ಜೆರುಸಲೇಂ: ಇಸ್ರೇಲ್ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಕ್ಷೇಮವಾಗಿದ್ದಾರೆ. ಅವರು ಸಾವನ್ನಪ್ಪಿದ್ದಾರೆಂಬ ವರದಿ ಸುಳ್ಳು ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ.
ನೆತನ್ಯಾಹು ತಮ್ಮ ಎಕ್ಸ್ ಖಾತೆಯಲ್ಲಿ, ನಡೆಯುತ್ತಿರುವ ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಕುರಿತು ಪತ್ರಿಕಾಗೋಷ್ಠಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನೆತನ್ಯಾಹು ಅವರ ಬಲಗೈಯಲ್ಲಿ ಆರು ಬೆರಳುಗಳನ್ನು ಗುರುತಿಸಿದ್ದಾರೆ. ವೀಡಿಯೊ ಕೃತಕ ಬುದ್ಧಿಮತ್ತೆಯಿಂದ ರಚಿತವಾಗಿದೆ ಎಂಬ ವದಂತಿಗಳಿಗೆ ಉತ್ತೇಜನ ನೀಡಿದೆ. ಇದನ್ನೂ ಓದಿ: ಇಲ್ಲಿವರೆಗೆ ಹೊಡೆದಿದ್ದು ಮೋಜಿಗಾಗಿ ಅಷ್ಟೇ.. ಇನ್ಮುಂದೆ ದಾಳಿ ಮತ್ತಷ್ಟು ತೀವ್ರ: ಇರಾನ್‌ಗೆ ಟ್ರಂಪ್ ವಾರ್ನಿಂಗ್
ನೆತನ್ಯಾಹು ತನ್ನ ಕೈಗಳನ್ನು ಎತ್ತಿದಾಗ, ಕಿರುಬೆರಳಿನ ಪಕ್ಕದಲ್ಲಿ ಮತ್ತೊಂದು ಬೆರಳು ಕಂಡುಬಂದಿದೆ. ಇದನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ಆರನೇ ಬೆರಳು ಎಂದು ಹೇಳಿದ್ದಾರೆ. ಇದು ‘ಕ್ಲಾಸಿಕ್ AI ಬೆರಳಿನ ದೋಷ’ ಎಂದು ತಿಳಿಸಿದ್ದಾರೆ.
X ನ AI ಚಾಟ್‌ಬಾಟ್ ಗ್ರೋಕ್, ಆರು ಬೆರಳುಗಳ ಕುರಿತಾದ ಹೇಳಿಕೆಗಳ ಸತ್ಯ ಪರಿಶೀಲಿಸಿ, ‘ಇಲ್ಲ, ಬೆಂಜಮಿನ್ ನೆತನ್ಯಾಹು ಅವರಿಗೆ ಆರು ಬೆರಳುಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ರೇಲ್‌ನ ಸರ್ಕಾರಿ ಪತ್ರಿಕಾ ಕಚೇರಿಯ ಅಧಿಕೃತ ದೃಶ್ಯಗಳು, ನೆತನ್ಯಾಹು ಅವರ ಕೈಯಲ್ಲಿ ಐದು ಬೆರಳುಗಳು ಮಾತ್ರ ಇರುವುದರ ಬಗ್ಗೆ ಸ್ಪಷ್ಟಪಡಿಸಿವೆ.
ಫೆ.28 ರಂದು ಇಸ್ರೇಲ್ ಮತ್ತು ಅಮೆರಿಕ, ಇರಾನ್ ವಿರುದ್ಧ ಜಂಟಿ ದಾಳಿಗಳನ್ನು ನಡೆಸಿದವು. ಯುದ್ಧದ ಮೊದಲ ದಿನವೇ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು. ಇರಾನ್ ತನ್ನ ತೈಲ ರಫ್ತು ಮಾಡುವ ನೆರೆಹೊರೆಯವರ ವಿರುದ್ಧ ದಾಳಿಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಯುಎಇ ಬಂದರು ಪ್ರದೇಶಗಳಿಂದ ಹೊರಗೆ ಹೋಗಿ: ಜನರಿಗೆ ಇರಾನ್ ಎಚ್ಚರಿಕೆ

