ಬೆಂಗಳೂರು: ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಧೂಮಪಾನದ ನಶೆ ಏರಿಸುತ್ತಿದ್ದ, ಯುಬಿ ಸಿಟಿ ಮಳಿಗೆಯೊಂದಕ್ಕೆ ಪಾಲಿಕೆ ಆರೋಗ್ಯಾಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ.
ಭಾನುವಾರದಂದು ಯುಬಿ ಸಿಟಿಯಲ್ಲಿ ಇರುವ ಶಿರೋ ಎಂಬ ಮಳಿಗೆಯ ಮ್ಯಾನೇಜರ್ ಗೆ ಹದಿನೈದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಇದರ ಜೊತೆಗೆ ವಿಠಲ್ ಮಲ್ಯ ರಸ್ತೆಯಲ್ಲಿರುವ ಬಿಯರಿ ಕ್ಲಬ್‍ಗೆ ಬಿಬಿಎಂಪಿಯ ಕೆಎಂಸಿ ಆಕ್ಟ್ ಉಲ್ಲಂಘಿಸಿರುವ ಕಾರಣಕ್ಕೆ 64 ಸಾವಿರ ದಂಡ ವಿಧಿಸಲಾಗಿದೆ.
Advertisement
Advertisement
ಅಲ್ಲದೆ ಮಳಿಗೆಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದ್ದು, ನಿಯಮಗಳ ಪ್ರಕಾರ ನಡೆದುಕೊಳ್ಳದೆ ಇದ್ದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡುವುದಾದರೆ ಕಡ್ಡಾಯವಾಗಿ ಸ್ಮೋಕಿಂಗ್ ಝೋನ್ ಮಾಡಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
Advertisement
ಧೂಮಪಾನ ವಲಯದಲ್ಲಿ ತಿಂಡಿ, ಊಟ, ಕಾಫಿ ಮತ್ತು ಟೀ ಸರಬರಾಜು ಕೂಡಾ ಮಾಡುವ ಹಾಗಿಲ್ಲ. ಆದರೆ ಶಿರೋ ಮಳಿಗೆಯಲ್ಲಿ ಸ್ಮೋಕಿಂಗ್ ಝೋನ್ ಇಟ್ಟಿಲ್ಲ. ಅಲ್ಲದೆ ಮದ್ಯಪಾನ, ತಿಂಡಿ ಊಟದ ಸಪ್ಲೈ ಕೂಡಾ ಮಾಡಲಾಗುತಿತ್ತು. ಹೀಗಾಗಿ ದಂಡ ಹಾಕಲಾಗಿದೆ. ಇದರ ಜೊತೆಗೆ ಸ್ಕೈ ಬಾರ್, ಫರ್ಜಿ ಕೆಫೆ ದಾಳಿ ಮಾಡಿ ಕೆಲವು ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.