ಈಜು ಬಾರದ ಬಾಲಕನನ್ನು ಕೆರೆಯಲ್ಲಿ ಮುಳುಗಿಸಿ ಚಿತ್ರ ಹಿಂಸೆ ಕೊಟ್ಟ ಯುವಕರು

Public TV
1 Min Read
collage Bengaluru youth

– ಈಜು ಬರಲ್ಲ ಉಸಿರುಗಟ್ಟುತ್ತಿದೆ ಎಂದು ಕಿರುಚಾಡಿದ ಬಾಲಕ

ಬೆಂಗಳೂರು: ಈಜು ಬಾರದ ಬಾಲಕನನ್ನು ಕೆರೆಯಲ್ಲಿ ಮುಳುಗಿಸಿ ಯುವಕರ ಗುಂಪೊಂದು ಚಿತ್ರ ಹಿಂಸೆ ನೀಡಿರುವ ಘಟನ ಸಿಲಿಕಾನ್ ಸಿಟಿಯ ಕಂಠೀರವ ಸ್ಟೇಡಿಯಂ ಬಳಿ ನಡೆದಿದೆ.

ಮ್ಯಾನುಯಲ್, ಸೂರ್ಯ ಮತ್ತು ಚರಣ್ ಅಪ್ರಾಪ್ತ ಬಾಲಕನನ್ನು ಕಂಠೀರವ ಸ್ಟೇಡಿಯಂ ಬಳಿಯ ಕೆರೆಗೆ ತಳ್ಳಿ ಈಜು ಬರಲ್ಲ ಉಸಿರುಗಟ್ಟುತ್ತಿದೆ ಎಂದು ಬಾಲಕ ಕಿರುಚಾಡಿದರೂ ಬಿಡದೆ ನೀರಿನಲ್ಲಿ ಮುಳುಗಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಬಾಲಕನನ್ನು ಕರೆಯ ದಡದಲ್ಲಿ ನಿಲ್ಲಿಸಿ ಅವನನ್ನು ಗುದ್ದಿಕೊಂಡು ಕೆರೆಗೆ ಹಾರಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವಕರು ಬಾಲಕನನ್ನು ಹಿಡಿದುಕೊಂಡು ನೀರಿನಲ್ಲಿ ಮುಳುಗಿಸುತ್ತಿರುವುದು, ದೈಹಿಕವಾಗಿ ಹಲ್ಲೆ ಮಾಡುತ್ತಿರುವುದು ಮತ್ತು ಅವಾಚ್ಯ ಪದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ. ಅಲ್ಲದೇ ಈ ಕೃತ್ಯವನ್ನು ಅವರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

collage Bengaluru youth boy lake swimming police

ಈ ವಿಡಿಯೋದಲ್ಲಿ ಬಾಲಕ ಅಣ್ಣ ನನಗೆ ಈಜು ಬರುವುದಿಲ್ಲ. ನನಗೆ ಉಸಿರಾಡಲು ಆಗುತ್ತಿಲ್ಲ ಬಿಟ್ಟು ಬಿಡಿ ಎಂದು ಬೇಡಿಕೊಂಡರೂ ಬಿಡದ ಯುವಕರು ಬಾಲಕನನ್ನು ನೀರಿನ ಒಳಗೆ ಎತ್ತಿಕೊಂಡು ಹೋಗಿ ಮುಳುಗಿಸಿದ್ದಾರೆ. ಬಾಹುಬಲಿ ನಾನು ಎಂದು ಹೇಳಿ ಎತ್ತಿ ಎಸೆದಿದ್ದಾರೆ. ಈ ಸಂಬಂಧ ಸಂಪಂಗಿರಾಮ ನಗರ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಕೇಸ್ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *