ಬೆಂಗಳೂರು: ಕೋಟಿ ಕೊಟ್ಟರೂ ಮಹಿಳೆಯರಿಗೆ ಸೀಟ್ ಕೊಡಲ್ಲ ಎಂದು ಬೆಂಗಳೂರಿನ ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು ಹಿಡಿದ್ದಾರೆ.
ಹೌದು. ಬರುವ ಡಿಸೆಂಬರ್ ತಿಂಗಳಿನಲ್ಲಿ ಮಣಿಕಂಠನ ದರ್ಶನ ಮಾಡಲು ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆ ಜಾಸ್ತಿ ಇದೆ. ಆದರೆ ಅಲ್ಲಿಗೆ ಹೋಗಲು ಕೋಟಿ ಕೊಟ್ಟರೂ ಮಹಿಳೆಯರಿಗೆ ಸೀಟ್ ಕೊಡಲ್ಲ. ನಮ್ಮ ಬಸ್ ಹತ್ತಿಸಲ್ಲ ಎಂದು ಕೆಲ ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಹೇಳುತ್ತಿದ್ದಾರೆ.
Advertisement
Advertisement
ಈಗಾಗಲೇ ಸುಪ್ರೀಂಕೋರ್ಟ್ ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶ ಕುರಿತಾದ ವಿಚಾರ ವಿಸ್ತ್ರತಪೀಠಕ್ಕೆ ವರ್ಗಾಯಿಸಿದೆ. ಇದರ ಬೆನ್ನಲ್ಲೇ ಒಂದಿಷ್ಟು ಉತ್ಸಾಯಿ ಯುವತಿಯರು ಶಬರಿಮಲೆಗೆ ಹೋಗುವ ಉತ್ಸಾಹ ತೋರಿದ್ರೂ ಟಿಕೆಟ್ ಮಾತ್ರ ಬುಕ್ ಮಾಡೋಕೆ ಟ್ರಾವೆಲ್ ಏಜೆನ್ಸಿಯವರು ಒಲ್ಲೆ ಅಂತಿದ್ದಾರೆ. ಕೋಟಿ ಕೋಟಿ ದುಡ್ಡನ್ನು ತಂದು ಸುರಿಯಿರಿ ಆದರೆ ಬಸ್ಸಿನಲ್ಲಿ ಮಹಿಳೆಯರಿಗೆ ಮಾತ್ರ ಸೀಟ್ ಕೊಡಲ್ಲ. ಹೆಣ್ಣು ಮಕ್ಕಳನ್ನು ನಾವು ಬಸ್ ಕೂಡ ಹತ್ತಿಸಲ್ಲ. ಮಹಿಳೆಯರಿಗೆ ಸೀಟ್ ಕೂಡ ಬುಕ್ ಮಾಡಲ್ಲ ಎಂದು ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು ಹಿಡಿದಿದ್ದಾರೆ.
Advertisement
ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳು, 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಶಬರಿಮಲೆಗೆ ಹೋಗಲು ಟಿಕೆಟ್ ಬುಕ್ ಮಾಡಲಾಗುತ್ತದೆ. ಆದರೆ ಈಗ ಅವರ ಐಡಿಗಳನ್ನು ಚೆಕ್ ಮಾಡಿ ವಯಸ್ಸು ಲೆಕ್ಕ ಹಾಕಿ ಟಿಕೆಟ್ ಬುಕ್ ಮಾಡಿಕೊಡುತ್ತೇವೆ ಎಂದು ಕೆಲ ಏಜೆನ್ಸಿ ಅವರು ಹೇಳಿದರೆ, ಇನ್ನೂ ಕೆಲವು ಟ್ರಾವೆಲ್ಸ್ ನವರು ಶಬರಿಮಲೆಯ ಆಸು-ಪಾಸು ಕೂಡ ಹೋಗದೇ ದೂರದ ಸ್ಟಾಪ್‍ಗಳಲ್ಲಿ ಮಹಿಳೆಯರನ್ನು ಬಿಡುತ್ತೇವೆ ನಾವು ರಿಸ್ಕ್ ತೆಗೆದುಕೊಳ್ಳಲ್ಲ ಎಂದಿದ್ದಾರೆ.
Advertisement
ನವೆಂಬರ್ ತಿಂಗಳಲ್ಲಿ ಅಯ್ಯಪ್ಪ ದೇಗುಲಕ್ಕೆ ತೆರಳುವ ಭಕ್ತಾದಿಗಳ ಸಂಖ್ಯೆ ಹೆಚ್ಚು. ಈಗ ಬಸ್ಸಿನವರು ಕೊಟ್ಟ ಶಾಕ್‍ಗೆ ಶಬರಿಮಲೆಗೆ ಹೋಗಬೇಕು ಅಂದುಕೊಂಡಿದ್ದ ಮಹಿಳೆಯರು ಥಂಡಾ ಹೊಡೆದಿದ್ದಾರೆ.