– ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಸಂಚಾರ ನಿರ್ಬಂಧ
ಬೆಂಗಳೂರು: 2024ರ ಹೊಷವರ್ಷ (New Year 2024) ಸಂಭ್ರಮಾಚರಣೆಗೆ ಕ್ಷಣಗಣನೆ ಬಾಕಿಯಿದೆ. ನೂತನ ವರ್ಷವನ್ನ ಬರಮಾಡಿಕೊಳ್ಳೋದಕ್ಕೆ ಜನರು ಕಾತುರದಿಂದ ಕಾಯ್ತಿದ್ದಾರೆ. ಅದೇ ರೀತಿ ಯಾವುದೇ ಅನಾಹುತ ಆಗದಂತೆ ಎಚ್ಚರಿಕೆ ವಹಿಸಲು ಪೊಲೀಸರು (Police) ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಹೊಸವರ್ಷದ ಖುಷಿಯಲ್ಲಿ ಯಾವುದೇ ಅನಾಹುತ ಆಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಹೊಸವರ್ಷದ ಸಂಭ್ರದ ವೇಳೆ ಕೆಲ ಪುಂಡರು ಕುಡಿದು ಫ್ಲೈಓವರ್‌ಗಳ ಮೇಲೆ ವ್ಹೀಲಿಂಗ್ ಮಾಡುವ ಹುಚ್ಚಾಟ ನಡೆಸುತ್ತಾರೆ, ಅತಿವೇಗವಾಗಿ ವಾಹನ ಚಲಾಯಿಸೋದು ಮಾಡ್ತಾರೆ. ಇದರಿಂದ ಸಾಕಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಮಾಡದ ತಪ್ಪಿಗೆ ಆಸ್ಪತ್ರೆ ಸೇರುವಂತಾಗಿದೆ. ಇದೇ ಕಾರಣಕ್ಕೆ ನಗರದ ಪ್ರಮುಖ ಫ್ಲೈಓವರ್‌ಗಳನ್ನ ಡಿಸೆಂಬರ್ 31ರ ರಾತ್ರಿ ಬಂದ್ ಮಾಡಲಾಗಿದೆ.
Advertisement
Advertisement
ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ನಗರದ ಪ್ರಮುಖ ಫ್ಲೈಓವರ್‌ಗಳನ್ನ ಪಟ್ಟಿ ಮಾಡಿದ್ದು, ಏರ್ಪೋರ್ಟ್ ಫ್ಲೈಓವರ್ ಹೊರತುಪಡಿಸಿ ಉಳಿದೆಲ್ಲ ಫ್ಲೈಓವರ್ ಬಂದ್ ಮಾಡಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ವಿಕ್ರಂ ಸಿಂಹ ಬಂಧನದಿಂದ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ – ಕಾಂಗ್ರೆಸ್ ಟ್ವೀಟ್
Advertisement
Advertisement
ಯಾವ್ಯಾವ ಫ್ಲೈಓವರ್ ಬಂದ್?
ಹೆಣ್ಣೂರು ಫ್ಲೈಓವರ್, ಐಟಿಸಿ ಫ್ಲೈಓವರ್, ಬಾಣಸವಾಡಿ ಮುಖ್ಯರಸ್ತೆ ಫ್ಲೈಓವರ್, ಲಿಂಗರಾಜಪುರಂ ಫ್ಲೈಓವರ್, ಹೆಣ್ಣೂರು ಮುಖ್ಯರಸ್ತೆ ಫ್ಲೈಓವರ್, ಕಲ್ಪಳ್ಳಿ ರೈಲ್ವೆಗೇಟ್ ಫ್ಲೈಓವರ್, ದೊಮ್ಮಲೂರು ಫ್ಲೈಓವರ್, ನಾಗವಾರ ಫ್ಲೈಓವರ್, ಮೇಡಹಳ್ಳಿ ಫ್ಲೈಓವರ್, ಎನ್‌ಜೆಎ ರೋಡ್ ಫ್ಲೈಓವರ್, ದೇವರಬಿಸನಹಳ್ಳಿ ಫ್ಲೈಓವರ್, ಮಹದೇವಪುರ ಫ್ಲೈಓವರ್, ದೊಡ್ಡನಕ್ಕುಂದಿ ಫ್ಲೈಓವರ್, ಬನಶಂಕರಿ ರಾಣಿ ಚನ್ನಮ್ಮ ಫ್ಲೈಓವರ್, ಬನಶಂಕರಿ ಕೆಇಬಿ ಫ್ಲೈಓವರ್, ಬಸವನಗುಡಿ, ನ್ಯಾಷನಲ್ ಕಾಲೇಜು ಫ್ಲೈಓವರ್, ಜಯನಗರ, ದಾಮ್ಮಿಯಾ ಫ್ಲೈಓವರ್, ಮಡಿವಾಳ, ಅಗ್ರಹಾರ ಎಲಿವೇಟೆಡ್ ಫ್ಲೈಓವರ್, ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್, ಮೈಕೋ ಲೇಔಟ್, ಡೈರಿ ಸರ್ಕಲ್ ಫ್ಲೈಓವರ್‌ಗಳು ಬಂದ್ ಆಗಿರಲಿವೆ.
2023ರ ಡಿಸೆಂಬರ್ 31 ರಾತ್ರಿ 11 ಗಂಟೆಯಿಂದ 2024ರ ಜನವರಿ 1ರ ಬೆಳಗ್ಗಿನ ಜಾವ 6 ಗಂಟೆ ತನಕ ಬ್ಯಾರಿಕೇಡ್‌ಗಳನ್ನು ಹಾಕಿ ಯಾವುದೇ ವಾಹನ ಓಡಾಡದಂತೆ ನಿರ್ಬಂಧ ಮಾಡೋಕೆ ಸಿದ್ದತೆ ನಡೆಸಿದ್ದಾರೆ. ಜನಸಂದಣಿ ಜಾಸ್ತಿ ಇರುವ ಎಂಜಿ, ಬ್ರಿಗೇಡ್, ಕೋರಮಂಗಲ, ಮಹದೇವಪುರ ಗುರುತಿಸಲಾಗಿದೆ. ಸಾಕಷ್ಟು ಕಡೆ ಟ್ರಾಫಿಕ್ ಬದಲಾವಣೆಯನ್ನೂ ಸಹ ಪೊಲೀಸರು ಮಾಡಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – ಗೋವಾದಿಂದ ಮಂಗಳೂರಿಗೆ ದರವೆಷ್ಟು?