ಬೆಂಗಳೂರು: ಸಾಮಾನ್ಯವಾಗಿ 1 ಮನೆಗೆ ತಿಂಗಳಿಗೆ ಹೆಚ್ಚೆಂದರೆ 1,000 ರೂ. ವಿದ್ಯುತ್ ಬಿಲ್ (Electricity Bill) ಬರೋದನ್ನ ನೋಡಿರ್ತೀವಿ. ಅದ್ರಲ್ಲೂ ಗೃಹಜ್ಯೋತಿ ಯೋಜನೆ (Gruhajyothi Scheme) ಜಾರಿಯಾದಾಗಿನಿಂದ ಬಹುತೇಕ ಮನೆಗಳಿಗೆ ಉಚಿತ ವಿದ್ಯುತ್ ಪೂರೈಕೆಯಾಗುತ್ತಿದೆ. ಆದ್ರೆ, ಬೆಂಗಳೂರಿನ ನಿವಾಸಿಯೊಬ್ಬರ ಮನೆಗೆ 1 ತಿಂಗಳಿಗೆ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಮೌಲ್ಯದ ಬಿಲ್ ಬಂದಿದೆ. ಬಿಲ್ ರಶೀದಿ ನೋಡಿ ಮನೆ ಮಾಲೀಕ ಹೌಹಾರಿದ್ದಾರೆ.
ಬೆಂಗಳೂರಿನ (Bengaluru) ಬ್ಯಾಟರಾಯನಪುರದ ಎಸ್.ಎಂ ವಿಶ್ವೇಶ್ವರಯ್ಯ ಬಡಾವಣೆಯ ಮನೆಯ ಜುಲೈ ತಿಂಗಳ ವಿದ್ಯುತ್ ಬಿಲ್ ಬರೋಬ್ಬರಿ 5,86,736 ರೂ. ಬಂದಿದೆ. ಈ ಬಿಲ್ ಕಂಡು ಮನೆ ಮಾಲೀಕ ಪ್ರಸನ್ನ ಕುಮಾರ್ ಅಯ್ಯಂಗಾರ್ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ನಾಗಸಂದ್ರ-ಮಾದವರ ನಡುವೆ ಸಿಗ್ನಲಿಂಗ್ ಕಾರ್ಯ; ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ
ಜುಲೈ ತಿಂಗಳ ವಿದ್ಯುತ್ ಬಿಲ್ ಆಗಸ್ಟ್‌ನಲ್ಲಿ ಬಂದಿದ್ದು, ಗೂಗಲ್ ಪೇನಲ್ಲಿ ಬಿಲ್ ಮೊತ್ತ ನೋಡಿ ದಂಗಾಗಿದ್ದಾರೆ. ಪ್ರಸನ್ನಕುಮಾರ್ ಅವರಿಗೆ 2ನೇ ಬಾರಿಗೆ ಹೀಗೆ ಎಡವಟ್ಟಾಗಿದೆ. ಈ ಹಿಂದೆ ಮೇ ತಿಂಗಳ ಬಿಲ್ ಜೂನ್ ತಿಂಗಳಲ್ಲಿ 5,91,087 ರೂ. ಬಿಲ್ ಬಂದಿತ್ತು. ಆಗ 1 ತಿಂಗಳು ಸರಿಪಡಿಸಿ, ಜುಲೈ ತಿಂಗಳಲ್ಲಿ ಕೇವಲ 214 ರೂ. ಮಾತ್ರ ಬಿಲ್ ಪಾವತಿಸಿದ್ದರು. ಆದ್ರೇ ಆಗಸ್ಟ್‌ನಲ್ಲಿ 5,86,736 ರೂ. ಬಿಲ್ ಬಂದಿದೆ. ಇದರಿಂದಾಗಿ 100, 200 ರೂ. ರೂ. ಬರುತ್ತಿದ್ದ ಬಿಲ್ ಏಕಾಏಕಿ ಲಕ್ಷಾಂತರ ರೂ.ಗೆ ಬಂದಿರೋದು ಮನೆ ಮಾಲೀಕರು ಹೌಹಾರಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಸನ್ನಕುಮಾರ್ ಅಯ್ಯಂಗಾರ್, 5 ಲಕ್ಷದಷ್ಟು ಬಿಲ್ ಬರಬೇಕಾದ್ರೇ ಸುಮಾರು 80,000 ವಿದ್ಯುತ್ ಬಳಸಿರಬೇಕು. ಆದ್ರೆ ನಾನು 2020ರ ಸೆಪ್ಟೆಂಬರ್‌ನಿಂದ ಮನೆಯ ಟೆರಸ್ ಮೇಲೆ 3 ಕೆ.ಬಿ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿಕೊಂಡಿದ್ದೇನೆ. ಜೊತೆಗೆ 5 ಕೆಬಿ ಬ್ಯಾಟರಿ ಬ್ಯಾಕ್ ಅಪ್ ಇದೆ. ಹೀಗಾಗಿ ಬೆಸ್ಕಾಂ ಪವರ್ ಅನ್ನು ಹೆಚ್ಚಾಗಿ ಬಳಸುತ್ತಿಲ್ಲ. ನಾವೇನು ಫ್ಯಾಕ್ಟರಿ ಇಟ್ಟಿಲ್ಲ, ಆದ್ರೂ ಇಷ್ಟು ಬಿಲ್ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರದ ವಿರೋಧ ಪಕ್ಷವನ್ನು ಮಣಿಸಲು ರಾಜ್ಯಪಾಲರನ್ನು ಏಜೆಂಟರಾಗಿ ಬಳಸುತ್ತಿದ್ದಾರೆ: ಆರ್.ವಿ ದೇಶಪಾಂಡೆ
ಅಲ್ಲದೇ ಬೆಸ್ಕಾಂ ಮುಖ್ಯ ಕಚೇರಿಗೆ ದೂರು ನೀಡಲು ಮುಂದಾಗಿದ್ದೇನೆ. ಇಂತಹ ಟೆಕ್ನಿಕಲ್ ಸಮಸ್ಯೆಯಾದ್ರೂ ಬೆಸ್ಕಾಂ ಬಿಲ್ ಕೊಡುವಾಗ ಚೆಕ್ ಮಾಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ನಾನು ಯಾವುದೇ ತಪ್ಪು ಮಾಡಿಲ್ಲ.. ನ್ಯಾಯಾಲಯದಲ್ಲಿ ಪರಿಹಾರ ಸಿಗುವ ವಿಶ್ವಾಸ ಇದೆ: ಸಿದ್ದರಾಮಯ್ಯ