ಬೆಂಗಳೂರು: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿ (College Student) ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಪಿಜಿ ಮಾಲೀಕನನ್ನ ಬಂಧಿಸಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ (Soladevanahalli Police) ನಡೆದಿದೆ.
ಪಿಜಿ ಮಾಲೀಕ (PG Owner) ಅಶ್ರಫ್ ಬಂಧಿತ ರೇಪ್ ಆರೋಪಿ. ವಿದ್ಯಾರ್ಥಿನಿ ಪಿಜಿ ಸೇರಿ ಕೇವಲ 10 ದಿನಗಳು ಕಳೆದಿತ್ತು. ಮೊನ್ನೆ ಆಕೆಯನ್ನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಅಶ್ಲೀಲ ವಿಡಿಯೋದಲ್ಲಿ ಇದ್ದದ್ದು ಪ್ರಜ್ವಲ್ ಅಂತ ಪತ್ತೆಹಚ್ಚಿದ್ದೇ ಹೊಸ ತಂತ್ರಜ್ಞಾನ – ದೇಶದಲ್ಲೇ ಮೊದಲ ಪ್ರಯೋಗ
ಘಟನೆ ಬಳಿಕ ಸಂತ್ರಸ್ತೆ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಶ್ರಫ್‌ನನ್ನ ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಪ್ರಜ್ವಲ್‌ಗೆ ಶಿಕ್ಷೆ ಬೆನ್ನಲ್ಲೇ ಪೆನ್‌ಡ್ರೈವ್ ಹಂಚಿದವರಿಗೆ ಶುರುವಾಯ್ತು ನಡುಕ!