ಬೆಂಗಳೂರು: ಬುರ್ಖಾ ಧರಿಸಿ ಕಳ್ಳತನ ಮಾಡುತ್ತಿದ್ದ 6 ಚಾಲಾಕಿ ಕಳ್ಳಿಯರನ್ನು ಬಂಧಿಸುವಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಹೊರವಲಯದ ರಿಂಗ್ ರಸ್ತೆಗಳಲ್ಲಿ ಭಿಕ್ಷಾಟನೆಗೆ ಇಳಿದು ಈ ಬುರ್ಖಾಧಾರಿ ಗ್ಯಾಂಗ್ ಮನೆಗಳ್ಳತನ ಹಾಗೂ ದರೋಡೆ ಮಡುತ್ತಿತ್ತು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಮದುವೆ ಆಮಂತ್ರಣ ಪತ್ರಿಕೆ, ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು ಅಂತ ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡುವ ನೆಪದಲ್ಲಿ ಕಳ್ಳತನ ಹಾಗೂ ರಾಬರಿ ಮಾಡುತ್ತಿದ್ದರು.
Advertisement
Advertisement
ಈ ಬಗ್ಗೆ ಮಾಹಿತಿ ಪಡೆದ ಮಾರತ್ತಹಳ್ಳಿ ಪೊಲೀಸರು ಈ ದಂಧೆಯಲ್ಲಿ ತೊಡಗಿದ್ದ 6 ಬುರ್ಖಾಧಾರಿ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಗ್ಯಾಂಗ್ ನ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.