ಕಲಬುರಗಿ: ರಾಜ್ಯ ಸರ್ಕಾರ ಪಡಿತರ ಚೀಟಿಯಡಿ ನೀಡುವ ಅಡುಗೆ ಎಣ್ಣೆಯನ್ನ ಸೇವನೆ ಮಾಡೋದಕ್ಕಿಂತ ಮೊದಲು ನೂರು ಸಲ ಯೋಚಿಸಿ. ಕಡಿಮೆ ಬೆಲೆಗೆ ಸಿಗ್ತಿದೆ ಅಂತಾ ಅದ್ರಲ್ಲಿ ಅಡುಗೆ ಮಾಡಿದ್ರೆ ಆಮೇಲೆ ಆಸ್ಪತ್ರೆ ಸೇರಬೇಕಾಗುತ್ತೆ. ಅವಧಿ ಮೀರಿದ ಎಣ್ಣೆ ಪ್ಯಾಕೆಟ್‍ಗಳು ವಿತರಣೆಯಾಗ್ತಿವೆ.
Advertisement
ಬಿಪಿಎಲ್ ಕಾರ್ಡ್‍ದಾರರಿಗೆ ವಿಟಮಿನ್ ಎ, ವಿಟಮಿನ್ ಡಿ ಅಂಶವುಳ್ಳ ತಾಳೆಯೆಣ್ಣೆಯನ್ನು ವಿತರಿಸುತ್ತಿದೆ. ಆದ್ರೆ ಕಲಬುರಗಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಅವಧಿ ಮುಗಿದ ತಾಳೆ ಎಣ್ಣೆ ಮಾರಾಟ ಆಗ್ತಿರೋದು ಬೆಳಕಿಗೆ ಬಂದಿದೆ. ಸದ್ಯ ಅವಧಿ ಮೀರಿದ 15 ಸಾವಿರಕ್ಕೂ ಅಧಿಕ ಎಣ್ಣೆ ಪ್ಯಾಕೆಟ್‍ಗಳು ಪತ್ತೆಯಾಗಿವೆ.
Advertisement
Advertisement
Advertisement
ಅವಧಿ ಮೀರಿದ ಎಣ್ಣೆ ಪ್ಯಾಕೆಟ್‍ಗಳನ್ನು ಮಾರಾಟ ಮಾಡದಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಆದ್ರೆ ಅಧಿಕಾರಿಗಳ ಮಾತು ಕಡೆಗಣಿಸಿ ಆಹಾರ ಇಲಾಖೆ ಅಧಿಕಾರಿಗಳು ಅದೇ ತಾಳೆ ಎಣ್ಣೆಯನ್ನ ಬಡವರಿಗೆ ವಿತರಿಸುವ ಮೂಲಕ ಬಡಜನರ ಆರೋಗ್ಯದ ಜೊತೆ ಚೆಲ್ಲಾಟವಾಡ್ತಿದ್ದಾರೆ.
ಈ ಬಗ್ಗೆ ಎಚ್ಚೆತ್ತಿಕೊಂಡಿರೋ ಕಲಬುರಗಿ ಜನ ಅವಧಿ ಮೀರಿದ ತಾಳೆ ಎಣ್ಣೆ ಪ್ಯಾಕೆಟ್‍ಗಳನ್ನ ಮೊದಲು ಸೀಜ್ ಮಾಡುವಂತೆ ಆಹಾರ ಇಲಾಖೆಗೆ ಆಗ್ರಹಿಸಿದ್ದಾರೆ.