ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಎಡಬಿಡದೇ ಸುರಿದ ಭಾರೀ ಮಳೆಗೆ ನಗರದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಉತ್ತರ ಬೆಂಗಳೂರಿನ ಅತಿದೊಡ್ಡ ಟೆಕ್ ಪಾರ್ಕ್‍ಗಳಲ್ಲಿ ಒಂದಾದ ಮಾನ್ಯತಾ ಟೆಕ್ ಪಾರ್ಕ್ ಕೂಡ ಜಲಾವೃತಗೊಂಡಿದೆ. ಈ ಹಿನ್ನೆಲೆ ಕೆಲವು ನೌಕರರು ತಮ್ಮ ಕಚೇರಿಗೆ ತಲುಪಲಾಗದೇ ಮನೆಗೆ ಮರಳಬೇಕಾಯಿತು.
Advertisement
ಮಾನ್ಯತಾ ಟೆಕ್ ಪಾರ್ಕ್ ಹಿಂಭಾಗದ ರಾಮಯ್ಯ ಲೇಔಟ್ ರಸ್ತೆಗಳು ಮಳೆ ನೀರು ಹಾಗೂ ರಾಜಕಾಲುವೆ ನೀರಿನಿಂದ ತುಂಬಿ ಹರಿಯುತ್ತಿದೆ. ಎಲಿಮೆಂಟ್ಸ್ ಮಾಲ್ ಮುಂಭಾಗದ ರಸ್ತೆ ನದಿಯಂತೆ ಮಾರ್ಪಾಡುಗೊಂಡಿದ್ದು, ರಸ್ತೆಯಲ್ಲಿ ಹಲವರು ವಾಹನಗಳು ಕೆಟ್ಟು ನಿಂತಿದೆ. ಹಾಗಾಗಿ ಎರಡು ಭಾಗದ ರಸ್ತೆಗಳನ್ನು ಕೂಡ ಬ್ಲಾಕ್ ಮಾಡಲಾಗಿದೆ. ಥಣಿಸಂದ್ರ ಮುಖ್ಯರಸ್ತೆ ಕೂಡ ಸಂಪೂರ್ಣ ಜಲಾವೃತಗೊಂಡಿದೆ. ಇದನ್ನೂ ಓದಿ: ಮಹಾಮಳೆಗೆ ನಲುಗಿದ ರಾಜ್ಯ ರಾಜಧಾನಿ- 100ಕ್ಕೂ ಹೆಚ್ಚು ಮನೆಗೆ ನುಗ್ಗಿದ ನೀರು, ಕೆರೆಯಂತಾದ ರಸ್ತೆಗಳು
Advertisement
When whole Bangalore is playing how can #Manyata not in match..#BengaluruRains pic.twitter.com/1sYjea2pKh
— Pruthvin Reddy (@Pruthvinreddy) September 5, 2022
Advertisement
ಮಾನ್ಯತಾ ಪಕ್ಕದ ರಾಮಯ್ಯ ನಾರ್ತ್ ಸಿಟಿ ಲೇಔಟ್ ಮಳೆ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದು, ಪ್ರತಿಷ್ಟಿತ ಬಡಾವಣೆಗೆ ನೀರು ನುಗ್ಗಿದೆ. ಅಲ್ಲದೇ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಎಸ್‍ವಿಎನ್ ಸ್ಕೂಲ್ ಜಲಾವೃತಗೊಂಡಿದ್ದು, ಶಾಲೆಗೆ ಆಡಳಿತ ಮಂಡಳಿ ರಜೆ ಘೋಷಿಸಿದೆ. ಮಾನ್ಯತಾ ಪಕ್ಕದ ರಾಮಯ್ಯ ನಾರ್ತ್ ಸಿಟಿ ಲೇಔಟ್ ಸಂಪೂರ್ಣ ಮುಳುಗಡೆಯಾಗಿದ್ದು, ನಾನೂರಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಮನೆಯಿಂದ ಹೊರಬರಲಾಗದೇ ಜನ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಮಳೆಯ ಆರ್ಭಟ – ವಿಧಾನಸೌಧಕ್ಕೂ ನುಗ್ಗಿದ ನೀರು
Advertisement
ಮತ್ತೊಂದೆಡೆ ಬೆಳ್ಳಂದೂರು ಕೆರೆ ಕೋಡಿ ತುಂಬಿದ ಹಿನ್ನಲೆ ಬೆಳ್ಳಂದೂರು ಲೇಕ್ ರೋಡ್ ಡೇಂಜರ್ ಝೋನ್‍ನಲ್ಲಿದೆ. ಭಾರೀ ಮಳೆಗೆ ಬೆಳ್ಳಂದೂರು ರಾಜಕಾಲುವೆಯ ನೀರು ಮಸೀದಿ, ಮನೆ, ಅಪಾರ್ಟ್‍ಮೆಂಟ್, ಅಂಗಡಿ, ರಸ್ತೆಗಳಿಗೆ ನುಗ್ಗಿದ್ದರಿಂದ ಜನ ಪರದಾಡುತ್ತಿದ್ದಾರೆ.