ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಫೇಸ್‍ಬುಕ್ ಚಟಕ್ಕೆ ಬಿದ್ದ ಮಗನಿಂದ ಪೋಷಕರ ಮಾನ ಹರಾಜಾಗಿದೆ.
13 ವರ್ಷದ ಮಗ ಫೇಸ್‍ಬುಕ್‍ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಇದಾದ ಬಳಿಕ `ತೇಜಲ್ ಪಟೇಲ್’ ಹೆಸರಿನ ಖಾತೆಯಿಂದ ಈತನಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಹಿಂದೂ ಮುಂದೂ ನೋಡದೆ ಫ್ರೆಂಡ್ ರಿಕ್ವೆಸ್ಟ್ ಅನ್ನು ಬಾಲಕ ಸ್ವೀಕರಿಸಿದ್ದಾನೆ.
Advertisement
ನಂತರ ತೇಜಲ್ ಪಟೇಲ್ ವ್ಯಕ್ತಿ ತನ್ನ ಅಸಲಿ ಮುಖವಾಡವನ್ನು ತೋರಿಸಿದ್ದಾನೆ. ನಿರಂತರ ಅಶ್ಲೀಲ ಫೋಟೋ ಮತ್ತು ವೀಡಿಯೋವನ್ನು ಕಳುಹಿಸಿ ಆತನನ್ನು ತನ್ನ ಬಲೆಗೆ ಬೀಳಿಸಿದ್ದಾನೆ. ಇದಾದ ಬಳಿಕ ನಿನ್ನ ಅಪ್ಪ-ಅಮ್ಮನ ಸರಸ ಸಲ್ಲಾಪದ ವೀಡಿಯೋ ಕಳುಹಿಸು ಎಂದು ಮೆಸೇಜ್ ಹಾಕಿದ್ದಾನೆ.
Advertisement
ಅಷ್ಟರಲ್ಲಾಗಲೇ ಆತನ ಮಾತಿಗೆ ಮರುಳಾಗಿದ್ದ ಬಾಲಕ ಮೊಬೈಲ್ ನಲ್ಲಿ ತನ್ನ ಪೋಷಕರ ಏಕಾಂತದ ವಿಡಿಯೋವನ್ನು ಸೆಂಡ್ ಮಾಡಿದ್ದಾನೆ. ಈ ವಿಡಿಯೋ ಸಿಕ್ಕಿದ್ದೆ ತಡ ಬಾಲಕನ ಅಪ್ಪನಿಗೆ ವಿಡಿಯೋ ಕಳುಹಿಸಿದ್ದಾನೆ. ಬಳಿಕ ಕರೆ ಮಾಡಿ ಒಂದು ಕೋಟಿ ರೂ. ನೀಡುವಂತೆ ತೇಜಲ್ ಪಟೇಲ್ ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಈ ಹಣ ನೀಡದೇ ಇದ್ದರೆ ವಿಡಿಯೋವನ್ನು ರಿಲೀಸ್ ಮಾಡುತ್ತೇನೆ ಎಂದು ಬ್ಲ್ಯಾಕ್‍ಮೇಲ್ ಮಾಡಲು ಆರಂಭಿಸಿದ್ದಾನೆ.
Advertisement
ಈತನ ಬೇಡಿಕೆ ಕೇಳಿ ಶಾಕ್ ಆದ ಬಳಿಕ ವಿಡಿಯೋ ಹೇಗೆ ಸಿಕ್ಕಿದೆ ಎಂದು ಕೇಳಿದಾಗ ಮಗನೇ ಕಳುಹಿಸಿದ್ದಾನೆ ಎಂದು ತಿಳಿಸಿದ್ದಾನೆ.. ಇದಾದ ಬಳಿಕ ಮಗನನ್ನು ವಿಚಾರಿಸಿ ಖಾತೆ ಪರಿಶೀಲಿಸಿದಾಗ ತೇಜಲ್ ಪಟೇಲ್ ಹೆಸರಿನ ವ್ಯಕ್ತಿ ಫೇಸ್‍ಬುಕ್ ನಲ್ಲಿ ಫ್ರೆಂಡ್ ಆಗಿರುವ ವಿಚಾರ ತಿಳಿದು ಬಂದಿದೆ.
Advertisement
ಈಗ ಬಾಲಕನ ಪೋಷಕರು ಸಿಐಡಿಯಲ್ಲಿ ದೂರು ನೀಡಿದ್ದು, `ತೇಜಲ್ ಪಟೇಲ್’ ಹೆಸರಿನ ಖಾತೆಯನ್ನು ಹೊಂದಿರುವ ವ್ಯಕ್ತಿಯ ಪತ್ತೆಗಾಗಿ ತನಿಖೆ ಆರಂಭವಾಗಿದೆ.
ಖಾತೆ ತೆರೆಯಬಹುದೇ?
ಫೇಸ್‍ಬುಕ್‍ನಲ್ಲಿ 13 ವರ್ಷ ಒಳಗಿನ ಮಕ್ಕಳಿಗೆ ಖಾತೆ ತೆರೆಯಲು ಅನುಮತಿ ಇಲ್ಲ. ಆದರೆ ಮಕ್ಕಳಿಗೆ 13 ವರ್ಷವಾಗಿದ್ದರೆ ಖಾತೆ ತೆರೆಯಬಹುದು ಎಂದು ಫೇಸ್ ಬುಕ್ ಹೇಳಿದೆ.