ಬೆಂಗಳೂರು: ಬೇಸಿಗೆಯಲ್ಲಿ ಉತ್ತರ ಕರ್ನಾಟಕ ಮಾತ್ರವಲ್ಲದೇ ಬೆಂಗಳೂರಿನಲ್ಲಿ ನೀರಿನ ಬರ ಇರುತ್ತದೆ. ಈಗ ಬೆಂಗಳೂರಿಗರಿಗೆ ಜಲಮಂಡಳಿ ಮತ್ತೊಂದು ಬಿಗ್ ಶಾಕ್ ಕೊಟ್ಟಿದೆ. ಕಾವೇರಿ ನೀರಿನ ದರ ಶೇ. 15 ರಷ್ಟು ಏರಿಕೆ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಪ್ರತ್ಯೇಕ ಕಮಿಟಿ ಕೂಡ ಮಾಡಿಕೊಂಡಿದೆ. ಶೇಕಡಾ 15 ರಷ್ಟು ಅಂದ್ರೆ 100 ರೂಪಾಯಿಗೆ 15 ರೂಪಾಯಿನಷ್ಟು ದರ ಹೆಚ್ಚಾಗಲಿದೆ.
Advertisement
ನೀರು ಪೂರೈಕೆ ಪ್ರಸ್ತುತ ದರದ ವಿವರ
* ಗೃಹ ಸಂಪರ್ಕ- ಪ್ರತಿ ಸಾವಿರ ಲೀಟರ್ 7 ರೂ.
* ನೀರು ಬಳಸುವ ಕಟ್ಟಡಗಳಿಗೆ- 8,001-25 ಸಾವಿರ ಲೀಟರ್ ವರೆಗೆ- ಪ್ರತಿ ಸಾವಿರ ಲೀಟರ್ ಗೆ 11 ರೂ.
* 25,001 ರಿಂದ 50 ಸಾವಿರ ಲೀಟರ್ ವರಗೆ- 26 ರೂ.
* 50 ಸಾವಿರ ಲೀ. ಮೇಲ್ಪಟ್ಟು ನೀರು ಬಳಸುವ ಕಟ್ಟಡ- ಪ್ರತಿ ಸಾವಿರ ಲೀಟರ್ ಗೆ 45 ರೂ.
* ಬೋರ್‍ವೆಲ್‍ಗಳಿಗೆ: 100 ರೂ.
* ಕೈಗಾರಿಕೆ, ಈಜುಕೊಳ, ಬಿಡದಿ ಕೈಗಾರಿಕಾ ಪ್ರದೇಶಗಳಿಗೆ- 90 ರೂ.
* ಸಗಟು ಬಳಕೆದಾರರಿಗೆ: ಪ್ರತಿ ಸಾವಿರ ಲೀಟರ್ ಗೆ- 10 ರೂ.
Advertisement
Advertisement
2014ರ ನಂತರ ಜಲಮಂಡಳಿ ನೀರಿನ ದರ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ನಿರ್ವಹಣೆ ದುಬಾರಿ ಆಗ್ತಿರೋ ಹಿನ್ನೆಲೆ, ನೀರಿನ ದರವನ್ನ ಹೆಚ್ಚು ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗ್ತಿದೆ. ಜಲಮಂಡಳಿಯಲ್ಲಿ ಸಿಬ್ಬಂದಿ ಕೊರತೆಯೂ ಕೂಡ ಉಂಟಾಗಿದ್ದು 3 ಸಾವಿರದ 500 ಹುದ್ದೆಗಳ ಪೈಕಿ, 1945 ಹುದ್ದೆಗಳ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
Advertisement
ಒಂದಡೆ ಬೆಂಗಳೂರಲ್ಲಿ ನೀರಿಗಾಗಿ ಜನ ಪರದಾಡ್ತಿದ್ರೆ, ಮತ್ತೊಂದಡೆ ಜಲಮಂಡಳಿಯಲ್ಲಿ ಅಧಿಕಾರಿಗಳ ಕೊರತೆ ಕಾಣುತ್ತಿದೆ. ಹೀಗಿರುವಾಗ ಜನರಿಗೆ ಜಲಮಂಡಳಿ ಸಮರ್ಪಕವಾಗಿ ನೀರು ಹೇಗೆ ಒದಗಿಸುತ್ತೆ ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.