ಬೆಂಗಳೂರು: ನಗರದಲ್ಲಿ ದಿನೇ ದಿನೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ನಮ್ಮ ಮೆಟ್ರೋ (Namma Metro) ಮುಂದಾಗಿದೆ. ಈಗಾಗಲೇ ಮೂರು ಲೈನ್‌ನಲ್ಲಿ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿವೆ. ಹೊಸ ಎರಡು ಮಾರ್ಗಗಳಿಗೆ ಮತ್ತು ಹಳೆಯ ಮಾರ್ಗಗಳಿಗೆ ಹೊಸ ರೈಲುಗಳನ್ನು ಆರ್ಡರ್ ನೀಡಿದ್ದು, ಮೆಟ್ರೋ ರೈಲುಗಳ ಸಂಖ್ಯೆ ಡಬಲ್ ಆಗಲಿದೆ.
ನಮ್ಮ ಮೆಟ್ರೋಗೆ 96 ಹೊಸ ರೈಲುಗಳು, 516 ಕೋಚ್‌ಗಳನ್ನು ಆರ್ಡರ್ ನೀಡಲಾಗಿದೆ. ಸದ್ಯ ನಮ್ಮ ಮೆಟ್ರೋ ಬಳಿ ಗ್ರೀನ್, ಪರ್ಪಲ್, ಯೆಲ್ಲೋ ಮೂರು ಲೈನ್ ಸೇರಿ 63 ರೈಲುಗಳಿವೆ. ಗ್ರೀನ್‌ಲೈನ್, ಪರ್ಪಲ್ ಲೈನ್ ಸೇರಿ 57 ರೈಲುಗಳಿವೆ. ಯೆಲ್ಲೋ ಲೈನ್‌ನಲ್ಲಿ 6 ರೈಲುಗಳಿವೆ. ಇದನ್ನೂ ಓದಿ: ರಸ್ತೆಯಲ್ಲಿ ಕಸ ಸೋರಿಕೆ – GBA ಕಸದ ಲಾರಿಗೆ ಬಿತ್ತು 10,000 ರೂ. ದಂಡ
ಗ್ರೀನ್ ಮತ್ತು ಪರ್ಪಲ್ ಲೈನ್‌ಗೆ 21 ಹೊಸ ರೈಲುಗಳು, ಯೆಲ್ಲೋ ಲೈನ್‌ಗೆ 9 ರೈಲುಗಳು ಬರಲಿವೆ. ಹೆಚ್ಚುವರಿಯಾಗಿ 6 ರೈಲುಗಳ ಆರ್ಡರ್ ನೀಡಲಾಗಿದೆ. ಪಿಂಕ್‌ಲೈನ್‌ನ ಕಾಳೇನ ಅಗ್ರಹಾರ ಟು ನಾಗವಾರ 16 ರೈಲುಗಳು, ಹೆಚ್ಚುವರಿಯಾಗಿ 7 ರೈಲುಗಳನ್ನು ಆರ್ಡರ್ ನೀಡಿದ್ದು, ಪಿಂಕ್ ಲೈನ್‌ಗೆ ಒಟ್ಟು 23 ರೈಲುಗಳು ಬರಲಿವೆ ಎಂದು ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಸಿಲ್ಕ್ ಬೋರ್ಡ್ ಟು ಕೆಆರ್ ಪುರ 16 ರೈಲು, ಕೆ.ಆರ್ ಪುರ ಟು ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ 21 ರೈಲು, ಬ್ಲೂ ಲೈನ್‌ಗೆ ಒಟ್ಟು 37 ರೈಲುಗಳನ್ನು ಆರ್ಡರ್ ನೀಡಲಾಗಿದೆ. ಈಗಿರುವ ಪರ್ಪಲ್, ಗ್ರೀನ್, ಯೆಲ್ಲೋ ಮೂರು ಲೈನ್‌ಗಳು ಹಾಗೂ ಓಪನ್ ಆಗಲಿರುವ ಬ್ಲೂ, ಪಿಂಕ್ ಎರಡು ಲೈನ್‌ಗಳಿಗೂ ಹೊಸ ರೈಲುಗಳು ಬಂದರೆ, 3 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಆರಂಭಿಸಲಿವೆ. ಸದ್ಯ ನಮ್ಮ ಮೆಟ್ರೋ ಬಳಿ 63 ರೈಲುಗಳಿದ್ದು, ಹೊಸದಾಗಿ 96 ರೈಲುಗಳ ಸೇರ್ಪಡೆಯಾದರೆ, ನಮ್ಮ ಮೆಟ್ರೋ ಬಳಿ ಒಟ್ಟು 159 ರೈಲುಗಳು ಆಗಲಿವೆ. ಇದನ್ನೂ ಓದಿ: ತ್ರಿವರ್ಣ ಧ್ವಜ ಭಾರತದ ಹೆಮ್ಮೆ, ಸ್ವಾಭಿಮಾನದ ಸಂಕೇತ: ಸಿದ್ದರಾಮಯ್ಯ


