ಬೆಂಗಳೂರು: ಇಷ್ಟು ದಿನ ವಿದ್ಯುತ್ ಯಾವಾಗ ಕಡಿತಗೊಳ್ಳುತ್ತೆ ಪುನಃ ಯಾವಾಗ ಬರುತ್ತೆ ಅನ್ನೋದು ನಮಗೆ ತಿಳಿತಾನೇ ಇರಲಿಲ್ಲ. ಆದ್ರೆ ಇನ್ಮುಂದೆ ಇದೇ ಟೈಂಗೆ ಕರೆಂಟ್ ಹೋಗುತ್ತೆ ಅನ್ನೋದು ಜನರಿಗೂ ಗೊತ್ತಾಗತ್ತೆ. ಈ ಮೂಲಕ ಬೆಸ್ಕಾಂ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗ್ತಿದೆ.
ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲ. ಸಿಲಿಕಾನ್ ಸಿಟಿಯಲ್ಲೂ ವಿದ್ಯುತ್ ಸಮಸ್ಯೆ ಇದ್ದೇ ಇದೆ. ಯಾವ ಕ್ಷಣದಲ್ಲಿ ವಿದ್ಯುತ್ ಕಡಿತಗೊಳ್ಳುತ್ತೆ ಅನ್ನೋದು ಗೊತ್ತೇ ಆಗಲ್ಲ. ಈ ಟೈಮಲ್ಲಿ ಬೆಸ್ಕಾಂಗೆ ಜನರು ಹಿಡಿಶಾಪ ಹಾಕ್ತಾರೆ. ಹೀಗಾಗಿ ಇದಕ್ಕೆ ಪರಿಹಾರವೆಂಬಂತೆ ಬೆಸ್ಕಾಂ ವಿದ್ಯುತ್ ಪೂರೈಕೆ ಕಡಿತಗೊಳಿಸೋಕು ಮುನ್ನ ಗ್ರಾಹಕರ ಗಮನಕ್ಕೆ ತರಲು ಮುಂದಾಗಿದೆ. ಕರೆಂಟ್ ಇನ್ನೇನು ಹೋಗುತ್ತೆ ಅನ್ನೋಕೂ ಹತ್ತು ನಿಮಿಷಗಳ ಮೊದಲು ಗ್ರಾಹಕರ ಸೆಲ್ ಫೋನ್‍ಗೆ ಅಲರ್ಟ್ ಮೆಸೇಜ್ ಬರಲಿದೆ.
Advertisement
Advertisement
ಈಗಾಗಲೇ ಬೆಸ್ಕಾಂ ಅಧಿಕಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕಲೆಕ್ಟ್ ಮಾಡ್ತಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 40 ಲಕ್ಷ ಗ್ರಾಹಕರಿದ್ದು, ಈಗಾಗ್ಲೆ 30 ಲಕ್ಷ ಗ್ರಾಹಕರ ನಂಬರ್ ಸಂಗ್ರಹಿಲಾಗಿದೆ. ಕೇವಲ ನಗರ ಪ್ರದೇಶಕ್ಕೆ ಮಾತ್ರವಲ್ಲದೇ ಸಿಲಿಕಾನ್ ಸಿಟಿ ಮುತ್ತಮುತ್ತಲ ಹಳ್ಳಿಗಳ ಗ್ರಾಹಕರು ಕೂಡ ಇದರ ಉಪಯೋಗ ಪಡೆಯಬಹುದಾಗಿದೆ.
Advertisement
ವಿದ್ಯುತ್ ಸಮಸ್ಯೆ ಬಗ್ಗೆ ಮುಂದಾಲೋಚಿಸಿರೋ ಬೆಸ್ಕಾಂ ಈ ಹೊಸ ಐಡಿಯಾವನ್ನ ಚಾಲನೆಗೆ ತರ್ತಿದೆ. ಈ ಮೂಲಕ ಗ್ರಾಹಕ ಸ್ನೇಹಿ ಆಗಲು ಹೊರಟಿದೆ.