ಲಕ್ನೋ: ಉತ್ತರ ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಮನೆಯಲ್ಲಿ ನಾಯಿ ಸಾಕುವವರಿಗೆ ಕಟ್ಟು ನಿಟ್ಟಿನ ನಿಯಮ ಜಾರಿಗೆ ಮುಂದಾಗಿದ್ದಾರೆ.
Advertisement
ರಾಜ್ಯದಲ್ಲಿನ ಪರಿಸ್ಥಿತಿ ಕುರಿತಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ, ನಾಯಿ ಸಾಕುವವರಿಗೆ ವಿಶೇಷ ಹಾಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮನೆಯಲ್ಲಿ ಸಾಕಿದ ನಾಯಿಗಳನ್ನು ಬೀದಿಗೆ ಕರೆತಂದು ಕೊಳಕು ಮಾಡಬಾರದು. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಹಾನಗರ ಪಾಲಿಕೆ ಹಾಗೂ ಇತರೆ ಜವಾಬ್ದಾರಿಯುತ ಇಲಾಖೆಗಳು ನಾಯಿ ಸಾಕುವವರ ಮೇಲೆ ಗಮನವಿಡಿ. ಅಲ್ಲದೆ ಸಮಯಕ್ಕೆ ಸರಿಯಾಗಿ ನಾಯಿಗಳಿಗೆ ಲಸಿಕೆ ಹಾಕುವುದನ್ನು ಸಹ ಖಚಿತಪಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಿಂದ ಶಾಸಕ ಜಮೀರ್
Advertisement
Advertisement
ಸಾರ್ವಜನಿಕರು ಓಡಾಡುವ ರಸ್ತೆ ಸೇರಿದಂತೆ ತಮ್ಮ ಆಸುಪಾಸು ಯಾರಾದರೂ ತಮ್ಮ ನಾಯಿಯನ್ನು ಶೌಚ ಮಾಡಿಸುವ ಉದ್ದೇಶದಿಂದ ಮನೆಯಿಂದ ಹೊರತಂದು ತಿರುಗಾಡಿಸುವುದು ಕಂಡುಬಂದರೆ ತಕ್ಷಣವೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಕಠಿಣ ನಿಯಮ ಜಾರಿಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ಮನೆ ಮಾಲೀಕಳ ಪ್ರಾಣ ಉಳಿಸಲು ಪರ್ವತ ಸಿಂಹದೊಂದಿಗೆ ಹೋರಾಡಿದ ಶ್ವಾನ
Advertisement
पाञ्चजन्य-Organiser द्वारा आयोजित 'मीडिया महामंथन कॉन्क्लेव-2022' में…. https://t.co/f29GFvscqn
— Yogi Adityanath (@myogiadityanath) May 22, 2022
ಸಾಕು ಪ್ರಾಣಿಯನ್ನು ಹೊರಗೆ ಕರೆದುಕೊಂಡು ಹೋಗುವಾಗ ಸ್ವಚ್ಛತೆ ಜೊತೆಗೆ ರಸ್ತೆಯಲ್ಲಿ ಕಸ ಹಾಕುವವರಿಗೂ ಕೂಡ ಖಡಕ್ ವಾರ್ನಿಂಗ್ ನೀಡಲಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಅಕ್ರಮ ಗೋ ಕಳ್ಳರನ್ನು ಮಟ್ಟಹಾಕಿ ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.