ಬೆಂಗಳೂರು: ಲೋಕಸಭೆ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿ ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
Advertisement
ಲೋಕಸಭೆ ಮಾದರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಮೊದಲ ಬಾರಿಗೆ ವಿಧಾನಸಭೆಯಲ್ಲಿ ನೀಡುತ್ತಿರುವ ಪ್ರಶಸ್ತಿ ಇದಾಗಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಯಡಿಯೂರಪ್ಪನವರಿಗೆ ಬೆಳ್ಳಿಯ ಪ್ರಶಸ್ತಿ ಫಲಕ ಪ್ರದಾನ ಮಾಡಿ ಗೌರವ ಸಲ್ಲಿಸಲಾಗಿದೆ. ಇದೇ ವೇಳೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಉಭಯ ಸದನದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಸನ್ಮಾನಿಸಲಾಯಿತು. ಸ್ಪೀಕರ್ ಮತ್ತು ಪರಿಷತ್ ಸಭಾಪತಿಯವರಿಂದ ಮೈಸೂರು ಪೇಟಾ ಹಾಕಿ, ಶಾಲು ಹೊದೆಸಿ ಸನ್ಮಾನ ಮಾಡಲಾಯಿತು. ಇದನ್ನೂ ಓದಿ: ವಿಧಾನಸಭೆಯಲ್ಲಿ ನಾಗ್ಪುರ vs ಇಟಲಿ ಫೈಟ್
Advertisement
Advertisement
ಈ ವೇಳೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವರ್ಷದಿಂದ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡುತ್ತಿದ್ದೇವೆ. ಲೋಕಸಭೆ ಸ್ಪೀಕರ್ ಜೊತೆ ನಾನು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅತ್ಯುತ್ತಮ ಶಾಸಕ ಪ್ರಶಸ್ತಿ ಲೋಕಸಭೆ ಸೇರಿ ಅನೇಕ ರಾಜ್ಯಗಳಲ್ಲಿದೆ. ಇದಕ್ಕೊಂದು ಸಮಿತಿ ರಚಿಸಲಾಗಿದೆ. ಸಮಿತಿಗೆ ನಾನು ಅಧ್ಯಕ್ಷ, ಸಿದ್ದರಾಮಯ್ಯ, ಮಾಧುಸ್ವಾಮಿ, ಆರ್.ವಿ.ದೇಶಪಾಂಡೆ ಸದಸ್ಯರು. ಮೊದಲ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಯಡಿಯೂರಪ್ಪನವರಿಗೆ ನೀಡಲಾಗುತ್ತಿದೆ ಎಂದರು. ಇದನ್ನೂ ಓದಿ: ಶಾರ್ಜಾದಲ್ಲಿ ಶೈನ್ ಆಗುತ್ತಾ ರಾಯಲ್ ಚಾಲೆಂಜರ್ಸ್: ಇಂದು ಚೆನ್ನೈ-ಬೆಂಗಳೂರು ಕದನ
Advertisement
ಯಡಿಯೂರಪ್ಪ ಅನೇಕ ಜವಾಬ್ದಾರಿ ಹೊತ್ತವರು, ಉತ್ತಮ ಆಡಳಿತ ಕೊಟ್ಟವರು. ರೈತನಾಯಕ, ಅತ್ಯುತಮ ಸಂಸದೀಯ ಪಟು. ಯಡಿಯೂರಪ್ಪನವರ ಹೆಸರು ಆಯ್ಕೆ ಮಾಡಿದ್ದು ನನಗೆ ಹೆಮ್ಮೆ ತಂದಿದೆ ಎಂದು ಅತ್ಯುತ್ತಮ ಶಾಸಕರ ಹೆಸರು ಘೋಷಣೆ ಮಾಡಲಾಗಿದೆ. ಈ ವರ್ಷದಿಂದ ಹೊಸ ಸಂಪ್ರದಾಯ ಪ್ರಾರಂಭವಾಗಿದೆ. ಪ್ರತಿ ವರ್ಷಕೊಮ್ಮೆ ಉತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಲೋಕಸಭೆ ಮಾದರಿಯಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಓಂ ಬಿರ್ಲಾ ಅವರಿಗೆ ಸ್ಪೀಕರ್ ಕಾಗೇರಿ ತಮ್ಮ ಪೀಠ ಬಿಟ್ಟುಕೊಟ್ಟರು. ಬಳಿಕ ಸ್ಪೀಕರ್ ಕಾಗೇರಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ಅವರ ಪಕ್ಕಕ್ಕೆ ಕುಳಿತರು. ಸದನಕ್ಕೆ ಕಾಂಗ್ರೆಸ್ ಸದಸ್ಯರು ಬಹಿಷ್ಕಾರ ಹಾಕಿದರು. ಬಿಜೆಪಿ, ಜೆಡಿಎಸ್ ಸದಸ್ಯರು ಉಪಸ್ಥಿತರಿದ್ದರು. ಉಭಯ ಸದನದಲ್ಲಿ ಇದೇ ಮೊದಲ ಸಲ ಕಾರ್ಯಕ್ರಮದ ನಿರೂಪಣೆ ಸಹ ಮಾಡಲಾಗಿದೆ.