ರಾಯಚೂರು/ವಿಜಯಪುರ/ಬೀದರ್: ಚಾಂಪಿಯನ್ಸ್ ಟ್ರೋಫಿಯಲ್ಲಿಂದು (Champions Trophy) ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಹೈವೊಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೇರೆ ಬೇರೆ ಜಿಲ್ಲೆಯ ಕ್ರೀಡಾಭಿಮಾನಿಗಳು ಭಾರತ ತಂಡಕ್ಕೆ ಗೆಲುವಾಗಬೇಕೆಂದು ಶುಭ ಹಾರೈಸಿದ್ದಾರೆ.
ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ಕುತೂಹಲದ ಪಂದ್ಯವೆಂದರೆ ಅದು ಭಾರತ ಮತ್ತು ಪಾಕಿಸ್ತಾನ. ಭಾರತ ಯಾವ ತಂಡದ ವಿರುದ್ಧ ಸೋತರೂ ಕ್ರಿಕೆಟ್ ಅಭಿಮಾನಿಗಳು ಸಹಿಸಿಕೊಳ್ಳುತ್ತಾರೆ. ಆದರೆ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಮಾತ್ರ ಭಾರತ ಗೆಲವು ಸಾಧಿಸಲೆಬೇಕು ಎನ್ನುವುದು ಭಾರತದ ಕ್ರೀಡಾಭಿಮಾನಿಗಳ ಪಟ್ಟು ಹಿಡಿದಿವೆ. ಇಂದು ದುಬೈನ ಅಂತಾರಾಷ್ಟ್ರೀಯ ಕೀಡಾಂಗಣದಲ್ಲಿ 5ನೇ ಪಂದ್ಯ ನಡೆಯುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.ಇದನ್ನೂ ಓದಿ: Champions Trophy 2025 | ಆಲ್ ದಿ ಬೆಸ್ಟ್ ಟೀಂ ಇಂಡಿಯಾ – ನಾಡಿನಾದ್ಯಂತ ಅಭಿಮಾನಿಗಳಿಂದ ಶುಭ ಹಾರೈಕೆ
ವಿಜಯಪುರದಲ್ಲಿ ಕ್ರಿಕೆಟ್ ಅಭಿಮಾನಿಗಳು ಗೆದ್ದು ಬಾ ಭಾರತ, ಜೈಹೋ ಭಾರತ ಎಂದು ಘೋಷಣೆ ಕೂಗಿ ಶುಭಹಾರೈಸಿದ್ದಾರೆ. ಇನ್ನೂ ಬೀದರ್‌ನಲ್ಲಿ ಜೀತೇಗಾ ಇಂಡಿಯಾ ಜೀತೇಗಾ ಎಂದು ಇಂಡಿಯಾಗೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ಇಂದಿನ ಪಂದ್ಯ ಒನ್ ಸೈಡ್ ಇದ್ದು, ಶುಭಮನ್ ಗಿಲ್, ರೋಹಿತ್ ಶರ್ಮಾ, ಕೊಹ್ಲಿ ಸೆಂಚುರಿ ಬಾರಿಸುತ್ತಾರೆ. ನಾವು ಪಂದ್ಯಕ್ಕಾಗಿ ಕಾಯುತ್ತಿದ್ದು, ಪಂದ್ಯ ಮುಗಿಯುವರೆಗೂ ಟಿವಿ ಮುಂದೆ ಕುಳಿತು ಇಂಡಿಯಾಗೆ ಪುಲ್ ಸಪೋರ್ಟ್ ಮಾಡುತ್ತೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ
ರಾಯಚೂರಿನ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಭಾರತದ ಗೆಲುವಿಗಾಗಿ ಪುಟಾಣಿಗಳು ಸ್ವಯಂ ಪ್ರೇರಿತರಾಗಿ ವಿಶೇಷ ಪೂಜೆ ಸಲ್ಲಿಸಿದರು.
ಮಕ್ಕಳು ಹಾಲಿನ ಅಭಿಷೇಕ, ಜಲಾಭಿಷೇಕ ಮಾಡಿದ್ದಾರೆ. ಸ್ತೋತ್ರ, ಶ್ಲೋಕ ಪಠಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿವಿಧ ಸ್ಟಾರ್ ಆಟಗಾರರ ಭಾವಚಿತ್ರಗಳನ್ನು ಹಿಡಿದು ಜಯ ಘೋಷ ಕೂಗಿದ್ದಾರೆ. ಟೀಂ ಇಂಡಿಯಾ ಆಟಗಾರರಿಗೆ ಶುಭ ಹಾರೈಸಿದ ಪುಟಾಣಿ ಮಕ್ಕಳು ಭಾರತ ತಂಡ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – ಕಾರ್ಮಿಕರ ರಕ್ಷಣೆಗೆ ಹರಸಾಹಸ