ಬೆಂಗಳೂರು: ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡಿಕೊಂಡು ಜನರಿಗೆ ತೊಂದರೆ ಕೊಟ್ಟು, ಹಾವಳಿ ಇಡುತ್ತಿದ್ದವರಿಗೆ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ವೀಲಿಂಗ್ ಮಾಡಿಕೊಂಡು ತೊಂದರೆ ಕೊಡುತ್ತಿದ್ದ ಒಟ್ಟು 27 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ವೀರೇಶ್ ಆರ್, ಕುಶಾಲ್ ಆರ್, ದೀಕ್ಷಿತ್ ಆಚಾರ್ಯ, ಶಶಾಂಕ್ ಡಿ, ಸಾಗರ್ ಎಲ್ ದೀಪು, ಅಭಿಷೇಕ್ ಎಚ್.ಆರ್, ನರೇಂದ್ರ ಎನ್, ವಿಜಯ್ ಕುಮಾರ್ ಎನ್.ಎಸ್, ಸಂಜಯ್ ಸೇರಿದಂತೆ 27 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ವೀಲಿಂಗ್ ಮಾಡಲು ಬಳಸುತ್ತಿದ್ದ ಒಟ್ಟು 27 ಬೈಕ್‍ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
Advertisement
ಸೋಂಪುರ ಟೋಲ್ ಕಡೆಯಿಂದ ಹೊಸಕೆರೆಹಳ್ಳಿ ರಿಂಗ್ ರೋಡ್ ಕಡೆ ದಿನನಿತ್ಯ ವೀಲಿಂಗ್ ಮಾಡಿ ಬಂಧಿತರು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಆರೋಪಿಗಳ ವೀಲಿಂಗ್ ಹಾವಳಿಯಿಂದ ಬೇಸತ್ತ ಜನರು ಪೊಲೀಸರಿಗೆ ದೂರು ನೀಡಿದ್ದರು. ಸಾರ್ವಜನಿಕ ದೂರನ್ನ ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಮಾಡಿ ವೀಲಿಂಗ್ ಹಾವಳಿಕೊರರನ್ನ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ 189 ಐಎಂವಿ ಕಾಯ್ದೆಯಡಿಯಲ್ಲಿ ಬನಶಂಕರಿ ಬ್ಯಾಟರಾಯನಪುರ, ಬಸವನಗುಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.