ಬೆಂಗಳೂರು: ದಾರಿ ಬಿಡಲಿಲ್ಲಾ ಅಂತಾ ಓಮ್ನಿ ಚಾಲಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿ ಬೆಸ್ಕಾಂ ಸಿಬ್ಬಂದಿ ಗೂಂಡಾಗಿರಿ ಮೆರೆದ ಘಟನೆ ನಗರದ ವೀರಪ್ಪನರೆಡ್ಡಿ ಪಾಳ್ಯದಲ್ಲಿ ನಡೆದಿದೆ.
ಪ್ರದೀಪ್ ಹಲ್ಲೆಗೆ ಒಳಗಾದ ಓಮ್ನಿ ಚಾಲಕ. ಪ್ರವೀಣ್ ಬೆಳ್ಳಂದೂರಿನ ಐಟಿ ಉದ್ಯೋಗಿಗಳನ್ನು ಡ್ರಾಪ್ ಮಾಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬೆಸ್ಕಾಂ ಮೂವರು ಸಿಬ್ಬಂದಿ ಈ ಕೃತ್ಯ ಎಸಗಿದ್ದು, ಸ್ಥಳದಲ್ಲಿಯೇ ವ್ಯಕ್ತಿಯೊಬ್ಬರು ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.
Advertisement
ಬೆಳ್ಳಂದೂರು ಸ್ಟೇಷನ್‍ನಲ್ಲಿ ವಿದ್ಯುತ್ ಕಂಬದ ರಿಪೇರಿಗೆ ಬೆಸ್ಕಾಂ ಸಿಬ್ಬಂದಿ ಬಂದಿದ್ದರು. ಹೀಗೆ ಕೆಲಸ ಮುಗಿಸಿ ಮರಳುತ್ತಿದ್ದಾಗ ಮುಂದೆ ಚಲಿಸುತ್ತಿದ್ದ ಓಮ್ನಿಯವನಿಗೆ ದಾರಿ ಬಿಡುವಂತೆ ಹಾರ್ನ್ ಹಾಕಿದ್ದಾರೆ. ಪಕ್ಕದಲ್ಲಿ ದಾರಿ ಇದ್ದರೂ ಹಾರ್ನ್ ಮಾಡಿದ್ದಕ್ಕೆ, ಚಾಲಕ ಪ್ರದೀಪ್ ನೀವೇ ಪಕ್ಕದಲ್ಲಿ ಹೋಗಿ ಅಂತಾ ಹೇಳಿದ್ದಾನೆ.
Advertisement
Advertisement
ಪ್ರದೀಪ್ ಹೇಳಿದ್ದಕ್ಕೆ ಕೋಪಗೊಂದ ಬೆಸ್ಕಾಂ ಸಿಬ್ಬಂದಿ ಓಮ್ನಿಯನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಪ್ರದೀಪ್ ಜೊತೆಗೆ ವಾಗ್ವಾದಕ್ಕೆ ಇಳಿದ ಮೂವರು, ಆತನನ್ನು ಹೊರಗೆ ಎಳೆದುಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಸ್ಕಾಂ ಸಿಬ್ಬಂದಿಯ ಕೃತ್ಯದಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/1qMWps-DCis