ಬೆಂಗಳೂರು: ಪ್ರಸಿದ್ದ ಬಸವನಗುಡಿ ಕಡಲೇಕಾಯಿ ಪರಿಷೆ (Basavanagudi Kadlekai Parishe) ನ.25 ಮತ್ತು 26 ರಂದು ನಡೆಯಲಿದೆ.
ಮುಜರಾಯಿ ಇಲಾಖೆ ಇಂದು ದಿನಾಂಕ ನಿಗದಿ ಮಾಡಿದೆ. ಎರಡು ದಿನಗಳ ಕಾಲ ನಡೆಯಲಿರುವ ಕಡಲೆಕಾಯಿ ಪರಿಷೆಗೆ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಬ್ರೇಕ್ ಹಾಕಲು ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: ಅಧಿಕಾರಿಗಳು ಜಡ್ಜ್ ಆಗಲು ಸಾಧ್ಯವಿಲ್ಲ : ಬುಲ್ಡೋಜರ್ ನ್ಯಾಯಕ್ಕೆ ಸುಪ್ರೀಂ ಎಚ್ಚರಿಕೆ
ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಇಂದು ಅಧಿಕಾರಿಗಳ ಜೊತೆ ಸಭೆ ಮಾಡಿ ಕಡಲೆಕಾಯಿ ಪರಿಷೆ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದಾರೆ.
ನ.15 ರಿಂದ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ (Malleshwaram Kadlekai Parishe) ಆರಂಭವಾಗಲಿದ್ದು ಸಂಜೆ 4.30ಕ್ಕೆ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದಾರೆ
ಮಲ್ಲೇಶ್ವರಂನ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕಾಡು ಮಲ್ಲೇಶ್ವರ ಗೆಳೆಯರ ಬಳಗ ಪರಿಷೆಯನ್ನು ಆಯೋಜಿಸಿದೆ. ನವೆಂಬರ್ 15 ರಿಂದ 18ರವರೆಗೆ ರೈತಸ್ನೇಹಿ ಕಡಲೆಕಾಯಿ ಪರಿಷೆ ನಡೆಯಲಿದೆ.