ಆನೇಕಲ್: ಯುಕೆಜಿ (UKG) ಮಗುವನ್ನು ಫೇಲ್ ಮಾಡಿ ಎಡವಟ್ಟು ಮಾಡಿದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿದ್ದಂತೆಯೇ ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ನೋಟಿಸ್ ಜಾರಿ ಮಾಡಿದೆ.
Advertisement
ಸೆಂಟ್ ಜೋಸೆಫ್ ಚಾರ್ಮಿನೆಡ್ ಶಾಲೆಗೆ ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ನೋಟಿಸ್ ಜಾರಿ ಮಾಡಿದ್ದಾರೆ. ಅನುತ್ತೀರ್ಣ ಮಾಡಿರುವ ಕುರಿತು ಮಾಹಿತಿ ಕೇಳಿದ್ದಾರೆ. ನಿಯಮಾನುಸಾರ 9ನೇ ತರಗತಿಯವರೆಗೆ ಅನುತ್ತೀರ್ಣ ಮಾಡುವಂತಿಲ್ಲ. ಯುಕೆಜಿ ಮಗುವನ್ನು ಯಾಕೆ ಅನುತ್ತೀರ್ಣ ಮಾಡಿದ್ದೀರಿ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣ (Social Media) ದಲ್ಲಿ ಹರಿದಾಡುತ್ತಿದೆ. ಇದು ಶಿಕ್ಷಣ ಇಲಾಖೆಗೆ ಮುಜುಗರ ತರುವಂತ ವಿಚಾರ. ಆದಕಾರಣ ಸಂಪೂರ್ಣ ಲಿಖಿತ ವಿವರಣೆಯನ್ನು ನೀಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಒಂದು ವೇಳೆ ತಪ್ಪಿದ್ದಲ್ಲಿ ನಿಮ್ಮ ಶಾಲೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಅಧಿವೇಶನ ಬಳಿಕ 4 ಕಡೆಗಳಿಂದ ರಥಯಾತ್ರೆ, ಮತ್ತೊಮ್ಮೆ ಬಿಜೆಪಿ ಸರ್ಕಾರ ನಿಶ್ಚಿತ: ಬಿಎಸ್‌ವೈ
Advertisement
Advertisement
ಸದ್ಯ ಶಿಕ್ಷಣ ಸಂಸ್ಥೆ ಸ್ಪಷ್ಟೀಕರಣ ನೀಡಲು ತಡಕಾಡುತ್ತಿದೆ. ಈ ಬಗ್ಗೆ ಪ್ರಾಂಶುಪಾಲರು, ಡಿಜಿಟಲ್ ಎಂಟ್ರಿಯಲ್ಲಿ ಆಗಿರುವ ಪ್ರಮಾದ ಎಂದಿದ್ದಾರೆ. ಪರೀಕ್ಷೆಯಲ್ಲಿ `ಸಿ’ ಗ್ರೇಡ್ ಕೊಟ್ಟಿದ್ದೆವು. ಸಿಸ್ಟಂ ಎಂಟ್ರಿಯಲ್ಲಿ ಎಡವಟ್ಟಾಗಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿನಿ ತಂದೆ ಗಮನಕ್ಕೆ ಇ-ಮೇಲ್ ಮೂಲಕ ತರಲಾಗಿದೆ ಎಂದು ಪ್ರಾಂಶುಪಾಲ ಸಾಜು ಇ-ಮೇಲ್ ಗಳನ್ನ ತೋರಿಸಿದ್ದಾರೆ.
Advertisement
ಏನಿದು ಘಟನೆ..?: ಆನೇಕಲ್ (Anekal) ತಾಲೂಕಿನ ಹುಸ್ಕೂರು ಗೇಟ್ ಸಮೀಪದ ಬಳಿ ಇರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಯುಕೆಜಿ ಓದುತ್ತಿದ್ದ ಮಗುವನ್ನು ಫೇಲ್ ಮಾಡಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಶಾಲೆಯ ಆಡಳಿತ ಮಂಡಳಿ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ (Suresh Kumar) ಟ್ವೀಟ್ ಮಾಡಿದ್ದು, ಮಗುವನ್ನು ಏನು ಮಾಡಲು ಹೊರಟಿದೆ ಎಂದು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಕೂಡ ಸರಣಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k