ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಗುರುವಾರ ಮತ್ತು ಶುಕ್ರವಾರ ಕಾವೇರಿ ನೀರು (Cauvery Water) ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕಾವೇರಿ 5ನೇ ಹಂತ ಯೋಜನೆ ಅನುಷ್ಠಾನ ಸಂಬಂಧ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜೂನ್ 6 ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತವಾಗಲಿದೆ. ಕಾವೇರಿ-1, 2 ಹಾಗೂ 3 ಹಂತಗಳ ಘಟಕಗಳು ಬಂದ್ ಆಗಲಿದೆ. ಇದನ್ನೂ ಓದಿ: ಇಂದಿರಾ ಗಾಂಧಿಯನ್ನು ಹತ್ಯೆಗೈದ ಅಂಗರಕ್ಷಕನ ಪುತ್ರನಿಗೆ ಜಯ
ಕಾವೇರಿ 4ನೇ ಹಂತದ ಒಂದನೇ ಮತ್ತು ಎರಡನೇ ಘಟಕಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ2 ವರೆಗೆ ಬಂದ್ ಆಗಲಿರುವ ಕಾರಣ ಎರಡು ದಿನ ಬೆಂಗಳೂರು ನಗರದಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ. ಇದನ್ನೂ ಓದಿ: ಮೂರನೇ ಬಾರಿ ಎನ್‌ಡಿಎಗೆ ಆಶೀರ್ವಾದ ಸಿಕ್ಕಿದೆ: ದೇಶದ ಜನತೆಗೆ ಮೋದಿ ಕೃತಜ್ಞತೆ
ಘಟಕಗಳು ಬಂದ್ ಆಗಿರುವ ಕಾರಣ ಜೂನ್ 6 ಮತ್ತು 7 ರಂದು ನೀರು ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ (BWSSB) ಮನವಿ ಮಾಡಿದೆ.