ಬೆಂಗಳೂರು: ಅಕ್ಕನ ಮನೆಯಲ್ಲಿದ್ದುಕೊಂಡು ಅಕ್ಕಪಕ್ಕದ ಫ್ಲ್ಯಾಟ್‌ಗಳಲ್ಲಿ ಕಳ್ಳತನ ಮಾಡಿ, 65 ಲಕ್ಷ ರೂ. ಕನ್ನ ಹಾಕಿದ್ದವನನ್ನು ಹೆಬ್ಬಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ (West Bengal) ಮೂಲದ ನಿತೇಶ್ ಸುಬ್ಬು ಬಂಧಿತ ಆರೋಪಿ. ಇತ್ತೀಚಿಗೆ ಹೆಬ್ಬಗೋಡಿ ಪೊಲೀಸ್ (Hebbagodi Police) ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ಮೇಲಿಂದ ಮೇಲೆ ಕಳ್ಳತನ ಕೇಸ್‌ಗಳು ವರದಿಯಾಗುತ್ತಿದ್ದವು. ಹೀಗಾಗಿ ಫೀಲ್ಡ್‌ಗಿಳಿದ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದರು.ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ
ಆರೋಪಿ ಅಕ್ಕನ ಫ್ಲ್ಯಾಟ್‌ನಲ್ಲಿ ಉಳಿದುಕೊಂಡಿದ್ದ. ಯಾರು ಇಲ್ಲದಿದ್ದಾಗ ಅಕ್ಕಪಕ್ಕದ ಫ್ಲ್ಯಾಟ್‌ಗಳ ಬೆಲ್ ಮಾಡಿ ಓಡಿ ಹೋಗ್ತಿದ್ದ. ಒಂದು ವೇಳೆ ಬೆಲ್ ಮಾಡಿದಾಗ ಮನೆಗಳ ಬಾಗಿಲು ಓಪನ್ ಮಾಡಿದರೆ ಸೇಫ್. ಫ್ಲ್ಯಾಟ್‌ಗಳ ಡೋರ್ ಓಪನ್ ಮಾಡದೇ ಇದ್ದರೆ ಕಳ್ಳತನ ಮಾಡುತ್ತಿದ್ದ.
ಬೆಲ್ ಹೊಡೆದರೂ ಬಾಗಿಲು ತೆಗೆಯದ ಫ್ಲ್ಯಾಟ್‌ಗಳ ಬಳಿ ಬಂದು ಶೂ, ಅಲ್ಲಿ ಇಲ್ಲಿ ಹುಡುಕಾಡಿದಾಗ ಕೀ ಸಿಕ್ಕಿದರೆ, ಆಗ ಆರಾಮಾಗಿ ಬಾಗಿಲು ತೆಗೆದು ಚಿನ್ನಾಭರಣ ಗುಡಿಸಿ ಗುಂಡಾಂತರ ಮಾಡುತ್ತಿದ್ದ.
ಸದ್ಯ ಹೆಬ್ಬಗೋಡಿ ಪೊಲೀಸರು ಆರೋಪಿ ನಿತೇಶ್‌ನನ್ನು ಬಂಧಿಸಿದ್ದು, 65 ಲಕ್ಷ ರೂ. ಮೌಲ್ಯದ 621 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಪೂರ್ಣಾನಂದಶ್ರೀ ಜೊತೆ ಬಹಿರಂಗ ಚರ್ಚೆಗೆ ಸಿದ್ಧ: ಸವಾಲು ಸ್ವೀಕರಿಸಿದ ಶಿವರಾಜ್ ತಂಗಡಗಿ