ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ ‘ನಿರ್ಮಲ’ (Nirmala) ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ (Children’s Film) ಅವಾರ್ಡ್ ಪಡೆದುಕೊಂಡಿದೆ. ಉಲ್ಲಾಸ್ ಎಂಟರ್ಪ್ರೈಸಸ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ಜರ್ಮನ್, ಥಾಯ್ಲೆಂಡ್, ಇಟಲಿ, ಉಕ್ರೇನ್ ಸೇರಿದಂತೆ ಹತ್ತಕ್ಕೂ ಹೆಚ್ಚು ಭಾಷೆಯ ಮಕ್ಕಳ ಸಿನಿಮಾಗಳ ನಡುವೆ ಅತ್ಯುತ್ತಮ ಮಕ್ಕಳ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿದೆ. ಥಾಯ್ಲೆಂಡ್ ಮಾಜಿ ಪ್ರಧಾನಿ ಪ್ರಶಸ್ತಿಯನ್ನು ಪ್ರಧಾನ ಮಾಡುವ ಮೂಲಕ ಕನ್ನಡ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಬ್ಯಾಂಕಾಕ್ (Bangkok) ನಲ್ಲಿ ನಡೆಯುತ್ತಿರುವ ಮೂರನೇ ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ಇದಾಗಿದ್ದು, ಕರ್ನಾಟಕದಿಂದ ಮಕ್ಕಳ ಚಿತ್ರವಾಗಿ ‘ನಿರ್ಮಲ’ ಸಿನಿಮಾ ಮಾತ್ರ ಆಯ್ಕೆ ಆಗಿತ್ತು. ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳು ಪ್ರಶಸ್ತಿ ರೇಸ್ ನಲ್ಲಿದ್ದರೂ ಅಂತಿಮವಾಗಿ ನಮ್ಮ ಬ್ಯಾನರ್ ನಿರ್ಮಾಣದ ‘ನಿರ್ಮಲ’ ಸಿನಿಮಾ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕ್ಯಾಮೆರಾ ಮ್ಯಾನ್ ಹಾಗೂ ಪ್ರೊಡಕ್ಷನ್ ಹೊರತುಪಡಿಸಿ ಎಲ್ಲಾ ವಿಭಾಗದಲ್ಲೂ ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಸೇರಿ ಮಾಡಿರುವ ಸಿನಿಮಾವಿದು. ನಿರ್ದೇಶನ, ನಟನೆ, ಸಂಕಲನ, ಮೇಕಪ್, ಮ್ಯೂಸಿಕ್ ಎಲ್ಲವನ್ನು ಮಕ್ಕಳೇ ಮಾಡಿರೋದು ಈ ಚಿತ್ರದ ವಿಶೇಷ. ಅಲ್ಲಿ ಬಂದವರೆಲ್ಲ ಸಿನಿಮಾ ಬಗ್ಗೆ ಕೇಳಿ ಆಶ್ಚರ್ಯ ಹಾಗೂ ಹರುಷ ವ್ಯಕ್ತಪಡಿಸಿದ್ರು ಎಂದು ಚಿತ್ರದ ನಿರ್ಮಾಪಕ ಉಲ್ಲಾಸ್ ಎಂಟರ್ಪ್ರೈಸಸ್ ಬ್ಯಾನರ್ ನ ಉಲ್ಲಾಸ್ ಗೌಡ (Ullas Gowda) ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸದ್ಯಕ್ಕಿಲ್ಲ ‘ಕಿರಿಕ್ ಪಾರ್ಟಿ 2’ : ಈಗೇನಿದ್ದರೂ ರಿಚರ್ಡ್ ಆಂಟನಿ ಗುಂಗಿನಲ್ಲಿ ರಕ್ಷಿತ್
Advertisement
Advertisement
ಬೆಂಗಳೂರು ಇಂಟರ್ ನ್ಯಾಶನಲ್ ಫೆಸ್ಟಿವಲ್ ಗೆ ಆಯ್ಕೆ ಆಗಿ ಇನ್ನೇನು ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವಾಗ ಕೋವಿಡ್ ಬಂತು. ಆನ್‌ಲೈನ್ ನಲ್ಲಿ ಹಲವು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡಿದೆ. ಬ್ಯಾಂಕಾಕ್ ಇಂಟರ್ ನ್ಯಾಶನಲ್ ಫೆಸ್ಟಿವಲ್ ನಲ್ಲಿ ಈ ಸಿನಿಮಾ ಆಯ್ಕೆ ಆಗಿ ಪ್ರಶಸ್ತಿ ಪಡೆದುಕೊಂಡಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷನಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದು ತುಂಬಾ ಖುಷಿ ಕೊಟ್ಟಿದೆ. ನಮ್ಮ ಬ್ಯಾನರ್ ನಲ್ಲಿ ಇಂತಹದೊಂದು ಸಿನಿಮಾ ಮೂಡಿ ಬಂದಿರೋದು ಹೆಮ್ಮೆ ಎನಿಸುತ್ತದೆ ಎಂದು ಭಾ.ಮ.ಹರೀಶ್ ಸಂತಸ ಹಂಚಿಕೊಂಡಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k