಸುತ್ತಿರುವ ಅಪಾಯಗಳೇನು?
ಸಮುದ್ರದ ಆಮ್ಲೀಕರಣದಂತಹ ವಿದ್ಯಮಾನಗಳಿಂದ ಸಮುದ್ರ ಸಸ್ಯ ಮತ್ತು ಪ್ರಾಣಿಗಳಿಗೆ ಅಪಾಯವಿದೆ. ಪ್ರಸ್ತುತ ತಾಪಮಾನ ಮತ್ತು ಆಮ್ಲೀಕರಣದ ಪ್ರವೃತ್ತಿಗಳು ಮುಂದುವರಿದರೆ 2100ರ ವೇಳೆಗೆ ಸಾವಿರಾರು ಸಮುದ್ರ ಪ್ರಭೇದಗಳು ಅಳಿವಿಗೆ ಕಾರಣವಾಗಲಿದೆ.
ಸಮುದ್ರದ ತಳದ ಗಣಿಗಾರಿಕೆ, ಶಬ್ದ ಮಾಲಿನ್ಯ, ರಾಸಾಯನಿಕ ಮತ್ತು ತೈಲ ಸೋರಿಕೆ, ಸಂಸ್ಕರಿಸದ ತ್ಯಾಜ್ಯದ ವಿಲೇವಾರಿ (ಆಂಟಿಬಯೋಟಿಕ್ಸ್ ಸೇರಿದಂತೆ), ಅತಿಯಾದ ಮೀನುಗಾರಿಕೆಯಿಂದ ಈ ಸಮುದ್ರ ಭಾಗಗಳು ಆತಂಕದಲ್ಲಿವೆ. ಈ ಬೆದರಿಕೆಗಳ ಹೊರತಾಗಿಯೂ, ಕೇವಲ 1% ನಷ್ಟು ಎತ್ತರದ ಸಮುದ್ರಗಳನ್ನು ಪ್ರಸ್ತುತ ರಕ್ಷಿಸಲಾಗಿದೆ.
ಜೂನ್ 2024 ರವರೆಗೆ, 91 ದೇಶಗಳು ಇಲ್ಲಿಯವರೆಗೆ ಒಪ್ಪಂದಕ್ಕೆ ಸಹಿ ಹಾಕಿವೆ , ಅವುಗಳಲ್ಲಿ 8 ದೇಶಗಳು ಅದನ್ನು ಅನುಮೋದಿಸಿವೆ. 60 ದೇಶಗಳು ಇದನ್ನು ಅನುಮೋದಿಸಿದ 120 ದಿನಗಳ ನಂತರ ಇದು ಕಾನೂನು ಬದ್ಧವಾಗುತ್ತದೆ.