ಬೆಂಗಳೂರು: ಸದ್ಯಕ್ಕೆ ಸಿಲಿಕಾನ್ ಸಿಟಿಯ ಹವಾಮಾನ ಊಟಿಯನ್ನು ನೆನಪಿಸುತ್ತಿದೆ. ಚುಮು ಚುಮು ಚಳಿ, ಬೆಳ್ಳಂಬೆಳಗ್ಗೆ ದಟ್ಟ ಮಂಜು ಕವಿದಿದೆ. ರಾಜಧಾನಿಯಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಮಲೆನಾಡ ಮಳೆ ಜನರ ಮೈನಡುಗಿಸುತ್ತಿದೆ.
Advertisement
ಹೌದು. ಬೆಂಗಳೂರಿನಲ್ಲಿ ಹವಮಾನ ವೈಪರೀತ್ಯ ಹಿನ್ನೆಲೆಯಲ್ಲಿ ನಗರದಲ್ಲಿ ದಟ್ಟ ಮಂಜು ಆವರಿಸಿಕೊಂಡಿದೆ. ರಾಜಧಾನಿಯಲ್ಲಿ ಶೀತಗಾಳಿಯ ಜೊತೆಗೆ ತುಂತುರು ಮಳೆ, ಮೋಡಕವಿದ ವಾತಾವರಣ ಇದೆ. ಈ ಮೂಲಕ ನಿನ್ನೆಯಿಂದ ಬೆಂಗಳೂರಿನಲ್ಲಿ ಮಲೆನಾಡ ಫೀಲ್ ಕೊಡುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಯಶವಂತಪುರದಲ್ಲಿ ಭೀಕರ ರಸ್ತೆ ಅಪಘಾತ!
Advertisement
Advertisement
ಬೆಂಗಳೂರಿನಲ್ಲಿ ಕನಿಷ್ಟ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಟ ಉಷ್ಣಾಂಶ 23 ಡಿಗ್ರೀ ಸೆಲ್ಸಿಯಸ್ ದಾಖಲಾಗಿದೆ. ಚಳಿಯೊಂದಿಗೆ ಮಳೆಯೂ ಸಹ ಜನರನ್ನ ಇನ್ನಷ್ಟು ಬೆಂಬಿಡದೇ ಕಾಡುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನೂ 2-3 ದಿನ ಇದೇ ವಾತಾವರಣ ಇರಲಿದೆಯಂತೆ.
Advertisement
ಬೆಂಗಳೂರಿನಲ್ಲಿ ಈ ವಾತಾವರಣ ಕಂಡುಬರಲು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರೋ ವಾಯುಭಾರ ಕುಸಿತ ಕಾರಣವಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರೋ ವಾಯುಭಾರ ಕುಸಿತದಿಂದ ತಮಿಳುನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇದರಿಂದಾಗಿ ನಮ್ಮ ರಾಜ್ಯದಲ್ಲೂ ಸಹ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಸದ್ಯಕ್ಕೆ ಮಳೆ ಮಂಜು ಬೆಂಗಳೂರಿನ್ನ ಆವರಿಸಿದೆ. ಶೀಥಲ ಗಾಳಿ 130 ಕಿಲೋ ವೇಗದಲ್ಲಿ ಚಲಿಸುತ್ತಿದೆ. ಬೆಂಗಳೂರಿನಲ್ಲಿ ಇಂದು ಅಥವಾ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸದ್ಯಕ್ಕೆ ಬೆಂಗಳೂರು ಥೇಟ್ ಊಟಿಯಂತೆ ಆಗಿದೆ.