ಬಾಲಿವುಡ್ ನ ನಿರೀಕ್ಷಿತ ಸಿನಿಮಾ ಆರ್ಟಿಕಲ್ 370 (Article 370) ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇವಲ ನೋಡುಗರು ಮಾತ್ರವಲ್ಲ, ವಿಮರ್ಶಕರೂ ಕೂಡ ಸಿನಿಮಾದ ಬಗ್ಗೆ ಹೊಗಳಿ ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಚಿತ್ರವನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ಸಕಾರಾತ್ಮಕವಾಗಿಯೇ ಕೇಳಿ ಬರುತ್ತಿದೆ.
ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟಿಕಲ್ 370 ಚಿತ್ರದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದರು. ಕಾಶ್ಮೀರದಲ್ಲಿ ನಡೆದ ಕಾರ್ಯಮಕ್ರದಲ್ಲಿ ಮೋದಿ, ‘ಆರ್ಟಿಕಲ್ 370 ಸಿನಿಮಾ ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಯಾಕೆ ತೆಗೆಯಲಾಯಿತು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದರು.
- Advertisement
- Advertisement
ಮೋದಿಯ ಈ ಭಾಷಣವನ್ನು ಕೇಳಿರುವ ಆರ್ಟಿಕಲ್ 370 ಸಿನಿಮಾದ ನಾಯಕಿ ಯಾಮಿನಿ ಗೌತಮ್ (Yamini Gautam), ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಈ ನೈಜ ಕಥೆಯನ್ನು ನಿಮಗೆ ಮತ್ತು ಎಲ್ಲರಿಗೂ ಒಪ್ಪುವಂತೆ ಸಿನಿಮಾ ಮಾಡಿದ್ದೇವೆ ಎನ್ನುವ ಭರವಸೆಯನ್ನು ನಾನು ಮತ್ತು ನನ್ನ ತಂಡ ನೀಡಲಿದೆ ಎಂದು ಯಾಮಿನಿ ಪ್ರತಿಕ್ರಿಯೆ ನೀಡಿದ್ದರು.
ಕನ್ನಡತಿ ಪ್ರಿಯಾ ಮಣಿ ಹಾಗೂ ಬಾಲಿವುಡ್ ಹೆಸರಾಂತ ನಟಿ ಯಾಮಿನಿ ಗೌತಮ್ ಕಾಂಬಿನೇಷನ್ ನ ‘ಆರ್ಟಿಕಲ್ 370’ (Article 370)ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ರಿಲೀಸ್ ಆಗಿದ್ದು, ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ರೈಲರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪಾತ್ರಗಳು ಇವೆ. ರಿಲೀಸ್ ಆದ ಟ್ರೈಲರ್ (Trailer)ನಲ್ಲಿ ‘ಪೂರಾ ಕಾ ಪೂರಾ ಕಾಶ್ಮೀರ್ (Kashmir), ಭಾರತ್ ದೇಶ್ ಕಾ ಹಿಸ್ಸಾ ಥಾ. ಹೇ ಔರ್ ರೆಹೇಗಾ’ ಎನ್ನುವ ಮಾತು ಮತ್ತೆ ಮತ್ತೆ ಪ್ರೇರೇಪಿಸುತ್ತಿದೆ. ಅಂದಹಾಗೆ ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಫೆಬ್ರವರಿ 23 ರಂದು ಈ ಸಿನಿಮಾ ತೆರೆಗೆ ಬರಲಿದ್ದು, ಯಾಮಿ ಗೌತಮ್ ಖಡಕ್ ಎನ್.ಐ.ಎ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಟ್ರೈಲರ್ ನಲ್ಲಿ ಕಾಶ್ಮೀರ ಭಯೋತ್ಪಾದನೆ, ಸೇನಾಧಿಕಾರಿಗಳ ಹೋರಾಟ, ಆರ್ಟಿಕಲ್ 370 ತೆಗೆದರೆ ಏನೆಲ್ಲ ಆಗಲಿದೆ ಎನ್ನುವ ಚರ್ಚೆ. ಭಯೋತ್ಪಾದಕರ ಕುತಂತ್ರ ಹೀಗೆ ಸಾಕಷ್ಟು ವಿಷಯಗಳನ್ನು 2 ನಿಮಿಷ 40 ಸೆಕೆಂಡ್ ನ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಶಾಶ್ವತ್ ಸಚ್ ದೇವ್ ಅವರ ಹಿನ್ನೆಲೆ ಸಂಗೀತ ಸೂಪರ್.