ಬೆಂಗಳೂರು: ಫೆಬ್ರವರಿ 27 ರಂದು ಮುಖ್ಯಮಂತ್ರಿ ಯಡಿಯೂರಪ್ಪನವರ 78 ವರ್ಷದ ಜನ್ಮ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿಶೇಷ ಅತಿಥಿಗಳಾಗಿದ್ದಾರೆ.
ಆದರೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಬರುತ್ತಾರಾ? ಅಂತ ಕುಮಾರಸ್ವಾಮಿ. ಕುಮಾರಸ್ವಾಮಿ ಬರುತ್ತಾರಾ ಎಂದು ಸಿದ್ದರಾಮಯ್ಯ ಪರಸ್ಪರ ಆಪ್ತರ ಬಳಿ ಮಾಹಿತಿ ಪಡೆದುಕೊಂಡ ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಅವರು ಭಾಗವಹಿಸದರೆ ತಾವು ಭಾಗವಹಿಸಬೇಕೋ ಬೇಡವೋ ಅನ್ನೋ ತೀರ್ಮಾನ ಕೈಗೊಳ್ಳುವ ದೃಷ್ಟಿಯಿಂದ ಪರಸ್ಪರ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನೊಂದು ಕಡೆ ಇಬ್ಬರು ಮಾಜಿ ಸಿಎಂಗಳು ಸಹಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೇ? ಬೇಡವೇ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಮಾಜಿ ಸಿಎಂಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಹಾಗೂ ಭಾಗವಹಿಸದಿದ್ದರೆ ಆಗುವ ಲಾಭ ಹಾಗೂ ನಷ್ಟದ ಬಗ್ಗೆಯು ತಲೆಕಡಿಸಿಕೊಂಡಿದ್ದು ಏನು ಮಾಡಬೇಕು ಅನ್ನೋ ಟೆನ್ಷನ್‍ಗೆ ಸಿಲುಕಿದ್ದಾರೆ. ಒಟ್ಟಾರೆ ಸಿಎಂ ಯಡಿಯೂರಪ್ಪನವರ ಜನ್ಮ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಜಿ ಮುಖ್ಯಮಂತ್ರಿಗಳಿಬ್ಬರ ನೆಮ್ಮದಿ ಕೆಡಿಸಿರುವುದಂತು ನಿಜ.