– ದೇವಸ್ಥಾನದಲ್ಲಿ ಪಾಸ್ ಕೊಡಿ ಎಂದು ಸ್ಥಳೀಯರ ಗಲಾಟೆ
ಬೆಂಗಳೂರು: ತಿರುಪತಿ ಕಾಲ್ತುಳಿತ (Tirupati Stampede) ದುರಂತ ಪ್ರಕರಣದ ಬೆನ್ನಲ್ಲೇ ಬೆಂಗಳೂರಿನ ಟಿಟಿಡಿ ದೇವಸ್ಥಾನದ (TTD Temple) ಭದ್ರತೆಯನ್ನು ಪೊಲೀಸರು ಪರಿಶೀಲಿಸಿದ್ದಾರೆ.
Advertisement
ನಾಳೆ ವೈಕುಂಠ ಏಕಾದಶಿ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಟಿಟಿಡಿ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಾಳೆ ಭಕ್ತರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಯ ಪರಿಶೀಲಿಸಿದ್ದಾರೆ. ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳ ಅಳವಡಿಕೆ ಮಾಡಲಾಗಿದೆ. ದೇವಸ್ಥಾನದ ಅಕ್ಕಪಕ್ಕ ರಸ್ತೆಯ ವಾಹನಗಳನ್ನು ತೆರವು ಮಾಡಿದ್ದಾರೆ. ಇದನ್ನೂ ಓದಿ: Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?
Advertisement
Advertisement
ಟಿಟಿಡಿ ದೇವಸ್ಥಾನದ ಅಧೀಕ್ಷಕಿ ಜಯಂತಿ ಮಾತನಾಡಿ, ತಿರುಪತಿ ಪ್ರಕರಣದ ಬಳಿಕ ಈಗ ಪೊಲೀಸರು ಬಂದು ಪರಿಶೀಲನೆ ಮಾಡಿದರು. ಕ್ಯೂ ಸಿಸ್ಟಮ್ ಹೆಚ್ಚಳಕ್ಕೆ ಹೇಳಿದ್ದಾರೆ. ಕ್ಯೂ ಸಿಸ್ಟಮ್ ಇನ್ನೂ ಹೆಚ್ಚು ಮಾಡ್ತೀವಿ. ಬ್ಯಾರಿಕೇಡ್ ಹೆಚ್ಚು ಹಾಕೋಕೆ ಹೇಳಿದ್ದಾರೆ. ಅದರ ವ್ಯವಸ್ಥೆ ಮಾಡಿದ್ದೇವೆ. ಜೊತೆಗೆ ಹೆಚ್ಚು ಜನ ಸಿಬ್ಬಂದಿ ನೇಮಕ ಮಾಡುವಂತೆ ಸೂಚಿಸಿದ್ದಾರೆ. ಅದನ್ನು ಕೂಡ ಮಾಡಿಕೊಳ್ತಾ ಇದ್ದೇವೆ. ಯಾವುದೇ ತೊಂದರೆಯಾಗದAತೆ ಕ್ರಮ. ತಿರುಪತಿಯಿಂದ ಲಡ್ಡು ಕೂಡ ಸಂಜೆ ಬರುವ ನಿರೀಕ್ಷೆ ಇದೆ.
Advertisement
ಟಿಟಿಡಿ ದೇವಸ್ಥಾನದಲ್ಲಿ ಪಾಸ್ ಕೊಡಿ ಎಂದು ಸ್ಥಳೀಯರು ಗಲಾಟೆ ಮಾಡಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಪಾಸ್ ಕೊಡಿ ಎಂದು ಕೇಳಿದ್ದಾರೆ. ಆದರೆ, ಈ ಬಾರಿ ವಿಐಪಿ ಪಾಸ್ ನೀಡಲ್ಲ ಅಂತಾ ಅಧೀಕ್ಷಕಿ ಮಾಹಿತಿ ನೀಡಿದ್ದಾರೆ. ಕನಿಷ್ಟ ಪಕ್ಷ ಆಮಂತ್ರಣ ಪತ್ರಿಕೆಯನ್ನಾದ್ರೂ ನೀಡಿ ಎಂದು ಸ್ಥಳೀಯರು ಕೇಳಿದ್ದಾರೆ. ಹೀಗಾಗಿ, ದೇಗುಲದ ಅವರಣದಲ್ಲಿ ಗಲಾಟೆ ನಡೆಯಿತು. ತಿರುಪತಿ ಪ್ರಕರಣದ ಬಳಿಕ ಪಾಸ್ ನೀಡುವುದನ್ನು ನಿಲ್ಲಿಸಿದ್ದೇವೆ ಎಂದು ದೇವಸ್ಥಾನ ತಿಳಿಸಿದೆ. ಇದನ್ನೂ ಓದಿ: ಶತ್ರು ಸಂಹಾರಕ್ಕೆ ಜನಿಸಿದ ಉಗ್ರ ಸ್ವರೂಪಿಣಿ ʻಪ್ರತ್ಯಂಗಿರಾ ದೇವಿʼ ದರ್ಶನ ಪಡೆದ ಡಿಕೆಶಿ