ಬೆಂಗಳೂರು: ವನ್ನಾಕ್ರೈ ಸೈಬರ್ ದಾಳಿಗೆ ಭಾರತ ಸೇರಿ ವಿಶ್ವವೇ ತತ್ತರಿಸುತ್ತಿದ್ದರೆ, ಈಗ ಇದೇ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಲು ಹಾಕರ್ಸ್ ಮುಂದಾಗಿದ್ದಾರೆ.
ಹೌದು. ವನ್ನಾಕ್ರೈ ಸೈಬರ್ ದಾಳಿಯಿಂದ ಪಾರಾಗೋದು ಹೇಗೆ ಎಂದು ಇಮೇಲ್ ಗಳಿಗೆ ಮಾಲ್ವೇರ್‍ಗಳ ಲಿಂಕ್ ಕಳುಹಿಸಿ ಹ್ಯಾಕರ್ಸ್ ಗ್ರಾಹಕರ ಕಂಪ್ಯೂಟರ್ ಗಳಿಂದ ದಾಖಲೆಗಳನ್ನು ಕದಿಯುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
Advertisement
ಈ ಕೆಳಗಿನ ಲಿಂಕ್ ಡೌನ್‍ಲೋಡ್ ಮಾಡಿ ಕಂಪ್ಯೂಟರ್ ಸುರಕ್ಷಿತವಾಗಿಡಿ ಎನ್ನುವ ಸಂದೇಶವಿರುವ ಯಾವುದೇ ಮೇಲ್ ಗಳನ್ನು ಓಪನ್ ಮಾಡದೇ ಇರುವುದು ಉತ್ತಮ ಎಂದು ಸೈಬರ್ ಸೆಕ್ಯೂರಿಟಿ ಸಂಸ್ಥೆಗಳು ಜನರಿಗೆ ಈಗ ಎಚ್ಚರಿಕೆ ನೀಡಿವೆ.
Advertisement
ರಾನ್ಸಸಂವೇರ್ ಗಿಂತ ಇದು ಭಿನ್ನ ಹೇಗೆ?
ರಾನ್ಸಸಂವೇರ್ ಕುತಂತ್ರ ಸಾಫ್ಟ್ ವೇರ್ ಬಳಸಿ ಕಂಪ್ಯೂಟರ್ ಸಿಸ್ಟಂ ಅನ್ನು ಲಾಕ್ ಮಾಡಿ ಇಷ್ಟೇ ಪ್ರಮಾಣದ ಹಣವನ್ನು ಬಿಟ್ ಕಾಯಿನ್ ರೂಪದಲ್ಲಿ ನೀಡಬೇಕು. ಇಲ್ಲದೇ ಇದ್ದಲ್ಲಿ ಈ ದಾಖಲೆಗಳನ್ನು ಡಿಲೀಟ್ ಮಾಡುತ್ತೇವೆ ಎಂದು ಹೇಳಿ ಬೆದರಿಕೆ ತಂತ್ರವನ್ನು ಹಾಕರ್ಸ್ ಗಳು ಮಾಡುತ್ತಿದ್ದಾರೆ. ಆದರೆ ಈ ಹ್ಯಾಕರ್ಸ್ ಗಳು ಹಣದ ಬೇಡಿಕೆ ಇಡುವುದಿಲ್ಲ. ಬದಲಾಗಿ ಮಾಲ್ವೇರ್ ಕಳುಹಿಸಿ ಕಂಪ್ಯೂಟರ್ ನಲ್ಲಿದ್ದ ದಾಖಲೆಯನ್ನು ಕದಿಯುತ್ತಾರೆ.
Advertisement
ಇದನ್ನೂ ಓದಿ: ಏನಿದು ವನ್ನಾಕ್ರೈ ಸೈಬರ್ ದಾಳಿ? ವಿಶ್ವವೇ ಬಿಚ್ಚಿ ಬಿದ್ದಿದ್ದು ಏಕೆ? ಯಾವ ದೇಶದಲ್ಲಿ ಏನಾಗಿದೆ?
Advertisement
ಇದನ್ನೂ ಓದಿ: ಶಿವಮೊಗ್ಗದಲ್ಲೂ Ransomware ಸೈಬರ್ ದಾಳಿ- 600 ಡಾಲರ್ ಹಣಕ್ಕೆ ಬೇಡಿಕೆ