ಬೆಂಗಳೂರು: ರಾಜಧಾನಿಯಲ್ಲಿ (Bengaluru Water Crisis) ನೀರಿನ ಸಮಸ್ಯೆ ತಲೆದೋರಿದೆ. ಸಮಸ್ಯೆ ನಿಭಾಯಿಸಲು ಹಲವು ಕ್ರಮಕೈಗೊಂಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (Bangaluru Water Supply and Sewerage Board), ನಗರದ ಈಜುಕೊಳಗಳಿಗೆ ಕಾವೇರಿ ನೀರನ್ನು ಬಳಸಬಾರದು ಎಂದು ಆದೇಶ ಹೊರಡಿಸಿದೆ.
ನಗರದ ಎಲ್ಲಾ ಕಡೆಗೂ ಕುಡಿಯುವ ನೀರು ಪೂರೈಸುವ ಅಗತ್ಯವಿದೆ. ಹೀಗಾಗಿ ಈ ಕ್ರಮಕೈಗೊಳ್ಳಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ಹಾಕಲಾಗುವುದು ಎಂದು ಮಂಡಳಿ ತಿಳಿಸಿದೆ. ಇದನ್ನೂ ಓದಿ: ಪೊಲೀಸ್ ಠಾಣೆಗೂ ತಟ್ಟಿದ ನೀರಿನ ಅಭಾವದ ಎಫೆಕ್ಟ್ – ಇಲಾಖೆ ವಾಹನದಲ್ಲಿ ಕ್ಯಾನ್ಗಳಲ್ಲಿ ನೀರು ಸಾಗಾಟ
Advertisement
Advertisement
ಈ ಬಾರಿ ಮುಂಗಾರು ಮಳೆ ಕೊರತೆಯಿಂದ ನೀರಿನ ಅಭಾತ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ನೀರು ಪೋಲಾಗುವುದನ್ನು ತಡೆಗಟ್ಟಲು ನಗರದಲ್ಲಿ ಕುಡಿಯುವ ನೀರನ್ನು ಈಜುಕೊಳ ಹಾಗೂ ಇತರೆ ಉದ್ದೇಶಗಳಿಗಾಗಿ ಬಳಕೆ ಮಾಡದಿರುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
Advertisement
ನಿಯಮ ಉಲ್ಲಂಘಿಸಿದವರಿಗೆ ಆರಂಭದಲ್ಲಿ 5 ಸಾವಿರ ರೂ. ದಂಡ ಹಾಕಲಾಗುವುದು. ನಂತರವೂ ನಿಯಮ ಉಲ್ಲಂಘಿಸಿದರೆ 5,500 ರೂ. ದಂಡದ ಜೊತೆಗೆ ಈಜುಕೊಳದ ಮಾಲೀಕನ ವಿರುದ್ಧ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದೆ. ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?
Advertisement
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈಜು ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿರುವವರಿಗೆ ಈ ನಿಯಮ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆಯಲ್ಲದೇ, ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಸಾರ್ವಜನಿಕರು ದೂರವಾಣಿ 1916 ಗೆ ಕರೆ ಮಾಡುವಂತೆ ತಿಳಿಸಿದೆ.