ಕೊಪ್ಪಳ: ಹೆದ್ದಾರಿ ಸಮೀಪವಿರೋ ಮದ್ಯದಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮದ್ಯಕ್ಕಾಗಿ ಕ್ಯೂ ಹೆಚ್ಚಿದ್ದರಿಂದ ನೂಕು ನುಗ್ಗಲು ಉಂಟಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಜಿಲ್ಲೆಯಲ್ಲಿ ಒಟ್ಟು 139 ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳಿದ್ದು, ಇವುಗಳಲ್ಲಿ ಕೇವಲ 19 ಮಾತ್ರಗಳು ಲೈಸನ್ಸ್ ನವೀಕರಣ ಪಡೆದುಕೊಂಡಿವೆ. ಹೀಗಾಗಿ ನಗರದ ಮದ್ಯಪ್ರಿಯರಿಗೆ ಮದ್ಯದ ಕೊರತೆ ಉಂಟಾಗಿದ್ದು, ತೆರೆದಿರುವ ಬಾರ್‍ಗಳ ಮುಂದೆ ನೂಕು ನುಗ್ಗಲು ಏರ್ಪಟ್ಟಿತ್ತು.
Advertisement
ಸುಪ್ರೀಂ ಕೋರ್ಟ್ ಆದೇಶದ ಜೊತೆಗೆ ಲೈಸನ್ಸ್ ನವೀಕರಣ ಮಾಡದೇ ಇರೋದ್ರಿಂದ ಬಾರ್‍ಗಳು ಬಾಗಿಲು ಹಾಕಿಕೊಂಡಿವೆ. ಇದರಿಂದಾಗಿ ಮದ್ಯದಂಗಡಿಗಳಿಗಾಗಿ ಮದ್ಯಪ್ರಿಯರು ಅಲೆದಾಡುವಂತಾಗಿದೆ.
Advertisement
ಸುಪ್ರೀಂ ಹೇಳಿದ್ದು ಏನು?
ಮದ್ಯಪಾನದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2017ರ ಏಪ್ರಿಲ್ 1ರ ಒಳಗಡೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಎರಡೂ ಬದಿಯ 500 ಮೀಟರ್ ವ್ಯಾಪ್ತಿಯಲ್ಲಿನ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ಈ ಮದ್ಯದ ಅಂಗಡಿಗಳ ಪರಾವನಗಿಗಳನ್ನು ಮಾರ್ಚ್ 31ರ ಬಳಿಕ ನವೀಕರಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ಪೀಠ ಹೇಳಿತ್ತು.
Advertisement
Advertisement