ಬೆಂಗಳೂರಿನ BSF ಯೋಧರಿಂದ ಸ್ವಚ್ಛತಾ ಅಭಿಯಾನ

Public TV
1 Min Read
BSF Soldiers

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜಯಂತಿ (ಅ.2) ಹಿನ್ನೆಲೆಯಲ್ಲಿ ‘1ನೇ ತಾರೀಖು, ಒಂದು ಗಂಟೆ’ ಘೋಷವಾಕ್ಯದೊಂದಿಗೆ ‘ಸ್ವಚ್ಛತಾ ಹೀ ಸೇವಾ’ (Swachhata Hi Seva) ಸ್ವಚ್ಛತಾ ಅಭಿಯಾನವನ್ನು ಬೆಂಗಳೂರಿನ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು (BSF Soldiers) ಹಮ್ಮಿಕೊಂಡಿದ್ದರು.

BSF Soldiers Swachhata Abhiyan

ಯಲಹಂಕದ ಸೆಡ್ಕೋ, BSF ಟೆಕ್ನಿಕಲ್ ಟ್ರೈನಿಂಗ್ ಸೆಂಟರ್‌ನ ಆವರಣದಲ್ಲಿ ಆಯೋಜನೆ ಮಾಡಿದ್ದ ಅಭಿಯಾನದಲ್ಲಿ, 500ಕ್ಕೂ ಹೆಚ್ಚು ಬಿಎಸ್‌ಎಫ್‌ ಯೋಧರು ಹಾಗೂ ತರಬೇತಿದಾರರು, ಬಾರ್ಡರ್ ವುಮೆನ್ಸ್ wives ಅಸೋಸಿಯೇಷನ್ ಸದಸ್ಯರು ಭಾಗಿಯಾಗಿದ್ದರು. ಟ್ರೈನಿಂಗ್ ಸೆಂಟರ್‌ನ ಆವರಣದ ಮೂಲೆ ಮೂಲೆಯನ್ನ ಸ್ವಚ್ಛಗೊಳಿಸಿದರು. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ಸ್ವಚ್ಛಾಂಜಲಿ ಅರ್ಪಿಸಿದ ಮೋದಿ

BSF Soldiers bengaluru

BSF ಟ್ರೈನಿಂಗ್ ಸೆಂಟರ್‌ನಲ್ಲಿ ಇನ್ಫರ್ಮಿನೇಷನ್ ಟೆಕ್ನಾಲಜಿ, ಸೈಬರ್ ಸೆಕ್ಯೂರಿಟಿ, ವೆಬ್ ಡಾಟಾ ಆ್ಯಂಡ್ ಕ್ಲೌಡ್ ಕಂಪ್ಯೂಟಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಎಲ್ಲಾ ತರಬೇತಿದಾರರು ಕೂಡ ಅಭಿಯಾನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಯಲಹಂಕದ ಸೆಡ್ಕೋ, BSF ಟೆಕ್ನಿಕಲ್ ಟ್ರೈನಿಂಗ್ ಸೆಂಟರ್‌ನ ಐಜಿ ಇಪೆನ್ ಪಿವಿ ಭಾಗವಹಿಸಿದ್ದರು.

ಇತ್ತೀಚಿನ `ಮನ್ ಕಿ ಬಾತ್’ನಲ್ಲಿ ಮೋದಿಯವರು (Narendra Modi) ಅ.1 ರಂದು ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ ಎಂಬ ಘೋಷಣೆಯೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಕರೆಕೊಟ್ಟಿದ್ದರು. ಅದರಂತೆ ಸ್ವತಃ ಮೋದಿ ಅವರೇ ಭಾನುವಾರ ಕಸ ಗುಡಿಸಿ ಸ್ವಚ್ಛತಾ ಅಭಿಯಾನಕ್ಕೆ (Swachhata Abhiyan) ಚಾಲನೆ ನೀಡಿದ್ದರು. ಇದನ್ನೂ ಓದಿ: ಮೋದಿಯೊಂದಿಗೆ ಸ್ವಚ್ಛಾಂಜಲಿಯಲ್ಲಿ ಭಾಗಿಯಾಗಿದ್ದ ಅಂಕಿತ್ ಬೈಯನ್‍ಪುರಿಯಾ ಯಾರು?

Web Stories

Share This Article