ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ರಿಲೀಸ್ ಮಾಡಿದ್ರೆ ಬೆಂಗಳೂರು ಬಂದ್: ಪ್ರವೀಣ್ ಶೆಟ್ಟಿ ಎಚ್ಚರಿಕೆ

Public TV
1 Min Read
Kamal Haasan Praveen Shetty Thug Life Movie

ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಮಲ್ ಹಾಸನ್ (Kamal Haasan) ಬಗ್ಗೆ ವಿರೋಧ ಹೆಚ್ಚಾಗುತ್ತಿದೆ. ‘ಥಗ್ ಲೈಫ್’ ಸಿನಿಮಾ (Thug Life Cinema) ಕರ್ನಾಟಕದಲ್ಲಿ ರಿಲೀಸ್ ಮಾಡದಂತೆ ಕನ್ನಡ ಸಂಘಟನೆಗಳು ಎಚ್ಚರಿಕೆ ನೀಡಿವೆ. ಆದರೆ ಎಲ್ಲೋ ಒಂದು ಕಡೆ ಪಿತೂರಿ ಮಾಡಿ ಒಂದೇ ಒಂದು ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆದರೂ ಬೆಂಗಳೂರು ಬಂದ್ ಮಾಡುವ ಎಚ್ಚರಿಕೆಯನ್ನು ಕರವೇ ಪ್ರವೀಣ್ ಶೆಟ್ಟಿ (Praveen Shetty) ನೀಡಿದ್ದಾರೆ.

ಜೂನ್ 5ರಂದು ಎಲ್ಲಿಯೂ ಕೂಡ ಸಿನಿಮಾ ರಿಲೀಸ್ ಆಗಬಾರದು. ಒಂದು ವೇಳೆ ಸಿನಿಮಾ ರಿಲೀಸ್ ಆದರೆ ಕರ್ನಾಟಕದಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಲಿದೆ. ಜೂ.5ರಂದು ಸಿನಿಮಾ ರಿಲೀಸ್ ಆದರೆ ಸಿನಿಮಾ ಥಿಯೇಟರ್ ಒಳಗಡೆಗೆ ನುಗ್ಗಿ ಥಿಯೇಟರ್ ಪುಡಿಪುಡಿ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ‘ಥಗ್‌ ಲೈಫ್‌’ ಟೀಂ ಉದ್ಧಟತನ ಬಟಾಬಯಲು – ಕನ್ನಡ ಬಿಟ್ಟು 4 ಭಾಷೆಗಳಿಗೆ ಸಿನಿಮಾ ಡಬ್‌

ಕನ್ನಡ ಪರ ಸಂಘಟನೆಗಳ ಒಕ್ಕೊರಲಿನ ತೀರ್ಮಾನ ಮಾಡಿದ್ದೇವೆ. ನಾವೆಲ್ಲಾ ಸೇರಿ ಬೆಂಗಳೂರು ಬಂದ್ ಮಾಡುವ ಬಗ್ಗೆ ಎಚ್ಚರಿಕೆ ಕೊಟ್ಟಿದ್ದೇವೆ. ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಮಾತು ಸಹಿಸಲ್ಲ. ನಟ ಕ್ಷಮೆ ಕೇಳಬೇಕು. ನಾನು ಸದಾ ಕನ್ನಡ ಪರ. ಸಿನಿಮಾ ರಿಲೀಸ್ ಆದರೆ ಕನ್ನಡ ಸಂಘಟನೆಯ ಹಿರಿಯ ಹೋರಾಟಗಾರರ ಅಭಿಪ್ರಾಯ ಸಂಗ್ರಹಿಸಿ ಹೋರಾಟ ರೂಪಿಸುತ್ತೇವೆ ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಶಿವಣ್ಣನ ರೀತಿಯಲ್ಲಿ ಇನ್ಯಾರು ಕಮಲ್‌ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು: ಮುಖ್ಯಮಂತ್ರಿ ಚಂದ್ರು

Share This Article