Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಸ್ಟ್ ಸುಳ್ಳುಗಾರ ಆಫ್ ದಿ ಇಯರ್- ಸಿ.ಟಿ ರವಿಗೆ ಅವಾರ್ಡ್ ಕೊಟ್ಟ ಕಾಂಗ್ರೆಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಸ್ಟ್ ಸುಳ್ಳುಗಾರ ಆಫ್ ದಿ ಇಯರ್- ಸಿ.ಟಿ ರವಿಗೆ ಅವಾರ್ಡ್ ಕೊಟ್ಟ ಕಾಂಗ್ರೆಸ್

Bengaluru City

ಬೆಸ್ಟ್ ಸುಳ್ಳುಗಾರ ಆಫ್ ದಿ ಇಯರ್- ಸಿ.ಟಿ ರವಿಗೆ ಅವಾರ್ಡ್ ಕೊಟ್ಟ ಕಾಂಗ್ರೆಸ್

Public TV
Last updated: February 23, 2023 7:25 pm
Public TV
Share
2 Min Read
CT RAVI CONGRESS
SHARE

ಬೆಂಗಳೂರು: ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಕೆಸರೆರಚಾಟ ಹೆಚ್ಚಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅಂಥದ್ದೇ ಚರ್ಚೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (C.T Ravi) ತುತ್ತಾಗಿದ್ದಾರೆ.

CT RAVI 1

ಸಿಟಿ ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೋ ವೈರಲ್ (Photo Viral) ಆದ ಬೆನ್ನಲ್ಲೇ ಪರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ನಾನ್ ವೆಜ್ (Nonveg) ತಿಂದಿದ್ದೆ ಅನ್ನೋದನ್ನ ಮರೆತಿದ್ದೆ. ಅಲ್ಲಿನ ಸ್ಥಳೀಯರ ಅಪೇಕ್ಷೆ ಮೇರೆಗೆ ಹೋಗಿದ್ದೆ. ಹೀಗಾಗಿ ನಾನು ದೇವಸ್ಥಾನ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ. ಎಲ್ಲವನ್ನೂ ಎದೆ ಬಗೆದು ತೋರಿಸಲು ನಾನು ಹನುಮಂತ ಅಲ್ಲ. ಕಾಂಗ್ರೆಸ್‍ನವರಂತೆ ನಾನು ತಿಂದು ಹೋಗಿದ್ದೆ ಏನ್ ಈಗ ಅಂತ ನಾನು ಹೇಳಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಗರದ್ದು ದಿನಕ್ಕೊಂದು ಸುಳ್ಳು, ಕ್ಷಣಕ್ಕೊಂದು ವೇಷ.

ಹೊಟ್ಟೆಗೆ ಏನ್ ತಿಂದಿದ್ದೆ ಅನ್ನೋದನ್ನೇ ಮರೆತಿದ್ದ @CTRavi_BJP ಅವರಿಗೆ
ಅಂದು ಆಕ್ಸಿಡೆಂಟ್ ಮಾಡಿದಾಗ ಕುಡಿದಿದ್ದೇನು ಅನ್ನೋದಾದ್ರೂ ನೆನಪಿದೆಯೇ?

ದೇವಸ್ಥಾನದ ಆವರಣ ಪ್ರವೇಶಿಸಿದ್ದಕ್ಕೆ ಸಾಕ್ಷಿ ಇದ್ದರೂ ಸುಳ್ಳು ಹೇಳುವ ಸಿ.ಟಿ ರವಿ – "ಬೆಸ್ಟ್ ಸುಳ್ಳುಗಾರ ಆಫ್ ದಿ ಇಯರ್"!! pic.twitter.com/2D9k9unUKf

— Karnataka Congress (@INCKarnataka) February 23, 2023

ಈ ಸಂಬಂಧ ಟ್ವೀಟ್ ಮಾಡಿ ಕಾಲೆಳೆದ ಕಾಂಗ್ರೆಸ್, ಬಿಜೆಪಿಗರದ್ದು ದಿನಕ್ಕೊಂದು ಸುಳ್ಳು, ಕ್ಷಣಕ್ಕೊಂದು ವೇಷ. ಹೊಟ್ಟೆಗೆ ಏನ್ ತಿಂದಿದ್ದೆ ಅನ್ನೋದನ್ನೇ ಮರೆತಿದ್ದ ಸಿಟಿ ರವಿ ಅವರಿಗೆ ಅಂದು ಆಕ್ಸಿಡೆಂಟ್ ಮಾಡಿದಾಗ ಕುಡಿದಿದ್ದೇನು ಅನ್ನೋದಾದ್ರೂ ನೆನಪಿದೆಯೇ?. ದೇವಸ್ಥಾನದ ಆವರಣ ಪ್ರವೇಶಿಸಿದ್ದಕ್ಕೆ ಸಾಕ್ಷಿ ಇದ್ದರೂ ಸುಳ್ಳು ಹೇಳುವ ಸಿ.ಟಿ ರವಿ- “ಬೆಸ್ಟ್ ಸುಳ್ಳುಗಾರ ಆಫ್ ದಿ ಇಯರ್”!! ಎಂದು ಹೇಳಿದೆ. ಇದನ್ನೂ ಓದಿ: ನಾನು ಹುಟ್ಟಿರೋದೆ ಮಾಂಸ ತಿನ್ನೋ ಜಾತಿಯಲ್ಲಿ, ಆದ್ರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ: ಸಿ.ಟಿ ರವಿ

ct ravi 1 1

ಘಟನೆಯೇನು?: ಫೆ.19ರ ಭಾನುವಾರದಂದು ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಆಗಮಿಸಿದ್ದ ಸಿ.ಟಿ ರವಿ ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ನಂತರ ಭಟ್ಕಳಕ್ಕೆ ಆಗಮಿಸಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ (Sunil naik)ಮನೆಯಲ್ಲಿ ಮೀನೂಟ ಸೇವಿಸಿದ್ದ ಸಿ.ಟಿ ರವಿ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಘಟನೆ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:bengalurubjpcongressCT Raviಕಾಂಗ್ರೆಸ್ಬಿಜೆಪಿಬೆಂಗಳೂರುಸಿ.ಟಿ ರವಿ
Share This Article
Facebook Whatsapp Whatsapp Telegram

Cinema news

Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories
MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood
Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories

You Might Also Like

Luiz Inacio Lula da 3
Latest

ಭಾರತ – ಬ್ರೆಜಿಲ್ 5 ವರ್ಷಗಳಲ್ಲಿ 20 ಶತಕೋಟಿ ಡಾಲರ್‌ಗೂ ಹೆಚ್ಚು ವ್ಯಾಪಾರದ ಗುರಿ

Public TV
By Public TV
23 minutes ago
bagalkote riot case hindu activist arrested
Bagalkot

ಬಾಗಲಕೋಟೆ ಗಲಭೆ ಕೇಸ್ – ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೈ ಮುರಿದುಕೊಂಡ ಹಿಂದೂ ಕಾರ್ಯಕರ್ತ

Public TV
By Public TV
36 minutes ago
GBA
Bengaluru City

ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಹರಾಜು

Public TV
By Public TV
47 minutes ago
Mysuru Fire Accident Nursing College
Districts

ಮೈಸೂರು | ನರ್ಸಿಂಗ್ ಕಾಲೇಜಿನಲ್ಲಿ ಅಗ್ನಿ ಅವಘಡ – ಧಗಧಗ ಹೊತ್ತಿ ಉರಿದ ಕಟ್ಟಡ

Public TV
By Public TV
1 hour ago
pratap simha siddaramaiah
Districts

ಸಿದ್ದರಾಮಯ್ಯಗೆ ತಾಖತ್ ಇದ್ರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣ: ಯತೀಂದ್ರಗೆ ಪ್ರತಾಪ್ ಸಿಂಹ ಸವಾಲ್‌

Public TV
By Public TV
1 hour ago
Bengaluru Mahadevapura Child Death Protest
Bengaluru City

ರಸ್ತೆ ಗುಂಡಿಗೆ ಮಗು ಬಲಿ – ರಸ್ತೆ ಸರಿಯಿಲ್ಲ ಅಂತ ಪ್ರತಿಭಟಿಸಿದವರ ವಿರುದ್ಧ FIR

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?