ಮಳೆ ಅಂದ್ರೆ ಏನೋ ಹರುಷ, ಸಂಭ್ರಮ.. ಆದ್ರೆ ಹಳ್ಳಿಯಲ್ಲಿ ಮಳೆ ಅಂದ್ರೆ ಸಂಮೃದ್ಧಿ. ಬೇಸಿಗೆಯ ಬೇಗೆಯನ್ನು ತೊಲಗಿಸಿ ಭೂರಮೆಯ ಬಂಜೆತನವ ತೊಡೆದು, ಹಸಿರು ಸೀರೆಯನುಡಿಸುವ ಅಮೃತ ಸಿಂಚನ. ಮಳೆಯ ಬಗ್ಗೆ ಹೇಳುತ್ತಾ ಹೋದ್ರೆ ವರ್ಣಿಸಲು ಪದಗಳೇ ಸಾಲುವುದಿಲ್ಲ. ಮಕ್ಕಳನ್ನು ಬಿಟ್ಟರೆ ಮಳೆಯನ್ನು ಹೆಚ್ಚು ಇಷ್ಟಪಡುವ ಜೀವವೆಂದರೆ ಅದು ನಮ್ಮ ರೈತ. ಅನ್ನದಾತ ತನ್ನ ಅನ್ನ ಹುಟ್ಟಿಸುವ ಕಾಯಕ ನಡೆಸಲು ಮಳೆರಾಯನ ಕೃಪೆ ಬೇಕೇ ಬೇಕು. ನಾವು ಚಿಕ್ಕವರಿದ್ದಾಗ ಈ ಮಳೆಯ ಹಿಂದೆಯೂ ಒಂದೊಂದು ಕಥೆ ಇರೋದನ್ನ ಅಜ್ಜಿ-ತಾತನಿಂದ ಕೇಳಿರ್ತೀವಿ. ಆದ್ರೆ ಈ ಬೆಂಗಳೂರಿನಂತಹ ಮಹಾನಗರಗಳನ್ನು ನೋಡಿದಾಗ ಮಳೆ ಯಾಕಾದ್ರೂ ಬರುತ್ತದೋ ಅನ್ನಿಸುತ್ತೆ.
ಬೆಂಗಳೂರಿನಲ್ಲಿ ಕಳೆದ ರಾತ್ರಿಯಿಡೀ ಸುರಿದ ಮಳೆ ಇಂದು ಮಧ್ಯಾಹ್ನದಿಂದ ಮತ್ತೆ ಶುರುವಾಗಿದೆ. ನಗರದ ಮೇಖ್ರಿ ಸರ್ಕಲ್, ಸದಾಶಿವನಗರ, ಶಿವಾಜಿನಗರ, ವಸಂತನಗರ, ಹೈಗ್ರೌಂಡ್ಸ್, ವಿಧಾನಸೌಧ, ಸೆಂಟ್ರಲ್ ಸಿಲ್ಕ್ ಬೋರ್ಡ್, ಚಾಮರಾಜಪೇಟೆ, ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ಮೈಸೂರು ರೋಡ್, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರಂ, ಮಹಾಲಕ್ಷ್ಮಿ ಲೇಔಟ್, ಶೇಷಾದ್ರಿಪುರಂ, ಚಿಕ್ಕಪೇಟೆ, ಅರಮನೆ ಮೈದಾನ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಅವಾಂತರ ಸೃಷ್ಟಿಯಾಗಿದೆ. ಮಳೇ ಬಂದು ರಸ್ತೆಯಲ್ಲಾ ನೀರು ತುಂಬಿಕೊಂಡರೂ ಯಾರೇ ಕೂಡಾಗಲಿ ಊರೇ ಹೋರಾಡಲಿ ಅನ್ನೋ ತರ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುವ ಜನ ಒಂದುಕಡೆಯಾದ್ರೆ, ಅವಾಂತರಕ್ಕೆ ಸಿಕ್ಕಿ ನಲುಗಿದವರನ್ನ ರಕ್ಷಿಸುವ ಕೆಲಸ ಮತ್ತೊಂದೆಡೆ ಮುಂದುವರಿದಿದೆ. ಇದಕ್ಕೆ ಸಂಬಂಧಿಸಿದ ಒಂದಿಷ್ಟು ಚಿತ್ರಗಳು ಕಣ್ಣಿಗೆ ಕಟ್ಟಿದಂತಿವೆ…. ಮುಂದೆ ನೋಡಿ…
Contents