ಬೆಂಗಳೂರು: ನಗರದಲ್ಲಿ ಈ ಬಾರಿ ನೆತ್ತಿ ಸುಡುವ ಬಿಸಿಲಿನ ಜೊತೆಗೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆ ನಗರದಲ್ಲಿ ಟ್ಯಾಂಕರ್ ನೀರಿನ ದಂಧೆ ಜೋರಾಗಿದೆ. ಒಂದು ಲೋಡ್ ಟ್ಯಾಂಕರ್ ನೀರಿನ ದರ ಕೇಳಿದ್ರೆ ನೀವೂ ಅಚ್ಚರಿ ಪಡುತ್ತೀರಿ. ಟ್ಯಾಂಕರ್ ನೀರಿನ ದಂಧೆಯನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.
ಬೇಸಿಗೆಯಲ್ಲಿ ಟ್ಯಾಂಕರ್ ಮಾಫಿಯಾದವರ ಆಟಾಟೋಪ ಜೋರಾಗಿರುತ್ತೆ. ಸಾಮಾನ್ಯ ಸಂದರ್ಭದಲ್ಲಿ ಟ್ಯಾಂಕರ್ ನೀರಿಗೆ 500 ರಿಂದ 600 ರೂ ಇರುತ್ತದೆ. ಆದ್ರೆ ಬೇಸಿಗೆಯಲ್ಲಿ 1 ಟ್ಯಾಂಕರ್ ನೀರನ್ನು ದುಪ್ಪಟ್ಟು ದರದಲ್ಲಿ ಮಾರುತ್ತಾರೆ. ಟ್ಯಾಂಕರ್ ನೀರಿನ ದಂಧೆಕೋರರು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
Advertisement
Advertisement
ವರದಿಗಾರ: ಸರ್.. 1 ಟ್ಯಾಂಕರ್ ನೀರೆಷ್ಟು..?
ಟ್ಯಾಂಕರ್ ಮಾಲೀಕ: 1 ಸಾವಿರ ರೂ. ಆಗುತ್ತೆ
ವರದಿಗಾರ: ಅಷ್ಟಾಗುತ್ತಾ?
ಟ್ಯಾಂಕರ್ ಮಾಲೀಕ: ನೀರು ಎಲ್ಲೂ ಸಿಕ್ತಿಲ್ಲ. ನಾನೇ 400 ರೂ. ಕೊಟ್ಟು ತರುತ್ತಿದ್ದೀನಿ..
Advertisement
ನೀರು ತರಿಸಿಕೊಂಡವರು: ಕೆಂಪಾಪುರ ಆ ಕಡೆಯೆಲ್ಲ 2 ಸಾವಿರ ಆಗುತ್ತೆ ಒಂದ್ ಲೋಡ್‍ಗೆ. ನೀರೇ ಎಲ್ಲೂ ಇಲ್ಲ. ಬೋರ್‍ವೆಲ್‍ಗಳಲ್ಲಿ ನೀರ್ ಬರ್ತಿಲ್ಲ. ಇಲ್ಲೆಲ್ಲ 1 ಸಾವಿರ ರೂ..
ಟ್ಯಾಂಕರ್ ಮಾಲೀಕ: ನಮ್ ಹತ್ರ 1 ಸಾವಿರ ರೂ. ಈಗ ಆರ್ಡರ್ ಕೊಟ್ರೆ ಸಂಜೆಗೆ ತಂದು ಕೊಡ್ತೀವಿ. ಇಮ್ಮಿಡಿಯೇಟ್ ನೀರು ಕೊಡಲ್ಲ. ಇವ್ರೇ ನಿನ್ನೆ ಹೇಳಿರೋದು. ಇವತ್ ತಂದ್ಕೊಡ್ತಿದ್ದೀವಿ..
ವರದಿಗಾರ: ಬೇಸಿಗೆ ಮುಗಿದ್ಮೇಲೆ ಕಡಿಮೆ ಆಗುತ್ತಾ..?
ಟ್ಯಾಂಕರ್ ಮಾಲೀಕ : ಹೌದು ಬೇಸಿಗೆ ಮುಗಿದ್ಮೇಲೆ ಕಡಿಮೆ ಆಗುತ್ತೆ. ಆಗ 600 ರೂ. ಆಗುತ್ತೆ ಲೋಡ್‍ಗೆ..
Advertisement
ನೀರು ಕೊಡೋರು 1 ಸಾವಿರ ಅಂದ್ರೆ ನೀರ್ ತರಿಸ್ಕೊಳ್ಳೋರೇ ಬೇರೆ ಕಡೆ 2 ಸಾವಿರ ಇದೆ. ಇಲ್ಲೇ ಪರವಾಗಿಲ್ಲ ಅಂತಾರೆ. ಇಷ್ಟೊಂದು ಹಣ ಕೊಟ್ರೂ ತಕ್ಷಣಕ್ಕೆ ನಿಮಗೆ ನೀರು ಸಿಗಲ್ಲ ಎಂದು ಬೇರೆ ನಾಟಕ ಆಡ್ತಾರೆ. ಕನಿಷ್ಠ ಇನ್ನೆರಡು ತಿಂಗಳು ನಗರದಲ್ಲಿ ಟ್ಯಾಂಕರ್ ದಂಧೆ ಎಗ್ಗಿಲ್ಲದೇ ನಡೆಯೋದಂತೂ ಪಕ್ಕಾ. ಪಾಪ ಜನಕ್ಕೆ ಬೇರೆ ದಾರಿ ಇಲ್ಲದೇ ಕೊಳ್ಳಲೇಬೇಕು. ಇವರ ಆಟಕ್ಕೆ ಬಿಬಿಎಂಪಿ ಕಡಿವಾಣ ಹಾಕಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv