ಬೆಂಗಳೂರು: ಸದ್ಯ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ (Gruhajyothi Scheme) ಅಡಿಯಲ್ಲಿ ಷರತ್ತುಗಳೊಂದಿಗೆ ಉಚಿತ ವಿದ್ಯುತ್ (Free Electricity) ನೀಡಲು ಅರ್ಜಿ ಆಹ್ವಾನಿಸುತ್ತಿದೆ. ಉಚಿತ ವಿದ್ಯುತ್ ಪ್ರಯೋಜನ ಪಡೆಯಲು 50 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ವಿದ್ಯುತ್ ಶುಲ್ಕ ಹೆಚ್ಚಾಗಿದ್ದು ಏಪ್ರಿಲ್‌ನಿಂದಲೇ ಏರಿಕೆಯಾದ ದರವನ್ನು ಈ ಬಾರಿ ಹಾಕಿದ ಪರಿಣಾಮ ಬಿಲ್ ಜಾಸ್ತಿ ಎಂಬ ಉತ್ತರವನ್ನ ಬೆಸ್ಕಾಂ (Bescom) ಹೇಳಿಯೂ ಆಗಿದೆ. ಆದ್ರೆ ಬೆಸ್ಕಾಂನವರು ಮಾತ್ರ ಬಿಲ್ (Electricity Bill) ಹಾಕುವಾಗ ಮಾಡಿರುವ ಎಡವಟ್ಟುಗಳು ಈಗ ಬೆಳಕಿಗೆ ಬರ್ತಿದೆ.
ಹೌದು. ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆ ಅಡಿಯಲ್ಲಿ ಷರತ್ತುಗಳೊಂದಿಗೆ 200 ಯುನಿಟ್ ವಿದ್ಯುತ್ ಉಚಿತ ಯೋಜನೆಯನ್ನ ಜಾರಿಗೊಳಿಸಲು ಅರ್ಜಿ ಸಲ್ಲಿಕೆಯೂ ಆರಂಭವಾಗಿದೆ. ಈ ನಡುವೆ ಜೂನ್ ತಿಂಗಳಲ್ಲಿ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಕೂಡದೇ ಮೇ ನಲ್ಲೇ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿ ಜನರಿಗೆ ಶಾಕ್ ಕೊಟ್ಟಿತು. ಆದ್ರೆ ಕಾಂಗ್ರೆಸ್ ಸರ್ಕಾರ ಇದು ಕೆಇಆರ್‌ಸಿ ಹೆಚ್ಚಳ ಮಾಡಿರೋದು, ಸರ್ಕಾರದ ನಿರ್ಧಾರವಲ್ಲ. ಅದೊಂದು ಸ್ವಾಯತ್ತ ಸಂಸ್ಥೆ. ಜೊತೆಗೆ ಇದು ಬಿಜೆಪಿ ಸರ್ಕಾರದ ಅವಧಿಯಲ್ಲೇ ದರ ಏರಿಕೆಯಾಗಿದೆ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದೆ.
ಈ ನಡುವೆ ಬೆಸ್ಕಾಂ ಹಗಲು ದರೋಡೆಗೆ ಇಳಿದಿರುವುದು ಕಂಡುಬಂದಿದೆ. ಮೇ ನಲ್ಲಿ ದರ ಜಾಸ್ತಿಯಾಗಿದೆ. ಮೊದಲ 100 ಸ್ಲಾಬ್ ಬಳಕೆಯಾಗುವ ಯೂನಿಟ್‌ಗೆ 4.65 ರೂ. ನಿಗದಿ ಮಾಡಿದ್ದು, 100ರ ಮೇಲೆ ಬಳಿಕೆಯಾಗುವ ವಿದ್ಯುತ್‌ಗೆ 7 ರೂ. ಮಾಡಿದೆ. ಇದರಿಂದ 100ಕ್ಕಿಂತ ಅಧಿಕ ಯೂನಿಟ್ ಬಳಕೆ ಮಾಡಿದರೆ ಪ್ರತಿ ಯೂನಿಟ್‌ಗೆ 7 ರೂ. ನೀಡಬೇಕಾಗುತ್ತೆ. ಇದನ್ನೂ ಓದಿ: ನಾನು ಸಾವರ್ಕರ್ ವಂಶಸ್ಥ, ನನ್ನನ್ನ ಜೈಲಿಗೆ ಹಾಕ್ತೀರಾ – ಎಂಬಿಪಿಗೆ ಸೂಲಿಬೆಲೆ ಪ್ರಶ್ನೆ
ಅದೇ ರೀತಿ ನಂದಿನಿ ಲೇಔಟ್ ಬೆಸ್ಕಾಂ ಕಚೇರಿಗೆ ವ್ಯಾಪ್ತಿಗೆ ಸೇರಿದ ವ್ಯಕ್ತಿಯೊಬ್ಬರ ಮನೆಗೆ ಬಂದಿರೋ ಬಿಲ್‌ನಲ್ಲಿ ಒಟ್ಟು ಬಳಕೆಯಾಗಿರುವ ಯೂನಿಟ್ 104 ಎಂದು ನಮೂದಿಸಿದೆ. ಅದರೆ ಮೇ ತಿಂಗಳಿನಿಂದ ಮೀಟರ್ ರಿಡೀಂಗ್ ಮಾಡಿದ ದಿನದವರೆಗೆ 104 ಯೂನಿಟ್ ಬಳಕೆ ಮಾಡಿದ್ದು ಬೇರೆ ಎಲ್ಲ ರೀತಿಯ ಟ್ಯಾಕ್ಸ್ ಸೇರಿ ಒಟ್ಟು ಬಿಲ್ 1,300 ರೂ. ಬಂದಿದೆ. ಕಳೆದ ತಿಂಗಳು ಕೂಡ 101 ಯೂನಿಟ್ ವಿದ್ಯುತ್ ಬಳಸಿದ್ದಾರೆ. 900ರೂ.ಗಿಂತ ಹೆಚ್ಚು ಹಣವನ್ನ ಶುಲ್ಕವಾಗಿ ವಿಧಿಸಿದ್ದಾರೆ. ಆದ್ರೆ ಈ ಬಿಲ್‌ನಲ್ಲಿ ಮಿಟರ್ ರೀಡಿಂಗ್‌ಗಿಂತ ಹೆಚ್ಚು ಯೂನಿಟ್ ಬಳಕೆ ಮಾಡಿದ್ದೀರಾ ಅಂತಾ ಮನೆಯವರಿಗೆ ಬಿಲ್ ಕೊಟ್ಟಿರೋದು ನಂತರ ಬೆಳಕಿಗೆ ಬಂದಿದೆ.
ಮನೆ ಮಾಲೀಕರು ಮೀಟರ್ ಚೆಕ್ ಮಾಡಿದಾಗ 50 ರಿಂದ 70 ಯೂನಿಟ್ ಅಷ್ಟೇ ಬಳೆಕೆಯಾಗಿರುವುದನ್ನ ಕಂಡು ಶಾಕ್ ಆಗಿದ್ದಾರೆ. ಆದ್ರೆ ಬಿಲ್‌ನಲ್ಲಿ 1,535ಕ್ಕೆ ರೀಡಿಂಗ್ ಎಂಡ್ ಮಾಡಿದ್ದಾರೆ. ನಿಜವಾಗಿಯೂ ಮೀಟರ್ ರೀಡಿಂಗ್ ಇದ್ದದ್ದು 1,504ಕ್ಕೆ, ಅದರೆ ಅಗತ್ಯಕ್ಕಿಂತ 30 ಹೆಚ್ಚುವರಿ ಯೂನಿಟ್‌ಗೆ ಶುಲ್ಕ ವಿಧಿಸಿದ್ದಾರೆ. ಇದರಿಂದ ಗ್ರಾಹಕರಿಗೆ 250 ರಿಂದ 300 ರೂ. ಬಿಲ್ ಹೆಚ್ಚಾಗ್ತಿದೆ. ಈ ಬಗ್ಗೆ ಬೆಸ್ಕಾಂಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಸೋಲಿಗೆ ಗ್ಯಾರಂಟಿ ಅಲ್ಲ, ನೀವೇ ಕಾರಣ – ಬಿಜೆಪಿ ನಾಯಕರ ವಿರುದ್ಧ ಸಿಡಿದ ಕಾರ್ಯಕರ್ತರು