ಬೆಂಗಳೂರು: ಬೆಂಗಳೂರು-ತುಮಕೂರು ಫ್ಲೈಓವರ್ (Bengaluru Tumakuru Flyover), ಭಾರೀ ಗಾತ್ರದ ವಾಹನಗಳಿಗೆ ಮುಂದಿನ ವರ್ಷವೇ ಮುಕ್ತವಾಗಲಿದೆ. ಕೇಬಲ್ ಅಳವಡಿಕೆ ಕಾರ್ಯ ಆರಂಭ ಆಗಿದ್ದು, ಮುಗಿಯೋಷ್ಟರಲ್ಲಿ ಇನ್ನೂ ಐದಾರು ತಿಂಗಳು ಬೇಕಾಗಬಹುದು.
Advertisement
ಬೆಂಗಳೂರು- ತುಮಕೂರು ಫ್ಲೈಓವರ್‍ನಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಪ್ರವೇಶ ನಿಬರ್ಂಧ ಮುಂದುವರಿಯಲಿದ್ದು, ಮುಂದಿನ ವರ್ಷ ಜನವರಿಗೆ ಮುಕ್ತವಾಗುವ ಸಾಧ್ಯತೆಗಳಿವೆ. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ನ ತಾಂತ್ರಿಕ ತಜ್ಞರ ತಂಡದ ಶಿಫಾರಸ್ಸಿನ ಮೇರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫ್ಲೈಓವರ್‍ನ ವ್ಯಾಪ್ತಿಯಲ್ಲಿರುವ ಹಳೆಯ ಕೇಬಲ್‍ಗಳನ್ನು ಹೊಸ ಪ್ರಿಸ್ಟ್ರೇಸ್ಡ್ ಕೇಬಲ್‍ಗಳೊಂದಿಗೆ ಬದಲಾಯಿಸಲು ಪ್ರಾರಂಭಿಸಿದೆ. ಆದರೆ ಕಾಮಗಾರಿ ಮುಗಿಯೋಕೆ ಇನ್ನೂ 5-6 ತಿಂಗಳು ಬೇಕಾಗಬಹುದು. 4 ಕಿ.ಮೀ ಉದ್ದದ ಮೇಲ್ಸೇತುವೆಯ ಉದ್ದಕ್ಕೂ ಹಳೆಯ ಕೇಬಲ್‍ಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ನಡೆಸೋಕೆ 30 ಕೋಟಿ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ.
Advertisement
Advertisement
ಕೇಬಲ್ ಅಳವಡಿಕೆ ಕಾರ್ಯ ಕಳೆದ 4-5 ತಿಂಗಳಿನಿಂದ ನಡೆದ್ರೂ ಕಾಮಗಾರಿ ಪ್ರಾಪರ್ ಆಗಿ ನಡೆದಿಲ್ಲ. ಹಳೆಯ ಕೇಬಲ್‍ಗಳಿಗೆ ಅತ್ಯಾಧುನಿಕ ಕೇಬಲ್ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಮೇಲ್ಸೇತುವೆಯ 102 ಮತ್ತು 103ನೇ ಕಂಬಗಳ ನಡುವೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಈ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು 2021ರ ಡಿಸೆಂಬರ್ 25ರಿಂದ ನಿಬರ್ಂಧಿಸಲಾಗಿತ್ತು. ಇದನ್ನೂ ಓದಿ: ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್ ಮಹಿಳೆ
Advertisement
ಕೇಬಲ್ ಸಮಸ್ಯೆ ಬಗ್ಗೆ ತಜ್ಞರು ಹೇಳೋ ಪ್ರಕಾರ, ಒಂದು ಕಂಬದಿಂದ ಇನ್ನೊಂದು ಕಂಬದ ನಡುವೆ ಜೋಡಿಸುವ ಸೆಗ್ಮೆಂಟ್‍ನಲ್ಲಿ ತೂತು ಮಾಡಿ ಕೇಬಲ್ ತೂರಿಸಿ ಎಳೆದು ಬೋಲ್ಟ್ ಹಾಕಲಾಗುತ್ತದೆ. ಕೇಬಲ್‍ಗಳನ್ನು ಎಳೆದು ಕಟ್ಟಿದ ಜಾಗವನ್ನು ಕಾಂಕ್ರೀಟ್‍ನಿಂದ ತುಂಬಿ ಗಟ್ಟಿಗೊಳಿಸಲಾಗುತ್ತದೆ. ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಅಳವಡಿಸಿದ ನಾಲ್ಕೈದು ಕೇಬಲ್‍ಗಳಲ್ಲಿ ಕೆಲವು ಶಿಥಿಲವಾಗಿರುವ ಸಾಧ್ಯತೆ ಇದೆ ಅಂತಾರೆ.
ರಾಜ್ಯದ ಅರ್ಧ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಇದೇ ಫ್ಲೈಓವರ್ ಮೂಲಕವಾಗಿಯೇ ಭಾರೀ ಗಾತ್ರದ ವಾಹನಗಳು ಸಂಚರಿಸಬೇಕು. ಆದರೆ ಪೀಕ್ ಹವರ್ ನಲ್ಲಿ ಸಂಚಾರಕ್ಕೆ ನಿಬರ್ಂಧ ಇರೋದ್ರಿಂದ ಭಾರೀ ಗಾತ್ರದ ವಾಹನ ಸವಾರರು ನಿತ್ಯ ಪರದಾಡ್ತಿದ್ದಾರೆ. ಈ ಪರದಾಟ ಮುಂದಿನ ವರ್ಷದ ತನಕವೂ ಇರಲಿದೆ.
Web Stories