ಬೆಂಗಳೂರು: ಕಾಲೇಜು, ವಿಶ್ವವಿದ್ಯಾನಿಲಯದಲ್ಲಿ ಮೊಬೈಲ್, ಸಿಗರೇಟ್, ಡ್ರಗ್ಸ್‌ಗಳಿಗೆ ನಿಷೇಧ ಹೇರಿರುವುದನ್ನ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಬೆಂಗಳೂರು ವಿವಿ ಕಾಫಿ, ಟೀಯನ್ನೇ ಬ್ಯಾನ್ ಮಾಡಲು ಮುಂದಾಗಿದೆ.
ಹೌದು, ಇದೇನಪ್ಪ ಕಾಫಿ-ಟೀ ಯಾಕೆ ಬೆಂಗಳೂರು ವಿವಿ ಬ್ಯಾನ್ ಮಾಡಲು ಯೋಚಿಸುತ್ತಿದೆ ಎಂಬ ಪ್ರಶ್ನೆ ಹುಟ್ಟೋದು ಸಾಮಾನ್ಯ. ಹಲವರು ಬೆಳಗಾದರೆ ಸಾಕು, ದೊಡ್ಡ ದೊಡ್ಡ ಗ್ಲಾಸ್‍ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ಕೆಲವೊಮ್ಮೆ ಟೀ,ಕಾಫಿ ಕುಡಿಲಿಲ್ಲ ಅಂದರೆ ಈ ದಿನವೇ ವೇಸ್ಟ್ ಅಂತನೂ ಅನಿಸುತ್ತೆ. ಅಷ್ಟೇ ಏಕೆ ಕಾಲೇಜುಗಳಲ್ಲಿ ಕ್ಲಾಸ್ ಬಂಕ್ ಮಾಡಿ ಅಥವಾ ಬ್ರೇಕ್ ಟೈಮ್‍ನಲ್ಲಿ ಸ್ಟ್ರಾಂಗ್ ಟೀ ಕುಡಿದರೆ ಫ್ರೆಶ್ ಆಗುತ್ತೇವೆ. ಅಷ್ಟರಮಟ್ಟಿಗೆ ಟೀ, ಕಾಫಿಗೆ ಅಡಿಕ್ಟ್ ಆಗಿರುತ್ತಾರೆ. ಆದರೆ ಅದೇ ಟೀ, ಕಾಫಿಯನ್ನ ಬೆಂಗಳೂರು ವಿವಿ ಕ್ಯಾಂಪಸ್‍ನಲ್ಲಿ ಮಾರಾಟ ಮಾಡೋದನ್ನ ಬ್ಯಾನ್ ಮಾಡಲು ಚಿಂತನೆ ನಡೆಸಲಾಗಿದೆ.
Advertisement
Advertisement
ಟೀ ಮತ್ತು ಕಾಫಿಯಿಂದ ಅಸಿಡಿಟಿ ಬರುತ್ತೆ. ಆರೋಗ್ಯದ ದೃಷ್ಟಿಯಿಂದ ಕ್ರಮೇಣವಾಗಿ ನಿಷೇಧಿಸಲಾಗುವುದು. ಜೊತೆಗೆ ಕೆಎಂಎಫ್ ನಂದಿನಿ ಹಾಲನ್ನು ಮಾರಾಟ ಮಾಡಲಾಗುವುದೆಂದು ಬೆಂಗಳೂರು ವಿವಿ ಉಪಕುಲಪತಿ ವೇಣು ಗೋಪಾಲ್ ತಿಳಿಸಿದ್ದಾರೆ.
Advertisement
ಉಪಕುಲಪತಿಗಳ ಹೊಸ ಪ್ಲಾನ್‍ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ಹಾಸ್ಯಾಸ್ಪದ ನಿರ್ಧಾರ. ಅವರಿಗೆ ಅಸಿಡಿಟಿ ಬಂದರೆ ನಾವೇನು ಮಾಡಬೇಕು? ಇದು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡ ಹಾಗೆ ಆಗುತ್ತದೆ. ನಮಗೆ ಮೈಂಡ್ ಫ್ರೆಶ್ ಆಗೋಕೆ ಟೀ, ಕಾಫಿ ಬೇಕೇ ಬೇಕು ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
Advertisement
ಸದಾ ವಿವಾದಗಳಿಂದಲೇ ಸುದ್ದಿ ಆಗೋ ಬೆಂಗಳೂರು ವಿವಿ ಈಗ ಟೀ, ಕಾಫಿ ವಿಷಯದಲ್ಲೂ ಸುದ್ದಿ ಆಗ್ತಿರೋದು ವಿಪರ್ಯಾಸವಾಗಿದೆ.