ಬೆಂಗಳೂರು: ವಿಶ್ವದಾದ್ಯಂತ ಕೋವಿದ್-19(ಕೊರೊನಾ) ತಾಂಡವವಾಡ್ತಿದೆ. ಈಗಾಗಲೇ ಸಾವಿರಾರು ಜನರು ಸಾವನ್ನಪ್ದಿದ್ದಾರೆ. ಕರ್ನಾಟಕದಲ್ಲಿಯೂ ಒಂದು ಸಾವು ಆಗಿದ್ದು 5 ಜನರಲ್ಲಿ ಸೋಂಕು ಕಂಡು ಬಂದಿದೆ. ಈ ಡೆಡ್ಲಿ ಕೊರೊನಾ ವೈರಸ್‍ಗೆ ಮದ್ದು ಅಂದ್ರೆ ಬ್ರಾಂದಿ ಅನ್ನೋ ಹಾಸ್ಯಭರಿತ ಚರ್ಚೆಗಳು ಗುರುವಾರ ಮೇಲ್ಮನೆ ವಿಧಾನ ಪರಿಷತ್‍ನಲ್ಲಿ ನಡೆಯಿತು.
Advertisement
ಸಂವಿಧಾನ ಮೇಲೆ ಜೆಡಿಎಸ್‍ನ ಮರಿತಿಬ್ಬೇಗೌಡರು ಚರ್ಚೆ ಮಾಡುತ್ತಿದ್ದರು. ಈ ವೇಳೆ ದಿಢೀರ್ ಅಂತ ಕೊರೊನಾ ವೈರಸ್ ಬಗ್ಗೆ ಪ್ರಸ್ತಾಪ ಮಾಡಿದರು. ಕೊರೊನಾ ವಿಶ್ವಕ್ಕೆ ಬಂದು ಜನ ಸಾಯ್ತಿದ್ದಾರೆ. ಮುಕ್ಕೋಟಿ ದೇವರುಗಳು ಎಲ್ಲಿ ಹೋದರು ಅಂತ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಪ್ರಶ್ನೆ ಮಾಡಿದ್ರು. ದೇವರಿಂದಲೂ ಕೊರೊನಾ ಗುಣಪಡಿಸಲು ಸಾಧ್ತವಾಗ್ತಿಲ್ಲ ಅಂತ ಕಳವಳ ವ್ಯಕ್ತಪಡಿಸಿದರು. ಅ ಸಣ್ಣ ವೈರಸ್ ಕೊಲ್ಲಲು ನಮ್ಮಿಂದ ಆಗ್ತಿಲ್ಲ. ಅ ವೈರಸ್ ಸಾಯಿಸೋಕೆ ಬ್ರಾಂದಿ ರಾಮಬಾಣ ಅಂತ ಮರಿತಿಬ್ಬೇಗೌಡ ವಿಧಾನ ಪರಿಷತ್‍ನಲ್ಲಿ ತಿಳಿಸಿದರು.
Advertisement
Advertisement
ಬ್ರಾಂದಿ ಬಳಸೋದ್ರಿಂದ ಕೊರೊನಾ ದೂರ ಓಡಿಸಬಹುದಂತೆ. ಈಗ ಚರ್ಚೆಗಳು ನಡೆಯುತ್ತಿದೆ. ಹೀಗಾಗಿ ಅಬಕಾರಿ ಇಲಾಖೆಗೂ ಈಗ ಭರ್ಜರಿ ವ್ಯಾಪಾರ ಆಗುತ್ತೆ. ಅಬಕಾರಿ ಸಚಿವರು ಇನ್ನು ಸ್ವಲ್ಪ ದಿನ ಕೊರೊನಾ ಉಳಿಸಿಕೊಳ್ಳಬೇಕು. ಇದರಿಂದ ಅಬಕಾರಿ ಇಲಾಖೆಗೆ ಆದಾಯ ಹರಿದು ಬರುತ್ತದೆ ಅಂತ ಹಾಸ್ಯ ಮಾಡಿದ್ರು.
Advertisement
ಇಷ್ಟಕ್ಕೆ ಸುಮ್ಮನೆ ಆಗದ ಮರಿತಿಬ್ಬೇಗೌಡ ಜ್ಯೋತಿಷ್ಯಿಗಳ ವಿರುದ್ಧವೂ ಕಿಡಿಕಾರಿದ್ರು. ಬೆಳಗ್ಗೆ ಆದ್ರೆ ಸಾಕು ವಿಭೂತಿ ಬಳಿದುಕೊಂಡು ಟಿವಿಯಲ್ಲಿ ಜ್ಯೋತಿಷಿಗಳು ಬರ್ತಾರೆ. ಸಮಸ್ಯೆ ಪರಿಹಾರ ಮಾಡ್ತೀನಿ ಅಂತಾರೆ. ಆದರೆ ಈಗ ಇಡೀ ವಿಶ್ವವೇ ಕೊರೊನಾಗೆ ಗಢ-ಗಢ ಅಂತ ನಡುಗುತ್ತಿದೆ. ಈಗ ಅ ಜ್ಯೋತಿಷಿಗಳು ಎಲ್ಲಿ ಹೋದ್ರು. ಕೊರೊನಾ ತಡೆಯೋಕೆ ಆಗಲ್ವಾ ಅಂತ ಕಿಡಿಕಾರಿದ್ರು.
ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್, ಹಿಂದೆ ಪ್ಲೇಗ್ ಬಂತು ಅಂತ ಪ್ಲೇಗಮ್ಮ ಅಂತ ದೇವಾಲಯ ಪ್ರಾರಂಭ ಆಯ್ತು. ಈಗ ಕೋವಿಂದಮ್ಮ ಅಂತ ಪ್ರಾರಂಭ ಆಗುತ್ತೆ. ಅಲ್ಲಿ ಬ್ರಾಂದಿನೇ ತೀರ್ಥ ಕೊಡಬೇಕು ಅಂತ ಹಾಸ್ಯ ಚಟಾಕಿ ಹಾರಿಸಿದ್ರು.
ದೇವಾಲಯಗಳು, ಮಸೀದಿಗಳು, ಚರ್ಚ್ ಗಳು ಕೊರೊನಾಗೆ ಏನೂ ಮಾಡಲು ಸಾಧ್ಯವಿಲ್ಲ. ಅಷ್ಟು ದೇವರು ಇರೋದಾದ್ರೆ ಕೊರೊನಾ ಓಡಿಸಲಿ ನೋಡೋಣ ಅಂತ ದೇವರುಗಳಿಗೆ ಸವಾಲು ಹಾಕಿದ್ರು.
https://www.facebook.com/339166656101093/videos/532876047430875/