ಬೆಂಗಳೂರು: ಗೇಮಿಂಗ್ ಆಡಲು ಬಳಕೆ ಮಾಡುವ ಎಕ್ಸ್‌ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದ ಯುವತಿ, ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಶಾಕ್ ಆಗಿದ್ದಾರೆ. ತಾವು ಮಾಡಿದ್ದ ಆರ್ಡರ್ ಬಾಕ್ಸ್‌ನಲ್ಲಿ ಹಾವು ನೋಡಿ ಯುವತಿ ಬೆಚ್ಚಿಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಸರ್ಜಾಪುರದಲ್ಲಿ ವಾಸವಾಗಿರುವ ಯುವತಿ ಎರಡು ದಿನದ ಹಿಂದೆ ಎಕ್ಸ್‌ಬಾಕ್ಸ್ ಕಂಟ್ರೋಲರ್ (Xbox Controller) ಆರ್ಡರ್ ಮಾಡಿದ್ದರು. ಆರ್ಡರ್ ತಲುಪಿದ ಕೆಲ ನಿಮಿಷದಲ್ಲಿ ಬಾಕ್ಸ್ ಓಪನ್ ಮಾಡಿದ್ದಾರೆ. ತಕ್ಷಣ ಒಳಗಡೆ ಇದ್ದ ಹಾವು ಹೊರಬಂದಿದೆ. ಇದರಿಂದ ಯುವತಿ ಬೆಚ್ಚಿಬಿದ್ದಿದ್ದಾರೆ. ಆನ್‌ಲೈನ್ ಡೆಲಿವರಿ ಕಂಪನಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಅವಧಿ ಮೀರಿದ ಪದಾರ್ಥಗಳ ಮಾರಾಟ – ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳಿಂದ ಕ್ಷಿಪ್ರ ಕ್ರಮ!
Advertisement
Advertisement
ಅದೃಷ್ಟವಶಾತ್, ವಿಷಪೂರಿತ ಹಾವು ಪ್ಯಾಕೇಜಿಂಗ್ ಟೇಪ್‌ಗೆ ಅಂಟಿಕೊಂಡಿತ್ತು. ಇದರಿಂದ ಬಾಕ್ಸ್ ಓಪನ್ ಮಾಡಿದ ಯುವತಿ ಅಪಾಯದಿಂದ ಪಾರಾಗಿದ್ದಾರೆ. ಇಲ್ಲದಿದ್ದರೆ ಹಾವು ಕಚ್ಚುವ ಸಾಧ್ಯತೆ ಇತ್ತು. ಆಘಾತದ ಹೊರತಾಗಿಯೂ, ಅವರು ಘಟನೆಯ ವೀಡಿಯೋವನ್ನು ಸೆರೆಹಿಡಿದಿದ್ದಾರೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Advertisement
ಅರ್ಧ ತೆರೆದಿರುವ ಆನ್‌ಲೈನ್ ಡೆಲಿವರಿ ಪ್ಯಾಕೇಜ್ ಅನ್ನು ಬಕೆಟ್‌ನಲ್ಲಿ ಇರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಬಕೆಟ್ ಒಳಗೆ ಪ್ಯಾಕೇಜಿಂಗ್ ಟೇಪ್‌ನಲ್ಲಿ ಸಿಲುಕಿಕೊಂಡಿದ್ದ ನಾಗರಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಇದನ್ನೂ ಓದಿ: ದರ್ಶನ್ ಅರೆಸ್ಟ್ ಮಾಡಿದ್ದೇ ರಣ ರೋಚಕ – ಆ ಒಂದು ಕ್ಷಣ ಮಿಸ್ ಆಗಿದ್ರೆ ಏನಾಗ್ತಿತ್ತು?
Advertisement
ಈ ಹಾವು ಸ್ಪೆಕ್ಟಾಕಲ್ಡ್ ಕೋಬ್ರಾ ಎಂದು ಗುರುತಿಸಲಾಗಿದೆ. ಇದು ಕರ್ನಾಟಕಕ್ಕೆ ಸ್ಥಳೀಯವಾಗಿರುವ ಅತ್ಯಂತ ವಿಷಕಾರಿ ಹಾವಿನ ಜಾತಿಯಾಗಿದೆ. ಅದನ್ನು ಸೆರೆಹಿಡಿದು ನಂತರ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ ಎಂದು ವರದಿಯಾಗಿದೆ.