ಬೆಂಗಳೂರು: ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ಮೋಜು ಮಸ್ತಿ ಮಾಡುವ ಬೈಕ್ ಹಾಗೂ ಕಾರು ಸವಾರರಿಗೆ ಬೆಂಗಳೂರು ಪೀಣ್ಯ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ.
ಗುರುವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 150ಕ್ಕೂ ಹೆಚ್ಚು ದ್ವಿಚಕ್ರವಾಹನಗಳಲ್ಲಿ ಜಾಲಿ ರೈಡ್ ಹೋಗುತ್ತಿದ್ದ ಯುವಕರನ್ನು ತಡೆದು ನಿಲ್ಲಿಸಿದ ಸಂಚಾರಿ ಪೊಲೀಸರು 70ಕ್ಕೂ ಹೆಚ್ಚು ಬೈಕ್ ಸೀಜ್ ಮಾಡಿದ್ದಾರೆ.
Advertisement
ಪೊಲೀಸರಿಗೂ ಕ್ಯಾರೆ ಎನ್ನದೆ ಬೈಕ್ ಸವಾರರು ಹೆದ್ದಾರಿಯಲ್ಲಿ ಕರ್ಕಶ ಶಬ್ಧ ಮಾಡಿಕೊಂಡು, ವೀಲಿಂಗ್ ಮಾಡುವ ಮೂಲಕ ಆತಂಕ ಸೃಷ್ಠಿಸಿದ್ದರು. ಬೆಂಗಳೂರು ನಗರದ ವಿವಿಧ ಏರಿಯಾದ ಯುವಕರು ಪೀಣ್ಯ, ಚಿಕ್ಕಬಿದರಕಲ್ಲು, ಮಾದವಾರ, ನೆಲಮಂಗಲ, ಡಾಬಸ್‍ಪೇಟೆ ಭಾಗದಲ್ಲಿ ಬೆಳಗಿನ ಜಾವದವರೆಗೂ ಭಯಾನಕ ವೀಲಿಂಗ್ ಸಾಹಸದಲ್ಲಿ ನಿರತರಾಗಿದ್ದರು.
Advertisement
Advertisement
ಮುನ್ನೆಚ್ಚರಿಕಾ ಕ್ರಮವಾಗಿ ಗೊರಗುಂಟೆಪಾಳ್ಯದಿಂದ ಆರಂಭವಾಗುವ ನೆಲಮಂಗಲ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಿ ರಸ್ತೆಯುದ್ದಕ್ಕೂ ಪೊಲೀಸ್ ನಿಲ್ಲಿಸಿದ್ದರು. ಇದ್ಯಾವುದನ್ನೂ ಲೆಕ್ಕಿಸದೇ ಕೆಳರಸ್ತೆಯಲ್ಲೇ ಯರ್ರಾಬಿರ್ರಿ ಸಾಗುತ್ತಿದ್ದಾಗ ತುಮಕೂರು ರಸ್ತೆಯ ಪಾರ್ಲೆ ಫ್ಯಾಕ್ಟರಿ ಬಳಿ ಕಾದು ಕುಳಿತು ಪೊಲೀಸರು ಬೈಕ್‍ಗಳನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಅರ್ಧದಷ್ಟು ಬೈಕ್ ಸವಾರರು ಹಿಂದಕ್ಕೆ ಚಲಿಸಿದ್ರೆ, ಇನ್ನೊಂದಿಷ್ಟು ಮಂದಿ ರಸ್ತೆ ಡಿವೈಡರ್ ಮೇಲೆ ಬೈಕ್ ಹತ್ತಿಸಿಕೊಂಡು ವಿರುದ್ಧ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ.
Advertisement
ಈ ಭಯಾನಕ ಬೈಕ್ ವೀಲಿಂಗ್‍ನಿಂದ ಸಾರ್ವಜನಿಕರು ಆತಂಕಗೊಂಡು ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ನಗರ ಹಾಗೂ ಗ್ರಾಮಾತಂರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.