ಬೆಂಗಳೂರು: ರಾಜಧಾನಿಯ ಜನಪ್ರಿಯ ಮಾಲ್‌ವೊಂದರಲ್ಲಿ (Bengaluru Mall) ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಉದ್ಯೋಗಿ 28 ವಯಸ್ಸಿನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಲ್ ಮುಚ್ಚುವ ಸಮಯದಲ್ಲಿ ಹೊರಗಡೆ ಹೋಗುವಂತೆ ಹೇಳಿದ್ದಾರೆ. ಈ ವೇಳೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮೇಲೆಯೇ ಮಹಿಳೆ ಹಲ್ಲೆ ನಡೆಸಿದ್ದಾಳೆ.
Advertisement
Advertisement
ಮಹಿಳೆ ಅ.11 ರ ರಾತ್ರಿ 10:30 ಕ್ಕೆ ಚಲನಚಿತ್ರ ವೀಕ್ಷಣೆಗೆ ಬಂದಿದ್ದರು. ಆದರೆ ಪ್ರದರ್ಶನ ಮುಗಿದ ನಂತರ ಗಂಟೆಗಟ್ಟಲೆ ಅಲ್ಲೇ ಇದ್ದರು. ಮಹಿಳೆ ಮಾಲ್ ಆವರಣದಲ್ಲಿ ಮಧ್ಯರಾತ್ರಿ 2:30 ರ ವರೆಗೂ ಅಲ್ಲೇ ಇದ್ದರು. ಇದನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಮಾಲ್ ಒಳಗಡೆ ತಿರುಗಾಡುತ್ತಿದ್ದ ಮಹಿಳೆಯನ್ನು ಹೊರಗಡೆ ಹೋಗುವಂತೆ ಹೇಳಿದ್ದಾರೆ. ಆದರೆ ಮಹಿಳೆಯು ಸಿಬ್ಬಂದಿ ಹಾಗೂ ಮಾಲ್ ಮ್ಯಾನೇಜರ್ ಅವರನ್ನು ನಿಂದಿಸಿದ್ದಾಳೆ. ಅಲ್ಲದೇ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಬೆಳ್ಳೂರು ಪೊಲೀಸರು ತಿಳಿಸಿದ್ದಾರೆ.
Advertisement
ಮಾಲ್ ಮ್ಯಾನೇಜರ್, ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಗಸ್ತು ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಕರೆಗೆ ಪ್ರತಿಕ್ರಿಯಿಸಿ, ನಂತರ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಆದರೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆ, ಎಸ್‌ಐನ ಕೈಗೂ ಕಚ್ಚಿದ್ದಾಳೆ. ಅಲ್ಲದೇ ತನ್ನ ಶೂ ತೆಗೆದು ASI ಮೇಲೆ ಎಸೆದಿದ್ದಾಳೆ.
Advertisement
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353, 323, 324 ಮತ್ತು 504 ರ ಅಡಿಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೀಗ ಆಕೆಯ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಮಹಿಳೆ ಮಾಲ್‌ಗೆ ಹೋದಾಗ ಯಾವುದಾದರು ಸಮಸ್ಯೆ ಎದುರಿಸಿದ್ದಾರೆಯೇ ಎಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ…
Web Stories