ಓಲಾ ಬೈಕ್ ನಿಲ್ಲಿಸುವಂತೆ ಸಾರಿಗೆ ಆಯುಕ್ತರಿಗೆ ಮನವಿ

Public TV
2 Min Read
RAPIDO BIKE

ಬೆಂಗಳೂರು: ಬೈಕ್ ಟ್ಯಾಕ್ಸಿ (Bike Taxi) ಬಂದ್ ಮಾಡಲೇ ಬೇಕು ಅಂತಾ ಆಟೋ ಚಾಲಕರು ಬೆಂಗಳೂರು ಬಂದ್ ಮಾಡಿದ್ರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಖಾಸಗಿ ಸಾರಿಗೆ ಒಕ್ಕೂಟದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರಸವೆ ನೀಡಿದ್ರು. ಈ ನಡುವೆ ರ್ಯಾಪಿಡೋ ಬೈಕ್ ಟ್ಯಾಕ್ಸಿಗೆ ತಕ್ಕರ್ ನೀಡಲು ಅನಧಿಕೃತವಾಗಿ ಓಲಾದವರು ಬೈಕ್ ಟ್ಯಾಕ್ಸಿ ಶುರು ಮಾಡಿದ್ದಾರೆ. ಬೈಕ್ ಟ್ಯಾಕ್ಸಿ ನಿಲ್ಲಿಸಿ ಇಲ್ವಾ ನಾವೂ ಆಪರೇಷನ್‍ ಓಲಾ ಮಾಡ್ತಿವಿ ಎಂದು ಚಾಲಕರು ಹೇಳುತ್ತಿದ್ದಾರೆ.

ola uber auto

ಹೌದು, ಆಟೋ ಚಾಲಕರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗ್ತನೇ ಇದೆ. Rapido ಬೈಕ್ ಟ್ಯಾಕ್ಸಿಯಿಂದ ನಮ್ಮಗೆ ಬ್ಯುಸಿನೆಸ್ ಆಗ್ತಿಲ್ಲ ಅಂತಾ ಹೋರಾಟ ಮಾಡ್ತಿದ್ದ ಆಟೋ ಚಾಲಕರಿಗೆ ಶಕ್ತಿ ಯೋಜನೆಯ ಎಫೆಕ್ಟ್ ಕೂಡ ಕಾಡ್ತಾನೇ ಇದೆ. ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಓಲಾ ಸಂಸ್ಥೆಯಿಂದ ಬೈಕ್ ಟ್ಯಾಕ್ಸಿ ಸೇವೆ ಶುರುವಾಗಿದೆ. 5 ಕಿಲೋ ಮೀಟರ್ ಗೆ 25 ರೂ, 10 ಕಿಲೋ ಮೀಟರ್ ಗೆ 50 ಬಾಡಿಗೆಯನ್ನ ನಿಗದಿ ಮಾಡಿ ಓಲಾ ಸಂಸ್ಥೆ ಬೈಕ್ ಟ್ಯಾಕ್ಸಿಯನ್ನ ರಸ್ತೆಗೆ ಬಿಟ್ಟಿದೆ. ಇದು ಅನಧಿಕೃತವಾದ ಸೇವೆ ಇದನ್ನ ನಿಲ್ಲಿಸಬೇಕು ಅಂತಾ ಸಾರಿಗೆ ಒಕ್ಕೂಟ ಸಾರಿಗೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಆಯುಕ್ತ ಯೋಗೇಶ್, ನಾವು ಯಾರಿಗೂ ಬೈಕ್ ಟ್ಯಾಕ್ಸಿಗೆ ಲೈಸನ್ಸ್ ನೀಡಿಲ್ಲ, ಓಲಾದಿಂದ ಅರ್ಜಿ ಬಂದಿದೆ. ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಶುರು ಮಾಡಿದ್ರೆ ಅದನ್ನ ನಿಲ್ಲಿಸೋ ಕಾರ್ಯ ಮಾಡ್ತೀವಿ, ಅದಷ್ಟು ಬೇಗ ಅದಕ್ಕಾಗಿ ಕಾರ್ಯಾಚರಣೆ ಮಾಡುತ್ತೇವೆ ಅಂತಾ ಹೇಳಿದ್ರು. ಇದನ್ನೂ ಓದಿ: ರಾಜ್ಯಸಭೆಯಲ್ಲಿ ಐತಿಹಾಸಿಕ ನಿರ್ಣಯ – ಸರ್ವಾನುಮತದಿಂದ ಮಹಿಳಾ ಮೀಸಲಾತಿ ಬಿಲ್‌ ಪಾಸ್‌

ಸಾರಿಗೆ ಇಲಾಖೆ ಏನಾದ್ರೂ ಇದಕ್ಕೆ ಕ್ರಮಕೈಗೊಳ್ಳದೇ ಹೋದ್ರೇ ಹೇಗೆ ರಾಜಕೀಯ ಪಕ್ಷಗಳು ಅಪರೇಷನ್ ಕಮಲ, ಅಪರೇಷನ್ ಹಸ್ತ ಮಾಡುತ್ತೋ ಹಾಗೆಯೇ ನಾವೆಲ್ಲ ಆಟೋ ಚಾಲಕರು ಅಪರೇಷನ್ ಓಲಾ ಮಾಡಬೇಕಾಗುತ್ತೆ ಅಂತಾ ಒಕ್ಕೂಟ ಎಚ್ಚರಿಕೆ ನೀಡಿದೆ. ಒಟ್ಟಿನಲ್ಲಿ Rapido ಬಳಿಕ ಓಲಾ ಬೈಕ್ ಶುರುವಾಗಿರೋದು ಆಟೋ ಚಾಲಕರಿಗೆ ನುಂಗಲಾರದ ತುತ್ತಾಗಿದೆ. ಮುಂದೆ ಇದರ ಹೋರಾಟ ಯಾವ ಹಂತಕ್ಕೆ ಹೋಗುತ್ತೋ ಕಾದುನೋಡಬೇಕಿದೆ.

Web Stories

Share This Article