ಸಂಸ್ಕೃತ ಜನಪ್ರಿಯಗೊಳಿಸಲು ಶ್ರಮಿಸುತ್ತಿದೆ ಬೆಂಗಳೂರಿನ ‘ಸಮಷ್ಟಿ ಗುಬ್ಬಿ’: ಮನ್‌ ಕಿ ಬಾತ್‌ನಲ್ಲಿ ಮೋದಿ ಪ್ರಶಂಸೆ

Public TV
1 Min Read
PM Modi 4

ನವದೆಹಲಿ: ಸಂಸ್ಕೃತವನ್ನು ಜನಪ್ರಿಯಗೊಳಿಸಲು ಅವಿರತ ಶ್ರಮಿಸುತ್ತಿರುವ ಬೆಂಗಳೂರಿನ ಸಮಷ್ಟಿ ಗುಬ್ಬಿಯನ್ನು ತಮ್ಮ ‘ಮನ್‌ ಕಿ ಬಾತ್‌’ (Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಶಂಸಿಸಿದ್ದಾರೆ.

ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮೋದಿ ಅವರು ‘ಮನ್‌ ಕಿ ಬಾತ್‌’ ರೇಡಿಯೋ ಕಾರ್ಯಕ್ರಮದ 111ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. ಇದನ್ನೂ ಓದಿ: 3ನೇ ಬಾರಿ ಪ್ರಧಾನಿಯಾದ ಬಳಿಕ ಮೋದಿ ಮೊದಲ `ಮನ್ ಕಿ ಬಾತ್’

MODI MAN KI BATH 1

ಬೆಂಗಳೂರಿನಲ್ಲಿ (Bengaluru) ಕಬ್ಬನ್‌ ಪಾರ್ಕ್‌ ಉದ್ಯಾನವಿದೆ. ಇಲ್ಲಿನ ಜನ ಈ ಪಾರ್ಕ್‌ನಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದಾರೆ. ಇಲ್ಲಿ ವಾರಕ್ಕೊಮ್ಮೆ (ಪ್ರತಿ ಭಾನುವಾರ) ಮಕ್ಕಳು, ಯುವಕರು ಮತ್ತು ಹಿರಿಯರು ಪರಸ್ಪರ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಇಷ್ಟೇ ಅಲ್ಲ, ಸಂಸ್ಕೃತದಲ್ಲಿ ಅನೇಕ ಚರ್ಚಾ ಅಧಿವೇಶನಗಳನ್ನು ಆಯೋಜಿಸಲಾಗಿದೆ. ಈ ಉಪಕ್ರಮದ ಹೆಸರು ಸಂಸ್ಕೃತ ವಾರಾಂತ್ಯ. ಇದನ್ನು ಸಮಷ್ಠಿ ಗುಬ್ಬಿ (Samasti Gubbi) ಜಿಯವರು ವೆಬ್‌ಸೈಟ್ ಮೂಲಕ ಪ್ರಾರಂಭಿಸಿದರು. ಕೆಲವು ದಿನಗಳ ಹಿಂದೆ ಪ್ರಾರಂಭವಾದ ಈ ಉಪಕ್ರಮವು ಬೆಂಗಳೂರಿನ ಜನರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ನಾವೆಲ್ಲರೂ ಈ ರೀತಿಯ ಉಪಕ್ರಮಗಳೊಂದಿಗೆ ಸಂಪರ್ಕ ಸಾಧಿಸಿದರೆ ಪ್ರಪಂಚದ ಪ್ರಾಚೀನ ಮತ್ತು ವೈಜ್ಞಾನಿಕ ಜ್ಞಾನದಿಂದ ನಾವು ಬಹಳಷ್ಟು ಕಲಿಯಬಹುದು ಪ್ರಧಾನಿ ಮೋದಿ ತಿಳಿಸಿದ್ದಾರೆ.

MODI MAN KI BATH

ಪ್ರಾಚೀನ ಭಾರತೀಯ ಜ್ಞಾನ ಮತ್ತು ವಿಜ್ಞಾನದಲ್ಲಿ ಸಂಸ್ಕೃತದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಭಾಷೆಯನ್ನು ಜೀವಂತವಾಗಿಡಲು ಗುಬ್ಬಿ ಅವರ ಕೆಲಸದಿಂದ ಸ್ಪೂರ್ತಿ ಪಡೆಯಬೇಕು ಎಂದು ದೇಶದ ಜನತೆಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ – ಸಚಿವ ಜಮೀರ್

ಪ್ರಾಚೀನ ಭಾರತೀಯ ಜ್ಞಾನ ಮತ್ತು ವಿಜ್ಞಾನದ ಪ್ರಗತಿಯಲ್ಲಿ ಸಂಸ್ಕೃತವು ದೊಡ್ಡ ಪಾತ್ರವನ್ನು ವಹಿಸಿದೆ. ಇಂದು ನಾವು ಸಂಸ್ಕೃತವನ್ನು ಗೌರವಿಸುವುದು ಮತ್ತು ಅದನ್ನು ನಮ್ಮ ದೈನಂದಿನ ಜೀವನದೊಂದಿಗೆ ಸಂಪರ್ಕಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

Share This Article