ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿ (Traffic Problem) ತಪ್ಪಿಸಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಸುರಂಗ ಮಾರ್ಗದ (Tunnel Road) ಯೋಜನೆ ರೂಪಿಸಿದ್ದಾರೆ. ಇದು ಬೆಂಗಳೂರು (Bengaluru) ಅಭಿವೃದ್ಧಿ ಮಂತ್ರಿಯ ಕನಸಿನ ಯೋಜನೆ ಎಂದೇ ಬಣ್ಣಿಸಲಾಗುತ್ತಿದೆ. ಆದರೆ ಈ ದುಬಾರಿ ಯೋಜನೆಗೆ ರಾಜ್ಯ ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕವಾಗಿದೆ.
ಗುರುವಾರ ರಾತ್ರಿ ಬೆಂಗಳೂರು ಅಭಿವೃದ್ಧಿ ಮಂತ್ರಿಯನ್ನು ಸಂಸದ ತೇಜಸ್ವಿ ಸೂರ್ಯ (Tejasvi surya) ಭೇಟಿ ಮಾಡಿ ಸುರಂಗ ಮಾಡುವುದು ಬೇಡ ಎಂದು ಮನವಿ ಮಾಡಿದರು. ಟನಲ್ ಬದಲು ಸಾರ್ವಜನಿಕ ಸಾರಿಗೆಗೆ ಹೆಚ್ಚು ಒತ್ತು ಕೊಟ್ಟರೆ ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಅಂತಾ ಡಿಕೆ ಶಿವಕುಮಾರ್‌ಗೆ ಸಂಸದ ತೇಜಸ್ವಿ ಸೂರ್ಯ ಸಲಹೆ ನೀಡಿದ್ದಾರೆ.
Advertisement
Advertisement
ಈ ವೇಳೆ ಬೆಂಗಳೂರು ಅಭಿವೃದ್ದಿ ದೃಷ್ಟಿಯಿಂದ ಡಿಸಿಎಂ ಮುಂದೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಡಿಕೆ ಶಿವಕುಮಾರ್‌ಗೆ ತೇಜಸ್ವಿ ಸೂರ್ಯ ನೀಡಿದ್ದಾರೆ. ಇದಕ್ಕೆ ಉಪ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅನುದಾನ ತಾರತಮ್ಯ, ಆರ್‌ಆರ್ ನಗರದಲ್ಲಿ ಅರ್ಧಕ್ಕೆ ನಿಂತಿವೆ ಕಾಮಗಾರಿಗಳು – ಬಿಎಸ್‌ವೈಯಿಂದ 3 ದಿನ ಸತ್ಯಾಗ್ರಹದ ಎಚ್ಚರಿಕೆ
Advertisement
ಬೆಂಗಳೂರು ಟನಲ್ – ಬೇಕಾ? ಬೇಡ್ವಾ?
ಬೆಂಗಳೂರಿನ ಅತಿ ದಟ್ಟಣೆ ರಸ್ತೆಗಳಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಮೊದಲ ಹಂತದಲ್ಲಿ 65 ಕಿಲೋ ಮೀಟರ್ ಸುರಂಗ ಪಥಕ್ಕೆ ಚಿಂತನೆ ನಡೆದಿದ್ದು ಪ್ರತಿ ಕಿಲೋಮೀಟರ್‌ಗೆ 450 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
Advertisement
ಸುರಂಗದಲ್ಲಿ ಒಟ್ಟು 6 ಪಥಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಬಳ್ಳಾರಿ ರಸ್ತೆ, ಎಸ್ಟೀಮ್ ಮಾಲ್, ಹಳೇ ಮದ್ರಾಸ್ ರಸ್ತೆ, ಟ್ರಿನಿಟಿ ರಸ್ತೆ, ಸರ್ಜಾಪುರ ರಸ್ತೆ, ಮೇಖ್ರಿ ಸರ್ಕಲ್, ಮಿಲ್ಲರ್ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆ, ಸಿರ್ಸಿ ಸರ್ಕಲ್, ಮಾಗಡಿ ರಸ್ತೆ, ತುಮಕೂರು ರಸ್ತೆ, ಯಶವಂತಪುರ, ಗೊರಗುಂಟೆ ಪಾಳ್ಯ, ಕೆ.ಆರ್.ಪುರ, ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಸುರಂಗ ನಿರ್ಮಿಸಲು ಚಿಂತನೆ ನಡೆದಿದೆ.
ಈಗ ಸುರಂಗ ಮಾರ್ಗದ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ. ಈ ಸುರಂಗ ಮಾರ್ಗದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ