ಬೆಂಗಳೂರು: ರೈಲು ಸರಿಯಾದ ಸಮಯಕ್ಕೆ ಬಾರದೇ ಮತದಾನಕ್ಕೆ ಹೊರಟವರು ಮೂರೂವರೆ ಗಂಟೆಗಳ ಕಾಲ ಪರದಾಡಿದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.
ಇಂದು 2ನೇ ಹಂತದ ಮತದಾನ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಸಾವಿರಾರು ಮತದಾರರು ಉತ್ತರ ಕರ್ನಾಟಕಕ್ಕೆ ಹೊರಟಿದ್ರು. ಆದ್ರೆ ಯಶವಂತಪುರದಿಂದ 11 ಗಂಟೆಗೆ ಬೆಳಗಾವಿಗೆ ಹೊರಡಬೇಕಿದ್ದ ರೈಲು 2.15ಕ್ಕೆ ಆಗಮಿಸಿದೆ.
Advertisement
Advertisement
ಇದರಿಂದ ಕೆರಳಿದ ಪ್ರಯಾಣಿಕರು ಸಿಬ್ಬಂದಿ ಜೊತೆಯೇ ವಾಗ್ವಾದಕ್ಕಿಳಿದ್ರು. ಅಲ್ಲದೆ ಬಿಜೆಪಿ ಮತಗಳನ್ನು ತಪ್ಪಿಸಲು ಇಂಥಾ ಷಡ್ಯಂತ್ರ ಮಾಡಿದ್ದಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ರು.
Advertisement
ಈ ಬಗ್ಗೆ ಪ್ರಯಾಣಿಕರೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸ್ಪೆಷಲ್ ಟ್ರೈನ್ 9 ಗಂಟೆಗೆ ಇದೆ ಎಂದು ಹೇಳಿ 375 ರೂ. ಹಣ ತೆಗೆದುಕೊಂಡಿದ್ದಾರೆ. ಟಿಕೆಟ್ ಬುಕ್ ಆದ ಬಳಿಕ 11 ಗಂಟೆಗೆ ಟ್ರೈನ್ ಎಂದು ಹೇಳಿದರು. ಆ ನಂತರ ಮತ್ತೆ 11.30, 12.30 ಆಯ್ತು. ಇದೀಗ ಗಂಟೆ 1.30 ಆದ್ರೂ ಯಾವ ರೈಲು ಬರಲೇ ಇಲ್ಲ ಎಂದು ಯುವಕನೊಬ್ಬ ತನ್ನ ಆಕ್ರೋಶ ಹೊರಹಾಕಿದ್ದಾನೆ.
Advertisement