– ವಿಮಾನ ನಿಲ್ದಾಣದ ಕಸ್ಟಮ್ಸ್ ಇನ್ಸ್ ಪೆಕ್ಟರ್‍ನಿಂದ ಅತ್ಯಾಚಾರ
ಬೆಂಗಳೂರು: ನಗದರಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಮಹಿಳಾ ಪೊಲೀಸ್ ಪೇದೆ ಮೇಲೆ ವಿಮಾನ ನಿಲ್ದಾಣದ ಕಸ್ಟಮ್ಸ್ ಇನ್ಸ್ ಪೆಕ್ಟರ್ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
Advertisement
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಇನ್ಸ್ ಪೆಕ್ಟರ್ ಹೇಮರಾಜ್ ಗುರ್ಜರ್ ತನ್ನ ಮೇಲೆ ಅತ್ಯಾಚಾರವೆಸಗಿರೋದಾಗಿ 29 ವರ್ಷದ ಮಹಿಳಾ ಸಿಐಎಸ್‍ಎಫ್ ಪೇದೆ ಆರೋಪಿಸಿದ್ದಾರೆ.
Advertisement
ಏನಿದು ಆರೋಪ: ಮದುವೆಯಾಗೋದಾಗಿ ನಂಬಿಸಿ, ಪೋಷಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಯಲಹಂಕ ಉಪನಗರದ ನಿವಾಸಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ನಂತರ ಮದುವೆಯಾಗೋಕೆ ಹೇಮರಾಜ್ ನಿರಾಕರಿಸಿದ್ದು, ಮದುವೆಯಾಗುವಂತೆ ಮಹಿಳಾ ಪೊಲೀಸ್ ಪೇದೆ ಒತ್ತಾಯಿಸಿದ್ದಾರೆ. ಈ ವೇಳೆ ಆತ ತನಗೆ ಮೊದಲೆ ಮದುವೆಯಾಗಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. 2013 ರಲ್ಲೇ ಮದುವೆಯಾಗಿ ಎರಡು ಮಕ್ಕಳಿದ್ದು, ಹೆಂಡತಿ ಮಕ್ಕಳು ರಾಜಸ್ಥಾನದಲ್ಲಿ ವಾಸವಿರೋದಾಗಿ ಹೇಳಿದ್ದಾನೆ.
Advertisement
ಹೇಮರಾಜ್ ವಿರುದ್ಧ ದೂರು ನೀಡೋದಾಗಿ ಮಹಿಳಾ ಪೇದೆ ಹೇಳಿದಾಗ, ರಾಜಸ್ಥಾನದಿಂದ ಬಂದ ಹೇಮರಾಜ್ ತಂದೆ ಸೃಜನ್ ಸಿಂಗ್ ಹಾಗೂ ಸಹೋದರ ನಿಹಾಲ ಸಿಂಗ್ ಮದುವೆಗೆ ನಿರಾಕರಿಸಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಮಹಿಳಾ ಪೊಲೀಸ್ ಪೇದೆ ಮಾರ್ಚ್ 5 ರಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement
ಆದರೆ ದೂರು ದಾಖಲಾಗಿ 9 ದಿನಗಳಾದ್ರೂ ಬಾಗಲೂರು ಪೊಲೀಸರು ಆರೋಪಿಯನ್ನ ಬಂಧಿಸಿಲ್ಲ. ಕನಿಷ್ಟ ಪಕ್ಷ ಪೊಲೀಸರು ಆತನನ್ನು ಕರೆದು ವಿಚಾರಣೆ ಕೂಡ ನಡೆಸಿಲ್ಲ. ಪೊಲೀಸರ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟದೆ ಅಂತಾ ಮಹಿಳಾ ಪೊಲೀಸ್ ಪೇದೆ ಅಳಲು ತೋಡಿಕೊಂಡಿದ್ದಾರೆ.